ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನಲ್ಲಿ ಭೂಕಂಪದ ಗುಲ್ಲು,ಸಿದ್ಧವಾಗುತ್ತಿವೆ ಗಂಟೂಮೂಟೆಗಳು

By Super
|
Google Oneindia Kannada News

ಗುಜರಾತ್‌ : ದೇಶದೆಲ್ಲೆಡೆ ರಂಗಿನಾಟಕ್ಕೆ ಜನ ಪಿಚಕಾರಿ ರೆಡಿ ಮಾಡಿಕಳ್ಳುತ್ತಿದ್ದರೆ ಗುಜರಾತ್‌ ಮಂದಿ ಹಬ್ಬದ ರಜೆಯನ್ನು ಪಡೆದು ವಲಸೆ ಹೋಗುತ್ತಿದ್ದಾರೆ. ಈಗ ಭೂಕಂಪದ ಸದ್ದು ಪೂರ್ಣವಾಗಿ ಉಡುಗಿಹೋಗಿದೆ ನಿಜ. ಆದರೂ ಮಾರ್ಚ್‌ 10ರ ಶನಿವಾರ ಮತ್ತೆ ಭೂಕಂಪ ಆಗುತ್ತದಂತೆ ಅನ್ನುವ ಗುಲ್ಲು ರಾಜ್ಯಾದ್ಯಂತ ಹಬ್ಬಿದ್ದು, ಬದುಕುಳಿದಿರುವ ಜನರನ್ನು ಭಯಗ್ರಸ್ತರಾಗಿಸಿದೆ.

ಭೂಕಂಪನದ ಮುನ್ಸೂಚನೆ ನೀಡುವ ವೆಬ್‌ಸೈಟೊಂದು ಪ್ರಕಟಿಸಿರುವ ಮಾಹಿತಿಯೇ ಇಷ್ಟಕ್ಕೆಲ್ಲಾ ಕಾರಣ. ಆ ವೆಬ್‌ಸೈಟ್‌ ಹೇಳುವಂತೆ ಗುಜರಾತಿನಲ್ಲಿ ಮಾರ್ಚ್‌ 10ರಂದು 6.6 ರಿಕ್ಟರ್‌ ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಲಿದೆ. ಸ್ಥಳೀಯ ಆಡಳಿತ, ಹವಾಮಾನ ಇಲಾಖೆಯವರನ್ನು ಸಂಪರ್ಕಿಸಿ ಅದು ನಿಜವಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿದೆ. ಕಳೆದೆರಡು ದಿನಗಳಲ್ಲಿ 3.4 ರಿಕ್ಟರ್‌ ತೀವ್ರತೆಯ ಒಂದೇ ಒಂದು ಲಘು ಭೂಕಂಪ ಸಂಭವಿಸಿದ್ದು, ಈಗ ಪರಿಸ್ಥಿತಿ ತಣ್ಣಗಾಗಿದೆ. 3 ದಿನಗಳ ಕಾಲ ಸತತವಾಗಿ 4.5 ರಿಕ್ಟರ್‌ ತೀವ್ರತೆಯ ಒಂದೂ ಲಘು ಭೂಕಂಪ ಸಂಭವಿಸದಿದ್ದಲ್ಲಿ, ಭೂಮಿಯ ಒಳಪದರಿನ ದೋಷ ನಿವಾರಣೆಯಾಗಿದೆ ಎಂದೇ ಅರ್ಥ ಎನ್ನುತ್ತಾರೆ ಹವಾಮಾನ ಇಲಾಖೆಯವರು.

ದೊಡ್ಡ ಕಟ್ಟಡಗಳಲ್ಲಿ ವಾಸಿಸುವ ಜನ ಹೊರಗೆ ಟೆಂಟ್‌ ಹಾಕಿಕೊಳ್ಳುವ ತರಾತುರಿಯಲ್ಲಿದ್ದಾರೆ. ವಾರಾಂತ್ಯದ ರಜೆಗೆ ಹೋಳಿ ಹಬ್ಬದ ರಜೆಯನ್ನೂ ಸೇರಿಸಿಕೊಂಡು, ಬೇರೆ ಊರಿಗೆ ಮಂದಿ ಪೇರಿ ಕೀಳುತ್ತಿದ್ದಾರೆ; ಮಾರ್ಚ್‌ 10 ಕಳೆದ ನಂತರ ವಾಪಸ್ಸಾಗೋಣ ಎನ್ನುತ್ತಾ. ನಿರೀಕ್ಷಿತ ಭೂಕಂಪದ ಕೇಂದ್ರ ಕಛ್‌ ಎಂದೂ ವೆಬ್‌ಸೈಟ್‌ ಹೇಳುತ್ತದೆ. ವೆಬ್‌ಸೈಟ್‌ ಹೇಳುತ್ತಿರುವುದು ಸುಳ್ಳು. ಭೂಕಂಪ ಆಗೋದಿಲ್ಲ ಅಂತ ಸರ್ಕಾರ ಮಾಧ್ಯಮಗಳ ಮೂಲಕ ಜನರಿಗೆ ತಿಳಿಹೇಳುವ ಯತ್ನ ಮಾಡುತ್ತಿದೆ. ಜನಮನದಲ್ಲಿ ಬೇರೂರಿರುವ ಆತಂಕ ಅದ್ಯಾವುದಕ್ಕೂ ಕಿವಿಗೊಡುತ್ತಿಲ್ಲ. ನೋಡನೋಡುತ್ತಿರುವಂತೆಯೇ ಗಂಟೂಮೂಟೆಗಳು ಸಿದ್ಧವಾಗುತ್ತಿವೆ. (ಇನ್ಫೋ ವಾರ್ತೆ)

English summary
A quake forecast website fears Gujrat with a say of another quake
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X