ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸೈನ್ಯ ಕೊಡಿ, ಕಾಶ್ಮೀರದ ಸಮಸ್ಯೆ ಕೊನೆಗಾಣಿಸುತ್ತೇನೆ’- ಬಾಳಾಠಾಕ್ರೆ

By Super
|
Google Oneindia Kannada News

ಮುಂಬಯಿ : 'ಸೇನೆಯನ್ನು ನನಗೊಪ್ಪಿಸಿ, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತೇನೆ". ಆಗ್ರಾ ಶೃಂಗಸಭೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿಗೆ ಶಿವಸೇನೆಯ ಮುಖ್ಯಸ್ಥ ಬಾಳಾಠಾಕ್ರೆ ಎತ್ತಿರುವ ಧ್ವನಿಯಿದು.

ಶಿವಸೇನಾ ಭವನದಲ್ಲಿ ನಿವೃತ್ತ ಜನರಲ್‌ ಪ್ರೇಮ್‌ನಾಥ್‌ ಹೂನ್‌ರೊಂದಿಗೆ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಠಾಕ್ರೆ- ಆಗ್ರಾ ಶೃಂಗಸಭೆ 53 ವರ್ಷಗಳಷ್ಟು ಹಳೆಯದಾದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗುವ ಬಗೆಗೆ ಶಂಕೆಗಳನ್ನು ವ್ಯಕ್ತಪಡಿಸಿದರು.

ಸೂಕ್ಷ್ಮ ವಿಷಯಗಳ ಬಗ್ಗೆ ಶಿವಸೇನೆಯ ಅಭಿಪ್ರಾಯವನ್ನು ಪಡೆಯದಿರುವ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ನಡವಳಿಕೆಯನ್ನು ಆಕ್ಷೇಪಿಸಿದ ಠಾಕ್ರೆ, ದೇಶದ ಹಿತದೃಷ್ಟಿಯಿಂದಾಗಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಹೇಳಿದರು.

ಗುಂಡಿನ ಚಕಮಕಿ ನಿಲ್ಲಿಸುವಂತೆ ಆಗ್ರಹಪಡಿಸಿ
ಪ್ರಕ್ಷುಬ್ಧ ಪ್ರದೇಶಗಳಲ್ಲಿ ಗುಂಡಿನ ಚಕಮಕಿಯನ್ನು ನಿಲ್ಲಿಸಲು ಹಾಗೂ ಭೂಭಾಗಗಳನ್ನು ಗುರ್ತಿಸಿರುವ ನಕ್ಷೆಗಳನ್ನು ಬದಲಾಯಿಸಿಕೊಳ್ಳಲು ಪಾಕಿಸ್ತಾನವನ್ನು ಒತ್ತಾಯಿಸಬೇಕು ಎಂದು ಸಿಯಾಚಿನ್‌ ಕದನದಲ್ಲಿ ಹೋರಾಡಿದ ಅನುಭವವಿರುವ ನಿವೃತ್ತ ಜನರಲ್‌ ಪ್ರೇಮ್‌ನಾಥ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗಡಿ ಪ್ರದೇಶದಲ್ಲಿ ಸೇನಾ ಜಮಾವಣೆಯನ್ನು ಕಡಿತಗೊಳಿಸುವಂತೆಯೂ ಪಾಕಿಸ್ತಾನವನ್ನು ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು.

ನಿವೃತ್ತ ಸೇನಾ ಅಧಿಕಾರಿಗಳ ಪಡೆಯಾಂದನ್ನು ಶಿವಸೇನೆ ರೂಪಿಸುತ್ತಿದ್ದು , ಈ ಪಡೆ ಗಡಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ಸರ್ಕಾರದ ರಕ್ಷಣಾ ವೆಚ್ಚ ಕಡಿಮೆಯಾಗಲಿದೆ ಎಂದು ನಿವೃತ್ತ ಜನರಲ್‌ ಪ್ರೇಮ್‌ನಾಥ್‌ ಹೇಳಿದರು.(ಇನ್ಫೋ ವಾರ್ತೆ)

English summary
Give me the Army, I will find a solution to the Kashmir problem, roared Shiv Sena chief Bal Thackeray
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X