Get Updates
Get notified of breaking news, exclusive insights, and must-see stories!

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪುನಾರಚನೆಗೆ ಶಿಫಾರಸು

ಬೆಂಗಳೂರು : ವಿದ್ಯಾರ್ಥಿ ದೆಸೆಯ ಮಹತ್ವದ ಘಟ್ಟವಾದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ತಡೆಯಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಪುನಾರಚಿಸುವಂತೆ ಸಂಸದೀಯ ವ್ಯವಹಾರಗಳ ವಿಷಯ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.

ಪ್ರಯೋಜನವಿಲ್ಲದ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೀಮಿತವಾದ ವಿಭಾಗೀಯ ಮಟ್ಟದ ಜಂಟಿ ನಿರ್ದೇಶಕರ ಹುದ್ದೆಯನ್ನು ರದ್ದು ಪಡಿಸುವಂತೆ ಕೂಡ ಸಮಿತಿ ಸಲಹೆ ಮಾಡಿದೆ. ಈ ವಿಷಯವನ್ನು ಸಮಿತಿಯ ಅಧ್ಯಕ್ಷ ವಿ.ಆರ್‌. ಸುದರ್ಶನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಈ ಬಾರಿಯ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಪ್ರಕ್ರಿಯೆ. ಹಲವು ವಿವಾದಗಳಿಗೆ ನಾಂದಿ ಹಾಡಿತ್ತು. ಪ್ರಶ್ನೆ ಪತ್ರಿಕೆಯ ಬಯಲು, ಫಲಿತಾಂಶ ವಿಳಂಬ, ಕೆಲವು ವಿದ್ಯಾರ್ಥಿಗಳ ಫಲಿತಾಂಶ ತಡೆ. ಹೀಗೆ ಹಲವು ಗೊಂದಲಗಳು ಉಂಟಾಗಿದ್ದವು.

ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ವಿಧಾನ ಪರಿಷತ್‌ ಸದಸ್ಯ ವಿ.ಆರ್‌. ಸುದರ್ಶನ್‌ ನೇತೃತ್ವದ ಸಮಿತಿಯು ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಆಗುತ್ತಿರುವ ಲೋಪಗಳನ್ನು ತಡೆಯಲು ಹಲವು ಸುಧಾರಣೋಪಾಯಗಳನ್ನು ಸೂಚಿಸಿದೆ. ಶಿಕ್ಷಣ ತಜ್ಞರ ಸಲಹೆಯ ಮೇರೆಗೆ ಈ ಶಿಫಾರಸುಗಳನ್ನು ಮಾಡಲಾಗಿದೆ. ಸಮಿತಿಯ ಇತರ ಶಿಫಾರಸುಗಳು:

  • ಸಿ.ಇ.ಟಿ. ಘಟಕ ಉಳಿಸುವ 3 ಕೋಟಿ ರುಪಾಯಿಗಳನ್ನು ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಬೇಕು.
  • ಪಿ.ಯು.ಸಿ. ಪ್ರವೇಶಾವಕಾಶ ಗೊಂದಲ ನಿವಾರಣೆಗೆ ಮೊದಲು ನಗರ ಪ್ರದೇಶದಲ್ಲಿ ಮೆರಿಟ್‌ ಹಾಗೂ ರೋಸ್ಟರ್‌ ಪದ್ಧತಿ ಅಳವಡಿಕೆ ಶಿಫಾರಸು. ಕಾಲಾನಂತರ ಪ್ರಾದೇಶಿಕ ಮಟ್ಟಕ್ಕೂ ಈ ಪದ್ಧತಿಯ ವಿಸ್ತರಣೆ ಸಲಹೆ.
  • ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರಿಗೆ ಸೀಮಿತವಾಗಿರುವ ಟಿಸಿಎಚ್‌ ಅನ್ನು ಬಿಇಡಿ ಆಗಿ ಪರಿವರ್ತಿಸಲು ಸಲಹೆ.
  • ನೂತನ ಬಿಇಡಿ ಕಾಲೇಜುಗಳಿಗೆ ಅನುಮತಿ ಬೇಡ
  • ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಇಂಗ್ಲಿಷ್‌ ಶಿಕ್ಷಕರ ನೇಮಕ ಸಲಹೆ. ಆದರೆ, ಕನ್ನಡಕ್ಕೆ ಚ್ಯುತಿ ಆಗದಂತೆ ಎಚ್ಚರ ವಹಿಸಬೇಕು.
  • ಗ್ರಂಥಾಲಯಗಳನ್ನು ಮಾಹಿತಿ ಕೇಂದ್ರಗಳನ್ನಾಗಿ ಪರಿವರ್ತಿಸಲು ಸಲಹೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+