ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡರ್ಬಾನ್‌ನಲ್ಲಿ ಅಸ್ಪೃಶ್ಯತೆ ಚರ್ಚೆ ನಡೆಸಲು ದೇವನೂರು ಒತ್ತಾಯ

By Super
|
Google Oneindia Kannada News

ಮೈಸೂರು : ಡರ್ಬಾನ್‌ನಲ್ಲಿ ನಡೆಯಲಿರುವ ವರ್ಣಭೇದ ನೀತಿ ಬಗೆಗಿನ ಜಾಗತಿಕ ಸಮಾವೇಶದಲ್ಲಿ ಭಾರತ ಅಸ್ಪೃಶ್ಯತೆ ಕುರಿತು ಚರ್ಚೆ ಮಾಡಬೇಕು. ಇಲ್ಲವಾದಲ್ಲಿ ಜನಾಂಗ ಭೇದ ಮತ್ತು ಸಹುಷ್ಣುತೆ ಕುರಿತ ರಾಷ್ಟ್ರೀಯ ಸಮಿತಿಗೆ ರಾಜೀನಾಮೆ ನೀಡುವೆ ಎಂದು ಸಾಹಿತಿ ದೇವನೂರ ಮಹಾದೇವ ಖಂಡಾತುಂಡಾಗಿ ಹೇಳಿದ್ದಾರೆ.

ಪ್ರಧಾನಿ ವಾಜಪೇಯಿ ಹಾಗೂ ವರ್ಣಭೇದ ನೀತಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರೂ ಆಗಿರುವ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಅವರಿಗೆ ದೇವನೂರು ಪತ್ರ ಬರೆದಿದ್ದು, ಡರ್ಬಾನ್‌ ಸಮಾವೇಶದಲ್ಲಿ ಅಸ್ಪೃಶ್ಯತೆ ಚರ್ಚೆ ಮಾಡುವಂತೆ ಪ್ರಾರ್ಥಿಸಿದ್ದಾರೆ.

ಹುಟ್ಟು ಆಧಾರಿತ ಜಾತಿ ತಾರತಮ್ಯದ ವಿರುದ್ಧ ದನಿಯೆತ್ತಲು ಸಂವಿಧಾನದಲ್ಲಿ ಕಟ್ಟು ಪಾಡುಗಳೇನೋ ಇವೆ. ಆದರೆ ಇವು ಮಾತಾಡಲು ಸರಿ. ಆಚರಣೆಯಲ್ಲಿ ಶೂನ್ಯ. ಉನ್ನತ ನುಡಿ- ಹೀನ ಪರಂಪರೆ ನಮ್ಮ ಪರಂಪರೆ. ಪ್ರಾಮಾಣಿಕತೆ ಮೂಲೆಗೆ ಸರಿದು ಹಿಪಾಕ್ರಸಿ ಮೆರೆಯುತ್ತಿದೆ. ಅಸ್ಪೃಶ್ಯತೆ ಬಗ್ಗೆ ಕಾಲೇಜು ಮಟ್ಟಕ್ಕಿಂತ ಮೀರಿ ಚರ್ಚೆಯಾಗುತ್ತಿಲ್ಲ. ಇಂಥಾ ಸನ್ನಿವೇಶದಲ್ಲಿ ಜಾಗತಿಕ ಸಮಾವೇಶದಲ್ಲಿ ಅಸ್ಪೃಶ್ಯತೆ ಕುರಿತು ಚರ್ಚೆಯಾಗಲಿ ಎನ್ನುವುದು ನನ್ನ ಪರಮ ಆಸೆ. ಅದು ಈಡೇರದಿದ್ದಲ್ಲಿ ರಾಜೀನಾಮೆ ನೀಡುವುದು ಖಂಡಿತ ಎಂದು ಜಸ್ವಂತ್‌ ಸಿಂಗ್‌ ಅವರಿಗೆ ಬರೆದಿರುವ ಪತ್ರದಲ್ಲಿ ದೇವನೂರು ತಿಳಿಸಿದ್ದಾರೆ.(ಇನ್ಫೋ ವಾರ್ತೆ)

English summary
Kannada litterateur Devanur Mahadeva urges Vajpayee and Jaswant singh to discuss on untouchablity in Darban conference
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X