ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧ ಹೆಚ್ಚಲು ಹುಡುಗಿಯರು ತೊಡುವ ಡ್ರೆಸ್ಸೂ ಕಾರಣವಂತೆ!

By Super
|
Google Oneindia Kannada News

ಮಂಗಳೂರು : ಅಪರಾಧ ಹೆಚ್ಚಲು ಏನು ಕಾರಣ? ಬಡತನವೇ? ನಿರುದ್ಯೋಗವೇ?.. ಮಂಗಳೂರು ಇನ್ಸ್‌ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಎಂ.ಐ.ಎಫ್‌.ಟಿ) ಸಮೀಕ್ಷೆ ಹೇಳುವುದೇ ಬೇರೆ..

ಎಂಐಎಫ್‌ಟಿ ಪ್ರಕಾರ ಅಪರಾಧ ಹೆಚ್ಚಳಕ್ಕೆ ಹುಡುಗಿಯರು ತೊಡುವ ಆಧುನಿಕ ಹಾಗೂ ಮಾದಕ ಉಡುಗೆ ತೊಡುಗೆಗಳೂ ಕಾರಣವಂತೆ. ಎತ್ತಣ ಮಾಮರ, ಎತ್ತಣ ಕೋಗಿಲೆ... ಅಂತೀರಾ? ನೀವು ಏನಾದರೂ ಅನ್ನಿ ಇನ್ಸ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳು ಭಾರತ ಹಾಗೂ ಬಾಂಗ್ಲಾದೇಶದಲ್ಲೆಲ್ಲಾ ತಿರುಗಾಡಿ ಸುಮಾರು 125 ಕಾಲೇಜುಗಳ 20 ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರ ಅನಿಸಿಕೆಯನ್ನು ಸಂಗ್ರಹಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.

ಈ ವಿಷಯವನ್ನು ಎಂಐಎಫ್‌ಟಿಯ ಮೇನೇಜಿಂಗ್‌ ಟ್ರಸ್ಟಿ ಹಾಗೂ ಸ್ಥಾಪಕರಾದ ಎಂ.ಜಿ. ಹೆಗ್ಡೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮೀಕ್ಷೆಗೆ ಉತ್ತರ ನೀಡಿದ ಸುಮಾರು 75ರಷ್ಟು ಮಂದಿ ಯುವತಿಯರು ತೊಡುವ ಅತ್ಯಾಧುನಿಕ ಹಾಗೂ ಮಾದಕ ಉಡುಗೆ ತೊಡುಗೆಗಳಿಂದ ಕೂಡ ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಶೇ 24ರಷ್ಟು ಮಂದಿ ಮಾದಕ ಉಡುಗೆ ಅಪರಾಧ ಹೆಚ್ಚಳಕ್ಕೆ ಕಾರಣವಲ್ಲ ಎಂದಿದ್ದಾರೆ. 100ಕ್ಕೆ 92 ಮಂದಿ ಆಧುನಿಕ ರೀತಿಯ ಫ್ಯಾಷನ್‌ ಶೋ, ಸೌಂದರ್ಯ ಸ್ಪರ್ಧೆಗಳು ಹೊಸತನಕ್ಕೆ ಕಾರಣ ಎಂದರೆ, 6 ಜನ ಇಲ್ಲ ಎನ್ನುತ್ತಾರೆ. ಶೇ 55 ರಷ್ಟು ಮಂದಿ ಹತ್ತಿ ಬಟ್ಟೆಯನ್ನು ಇಷ್ಟಪಟ್ಟರೆ, 30ರಷ್ಟು ಜನ ಉಣ್ಣೆ ಬಟ್ಟೆ, ಪ್ರತಿಶತ 15ರಷ್ಟು ಮಂದಿ ಇನ್ನಿತರ ಬಟ್ಟೆಗಳನ್ನು ಇಷ್ಟಪಡುತ್ತಾರೆ.

100ಕ್ಕೆ 61ರಷ್ಟು ಯುವಜನರು ಸಮಾಜದ ಎಲ್ಲ ವರ್ಗಗಳಿಗೂ ಫ್ಯಾಷನ್‌ ಅನ್ವಯಿಸುತ್ತದೆ ಎಂದರೆ, ಶೇ. 35ರಷ್ಟು ಯುವಕರು ಫ್ಯಾಷನ್‌ ಕೇವಲ ಶ್ರೀಮಂತರ ಸ್ವತ್ತು ಎನ್ನುತ್ತಾರೆ. ಕಾಲೇಜು ಅವಧಿಯಲ್ಲಿ ಚೂಡಿದಾರೇ ಬೆಸ್ಟ್‌ ಎಂದು 50ರಷ್ಟು ಮಂದಿ ಅಭಿಪ್ರಾಯಪಟ್ಟರೆ, ಆಧುನಿಕ ಹಾಗೂ ಪಾಶ್ಚಿಮಾತ್ಯ ಉಡುಗೆಯನ್ನು ಶೇ.38ರಷ್ಟು ಮಂದಿ ಬೆಂಬಲಿಸಿದ್ದಾರೆ. ಆಂಧ್ರಪ್ರದೇಶ, ಗೋವಾ, ಕರ್ನಾಟಕ, ವೆಸ್ಟ್‌ ಬೆಂಗಾಲ್‌, ಗುಜರಾತ್‌, ಜಾರ್ಕಂಡ್‌, ಬಿಹಾರ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕಾಲೇಜು ವಿದ್ಯಾರ್ಥಿಗಳನ್ನು ಸಮೀಕ್ಷೆಯ ಕಾಲದಲ್ಲಿ ಪ್ರಶ್ನಿಸಲಾಗಿದೆ ಎಂದೂ ಹೆಗಡೆ ತಿಳಿಸಿದ್ದಾರೆ. ಕಾಲೇಜಿನ 50 ವಿದ್ಯಾರ್ಥಿಗಳು ಸತತವಾಗಿ 20 ದಿನ ಈ ಸಮೀಕ್ಷೆ ಕೈಗೊಂಡಿದ್ದರು.
(ಮಂಗಳೂರು ಪ್ರತಿನಿಧಿಯಿಂದ)

English summary
Girls in mod attaire increases incidence of crime says Mangalore college students survey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X