ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಷ್‌ ಆಡಳಿತ ವರ್ಗಕ್ಕೆ ಸೇರ್ಪಡೆಯಾದ ಭಾರತೀಯ ‘ಬಾಬ್ಬಿ’

By Staff
|
Google Oneindia Kannada News

ವಾಷಿಂಗ್ಟನ್‌ : ಡಾರ್ಲಿಂಗ್‌ ಆಫ್‌ ವಾಷಿಂಗ್ಟನ್‌ ಎಂದೇ ಹೆಸರಾದ ಭಾರತದ ಫಿಯೂಷ್‌ ಬಾಬ್ಬಿ ಜಿಂದಾಲ್‌ ಅವರನ್ನು ಅಮೇರಿಕಾದ ಸೆನೆಟ್‌ನ ಹಣಕಾಸು ಸಮಿತಿಗೆ ಅಧ್ಯಕ್ಷ ಬುಷ್‌ ನೇಮಕ ಮಾಡುವುದರೊಂದಿಗೆ, ಅತ್ಯಂತ ಪ್ರಭಾವಶಾಲಿ ಅಮೇರಿಕನ್‌- ಭಾರತೀಯನಾಗಿ ಬಾಬ್ಬಿ ಹೊರ ಹೊಮ್ಮಿದ್ದಾರೆ.

ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ ಕಿರಿಯ ಏಷ್ಯನ್‌ ಮೂಲದ ವ್ಯಕ್ತಿಯಾಬ್ಬ ಅಮೇರಿಕಾದ ಜವಾಬ್ದಾರಿ ಸ್ಥಾನ ತುಂಬಿದ್ದಾರೆ. ಈ ಮೂಲಕ ದಾಖಲೆಯ ಪುಸ್ತಕಗಳಲ್ಲಿ ಮತ್ತೊಮ್ಮೆ ತನ್ನ ಹೆಸರನ್ನು ಬಾಬ್ಬಿ ದಾಖಲಿಸಿದ್ದಾರೆ. ಅಂದಹಾಗೆ ಅವರ ವಯಸ್ಸು 28 ವರ್ಷ. ಬಾಬ್ಬಿ ಅವರು ಈಗಾಗಲೇ, ಆರೋಗ್ಯ ಹಾಗೂ ಮಾನವ ಸಂಪನ್ಮೂಲ ಸೇವೆಗಳ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಸ್ಮರಿಸಬಹುದು.

ಈ ಮುನ್ನ ಯೂನಿವರ್ಸಿಟಿ ಆಫ್‌ ಲೂಸಿಯಾನ ಸಿಸ್ಟಂನ ಅಧ್ಯಕ್ಷರಾಗಿಯೂ ಬಾಬ್ಬಿ ಕಾರ್ಯ ನಿರ್ವಹಿಸಿದ್ದರು. ಇದು ಅಮೇರಿಕಾದ ಅತ್ಯಂತ ದೊಡ್ಡ ಯೂನಿವರ್ಸಿಟಿ ಸಿಸ್ಟಂ ಎನ್ನುವುದು ಗಮನಾರ್ಹ. ಬಾಬ್ಬಿಗೆ ಉನ್ನತ ಹುದ್ದೆಗಳ ಅನುಭವ ಇದೇ ಮೊದಲಲ್ಲವಾದರೂ, ಪ್ರಸ್ತುತ ಸೆನೆಟ್‌ನಲ್ಲಿನ ಹುದ್ದೆ ಅವರನ್ನು ಮೊದಲ ಕ್ರಮಾಂಕದ ಅಮೇರಿಕನ್‌- ಭಾರತೀಯನನ್ನಾಗಿಸಿದೆ.

ಅಮರ್‌ ಹಾಗೂ ರಾಜ್‌ ಜಿಂದಾಲ್‌ ದಂಪತಿಗಳ ಚೊಚ್ಚಿಲ ಪುತ್ರ ಬಾಬ್ಬಿ . ಅಪ್ಪ ಅಮ್ಮ ಇಬ್ಬರೂ ಭಾರತದ ಗ್ರಾಮೀಣ ಭಾಗದಿಂದ ಹೊರ ಹೊಮ್ಮಿದ ಪ್ರತಿಭೆಗಳು. ಬಡತನದ ಬದುಕನ್ನು ಹೋರಾಟದಿಂದ ಹಸನಾಗಿಸಿಕೊಂಡ ಈ ದಂಪತಿಗಳ ಪಾಲಿಗೆ ಅಮೂಲ್ಯ ಆಸ್ತಿ ಬಾಬ್ಬಿ . ಇನ್ನೂ ಅವಿವಾಹಿತರಾಗಿರುವ ಬಾಬ್ಬಿ ಗೆ, ಕೆಲವು ನಿಮಿಷ ಬಿಡುವು ಸಿಕ್ಕರೆ ಟೆನ್ನಿಸ್‌ ಆಡಲಿಕ್ಕೆ ಹಾಗೂ ಗೆಳೆಯರ ಹತ್ತಿರ ಹರಟಲಿಕ್ಕೆ ಇಷ್ಟ . ಓದುವುದು ಕೂಡ ಅವರ ಬಿಡುವಿನ ಕಾರ್ಯಕ್ರಮಗಳ ಪಟ್ಟಿಯಲ್ಲಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X