Get Updates
Get notified of breaking news, exclusive insights, and must-see stories!

ನಡೆದಾಡುವ ವಿಶ್ವಕೋಶ 3 ವರ್ಷಗಳ ಈ ಪುಟ್ಟ ಪೋರ

ಬೆಂಗಳೂರು : ಈ ಪೋರನ ಹೆಸರು ಆರ್‌. ಪ್ರಥಮ್‌ ಭಟ್‌. ನೆನಪಿನಂಗಳದ ವಿಷಯಗಳನ್ನೆಲ್ಲಾ ಹೊರಹಾಕುವಲ್ಲಿ ಈತ ನಿಜಕ್ಕೂ ಪ್ರಪ್ರಥಮ. ವಯಸ್ಸು ಎಷ್ಟು ಗೊತ್ತೆ? ಕೇವಲ 2ವರ್ಷ 8 ತಿಂಗಳು. ಹಾಲು ಕುಡಿಯುತ್ತಾ ಅಮ್ಮನ ಮಡಿಲಲ್ಲಿ ಆಟವಾಡುವ ವಯಸ್ಸಿನ ಈ ಬಾಲಕನ ನೆನಪಿನ ಶಕ್ತಿಯಂತೂ ಅದ್ಭುತ.

ಅಮೆರಿಕದ ರಾಜಧಾನಿ ಯಾವುದು?, ವೈಟ್‌ ಹೌಸ್‌ ಎಲ್ಲಿದೆ? ರವೀಂದ್ರನಾಥ ಟಾಕೂರರು ಬರೆದ ಕೃತಿ ಯಾವುದು?, ಗುರುತ್ವಾಕರ್ಷಣೆಯ ತತ್ವ ಕಂಡು ಹಿಡಿದದ್ದು ಯಾರು? ಗೀತಾಂಜಲಿ ಬರೆದದ್ದು ಯಾರು? ಎಂಜಿನಿಯರ್‌ಗಳ ದಿನ ಎಂದು? ಡಾಕ್ಟರ್ಸ್‌ ಡೇ ಯಾವತ್ತು ? ಹೀಗೆ ಅಮ್ಮ ಕೇಳುತ್ತಾ ಹೋಗುವ ಎಲ್ಲ ಪ್ರಶ್ನೆಗಳಿಗೂ ಈ ಬಾಲಕ ಉತ್ತರಿಸುತ್ತಾ ಸಾಗುತ್ತಾನೆ. ಸಂಸ್ಕೃತ ಶ್ಲೋಕಗಳೂ ಈ ಪುಟ್ಟ ಪೋರನ ನಾಲಿಗೆಯಲ್ಲಿ ನರ್ತಿಸುತ್ತವೆ.

ಆರ್‌. ಪ್ರಥಮ್‌ ಭಟ್‌ ಮೈಸೂರಿನವ. ಒಂದು ಅರ್ಥದಲ್ಲಿ ನಡೆದಾಡುವ ಕಂಪ್ಯೂಟರ್‌. ತನ್ನ ವಯಸ್ಸಿನ ಇತರ ಮಕ್ಕಳಂತೆಯೇ ಚೇಷ್ಟೇ ಮಾಡುತ್ತಾನಾದರೂ, ಆಟ ಎಂದರೇ ಇವನಿಗೆ ಅಲರ್ಜಿ ಎನ್ನುತ್ತಾರೆ ಇವನ ತಾಯಿ. ಶುಕ್ರವಾರ ಈ ಪುಟ್ಟ ಬಾಲಕನ ನೆನಪಿನ ಶಕ್ತಿಯನ್ನು ಪರೀಕ್ಷಿಸುವ ಸಂದರ್ಭ ಬೆಂಗಳೂರಿನ ಪತ್ರಕರ್ತರ ತಂಡಕ್ಕೂ ದೊರಕಿತು. ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ತಂದೆ ತಾಯಿಯ ತೊಡೆಯ ಮೇಲೆ ಆಟ ವಾಡುತ್ತಾ ಕೇಳಿದ ಎಲ್ಲ ಪ್ರಶ್ನೆಗಳಿಗೂ ಚೆಲ್ಲಾಟವಾಡುತ್ತಲೇ ಪ್ರಥಮ್‌ ಉತ್ತರಿಸಿದ. ಪತ್ರಕರ್ತರನ್ನು ನಿಬ್ಬೆರಗು ಗೊಳಿಸಿದ.

ತಮ್ಮ ಎರಡೂವರೆ ವರ್ಷದ ಮಗುವಿನ ಅಸಾಧಾರಣ ನೆನಪಿನ ಶಕ್ತಿಯ ಬಗ್ಗೆ ಅಪಾರ ಹೆಮ್ಮೆ ಹೊಂದಿರುವ ಪಾಲಕರು ಈ ಬಾಲಕನ ಹೆಸರನ್ನು ಲಿಮ್ಕಾ ದಾಖಲೆಗಳಲ್ಲಿ ಸೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಪ್ರಥಮನ ತಂದೆ - ತಾಯಿಗಳ ಪ್ರಕಾರ, ಈ ಪುಟ್ಟ ಪೋರ 190 ರಾಷ್ಟ್ರಗಳ ರಾಜಧಾನಿಯ ಯಾವುದೆಂದು ಹೇಳುತ್ತಾನಂತೆ. 124 ಭಾರತೀಯ ವಿಜ್ಞಾನಿಗಳನ್ನು ಗುರುತಿಸುತ್ತಾನಂತೆ. 150ಕ್ಕೂ ಹೆಚ್ಚು ಶ್ರೇಷ್ಠ ಕೃತಿಗಳ ಹೆಸರು ಹೇಳಿದೊಡನೆಯೇ ಅದನ್ನು ಬರೆದರಾರು ಎಂದು ಥಟ್ಟನೆ ಉತ್ತರಿಸುತ್ತಾನೆ.

180 ರಾಷ್ಟ್ರಗಳ ರಾಷ್ಟ್ರಧ್ವಜವನ್ನು ನೋಡಿ ಇದು ಈ ದೇಶದ ರಾಷ್ಟ್ರಧ್ವಜ ಎಂದು ಹೇಳುತ್ತಾನೆ. 220ಕ್ಕೂ ಹೆಚ್ಚು ಜೀವಿಗಳು, 28 ಬಗೆಯ ಚಿಟ್ಟೆಗಳನ್ನು ಗುರುತಿಸುತ್ತಾನೆ. ಎರಡೂವರೆ ವರ್ಷದ ಮಗುವಿಗೆ ಇಷ್ಟೇಲ್ಲಾ ಸಾಧ್ಯವೇ? ಖಂಡಿತಾ ಸಾಧ್ಯ ಎಂಬುದು ತಾಯಿ ವಾಣಿ ಭಟ್‌ ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲಾ ಪ್ರಥಮ ಕೊಡುತ್ತಿದ್ದ ಉತ್ತರ ಸಾಬೀತು ಪಡಿಸುತ್ತಿತ್ತು.

8 ತಿಂಗಳ ಬಾಲಕನಾಗಿದ್ದಾಗಲೇ ಶರೀರದ ಅಂಗಾಂಗಗಳನ್ನು ಗುರುತಿಸುತ್ತಿದ್ದ ಪ್ರಥಮ್‌, ಪುಸ್ತಕಗಳಲ್ಲಿ ನೋಡಿದ ಚಿತ್ರಗಳ ಹೆಸರನ್ನೂ ಹೇಳುತ್ತಿದ್ದ. ಈತನ ನೆನಪಿನ ಶಕ್ತಿಯ ಕಂಡ ಪ್ರಥಮನ ಚಿಕ್ಕಮ್ಮ ಹಲವು ರಾಷ್ಟ್ರಗಳ ರಾಜಧಾನಿ, ಧ್ವಜ ಎಲ್ಲವನ್ನೂ ತೋರಿಸಿ, ನಿತ್ಯವೂ ಪ್ರಥಮನ ನೆನಪಿನ ಶಕ್ತಿ ಪರೀಕ್ಷಿಸುತ್ತಿದ್ದರು. ಇದುವೇ ಇಂದು ತಮ್ಮ ಬಾಲಕ ನಡೆದಾಡುವ ಕಂಪ್ಯೂಟರ್‌ನಂತಾಗಲು ಕಾರಣ ಎಂಬುದು ತಾಯಿಯ ಅನಿಸಿಕೆ.

ಪ್ರಥಮ್‌ನ ತಂದೆ ರಾಜೇಂದ್ರ ಪ್ರಸಾದ್‌ ಭಟ್‌ ಮೈಸೂರಲ್ಲಿ ಹೊಟೆಲ್‌ ಉದ್ಯಮಿ. ಇತರ ಮಕ್ಕಳಂತೆ ಆಟವಾಡದೆ, ಸದಾ ಪುಸ್ತಕಗಳ ಸುತ್ತಾ ಹೊಸ ವಿಷಯ ತಿಳಿಯಲು ಹವಣಿಸುವ ತಮ್ಮ ಮಗುವಿನ ಬಗ್ಗೆ ತಂದೆ - ತಾಯಿಗಳಿಬ್ಬರಿಗೂ ಅಪಾರ ಹೆಮ್ಮೆ. ಕನ್ನಡದ ಈ ಪುಟ್ಟ ಪೋರನ ಹೆಸರು ದಾಖಲೆಗಳ ಪುಸ್ತಕದಲ್ಲಿ ಸೇರಲಿ ಎಂದು ಆಶಿಸೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+