‘ಗುಜರಾತ್ ದುರಾದೃಷ್ಟ : ಎಚ್ಚರಿಕೆಗೊಂದು ಗಂಟೆ’
ವದೆಹಲಿ : ಸಿದ್ಧತೆ, ಜಾಗೃತಿ ಹಾಗೂ ಅನಾಹುತಗಳ ತಡೆಗಟ್ಟುವಿಕೆ ಕುರಿತಂತೆ ನೀಲಿ ನಕ್ಷೆ ರಚಿಸಬೇಕೆಂಬ ಪಾಠವನ್ನು ಗುಜರಾತ್ ದುರಂತ ಕಲಿಸಿದೆ. ಪುನರ್ ನಿರ್ಮಾಣ ಕಾರ್ಯದಲ್ಲಾದರೂ ಇದನ್ನು ಪಾಲಿಸಬೇಕು ಎಂದು ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಖಾತೆ ಕೇಂದ್ರ ಸಚಿವ ಜಗ್‌ಮೋಹನ್ ಸಲಹೆ ಕೊಟ್ಟಿದ್ದಾರೆ.
ಜನರಲ್ಲಿ ಜಾಗೃತಿಯಿದ್ದು, ಕಟ್ಟಡಗಳ ನಿರ್ಮಾಣದ ಬಗೆಗಿನ ನಗರಸಭೆಯ ಉಪನಿಯಮಗಳನ್ನು ಗಾಳಿಗೆ ತೂರದೇ ಇದ್ದಿದ್ದರೆ ಅಹ್ಮದಾಬಾದ್ ಸೇರಿದಂತೆ ಗುಜರಾತ್‌ನ ಬಹುತೇಕ ಭೂಕಂಪ ಪೀಡಿತ ನಗರಗಳಲ್ಲಿ ಇಷ್ಟೊಂದು ಹೆಣಗಳು ಉರುಳುತ್ತಿರಲಿಲ್ಲ ಎಂದು ಸಚಿವರು 'ಗುಜರಾತ್ ದುರಾದೃಷ್ಟ : ಎಚ್ಚರಿಕೆಗೊಂದು ಗಂಟೆ" ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಗುರುವಾರ ಮಾತನಾಡಿದರು. ಮಾತನಾಡಿದರು ಅನ್ನೋದಕ್ಕಿಂತ ಪಾಠ ಮಾಡಿದರು ಎಂಬುದೇ ಸೂಕ್ತ.
ಭುಜ್, ಬಚ್ಚಾಉ, ಅಂಜಾರ್ ಹಾಗೂ ರಾಪಾರ್ ಮೊದಲಾದ ಕಂಪನದ ತುಳಿತಕ್ಕೆ ಪೂರ್ಣ ತುತ್ತಾಗಿರುವ ನಗರಗಳ ಪುನರ್ ನಿರ್ಮಾಣದ ರೂಪುರೇಷೆಗಳನ್ನು ವಿವಿಧ ಸಂಘ- ಸಂಸ್ಥೆಗಳ ನೆರವಿನಿಂದ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಸಿದ್ಧಪಡಿಸುತ್ತಿವೆ. ಹೊಸ ತಂತ್ರಜ್ಞಾನದ ನೆರವಿನಿಂದ ಕ್ಷಿಪ್ರ ಪುನರ್ ನಿರ್ಮಾಣ ಅಷ್ಟೇ ಅಲ್ಲದೆ ದುರಂತ ನಿರೋಧಕ ಬಹು ಉಪಯೋಗಿ ಕಟ್ಟಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಅದು ಬಿಟ್ಟು ಅದೇ ಹಳೇ ಜಾಗದಲ್ಲಿ ಅವೇ ಕಲ್ಲುಗಳಿಂದ ಕಟ್ಟಡಗಳನ್ನು ಕಟ್ಟಿದಲ್ಲಿ ಪ್ರಯೋಜನವಿಲ್ಲ ಎಂದು ಜಗ್‌ಮೋಹನ್ ಎಚ್ಚರಿಕೆ ಕೊಟ್ಟರು.
ಕೇವಲ ಸಲಹೆಗಳನ್ನು ಮಾತ್ರ ನೀಡದೆ, ವಾಸ್ತವದಲ್ಲಿ ಅವುಗಳನ್ನು ಎಂತು ಜಾರಿಗೆ ತರಬೇಕು ಎಂಬುದನ್ನು ವಿವಿಧ ಸ್ಲೈಡ್‌ಗಳಿಂದ ಸಚಿವರು ತೋರಿಸಿದರು. ಭುಜ್ ನಗರಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ಶಾಲಾ ಕಟ್ಟಡ ಎಂತಿರಬೇಕು, ಆಸ್ಪತ್ರೆಗಳು ಹೇಗಿದ್ದರೆ ಚೆನ್ನ, ದುರಂತದ ವೇಳೆ ಯಾವ ಕಟ್ಟಡದಲ್ಲಿ ಜನ ಹೆಚ್ಚು ಸುರಕ್ಷಿತವಾಗಿಬಹುದು, ಅವುಗಳ ನಿರ್ಮಾಣವೆಂತು ಎಂಬಿತ್ಯಾದಿ ವಿಷಯಗಳನ್ನು ಸುಲಿದ ಬಾಳೆಯ ಹಣ್ಣಿನಂದದಿ ವಿವರಿಸಿದರು. ಅಷ್ಟೇ ಅಲ್ಲದೆ ದುರಂತದ ವೇಳೆ ಜನ ಯಾವ ತುರ್ತು ಹೆಜ್ಜೆಗಳನ್ನಿಡಬೇಕು ಎಂಬುದನ್ನು ಮನವರಿಕೆ ಮಾಡಿಸುವ ಸಮಗ್ರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ಕೊಟ್ಟರು. (ಯುಎನ್‌ಐ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications