Get Updates
Get notified of breaking news, exclusive insights, and must-see stories!

ಐಟಿಗೆ ಆದ್ಯತೆ ನಿಲುವು ಶಿಕ್ಷಣ ಕ್ಷೇತ್ರಕ್ಕೆ ಮರಣದಂಡನೆ - ಅನಂತಮೂರ್ತಿ

ಗುಲ್ಬರ್ಗಾ : ಇತರ ಸಾಮಾಜಿಕ ವಿಜ್ಞಾನಗಳನ್ನು ಕಡೆಗಣಿಸಿ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಶಿಕ್ಷಣದಲ್ಲಿ ವಿಶೇಷ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರದ ನೀತಿಯನ್ನು ಪ್ರಸಿದ್ಧ ಕಥೆಗಾರ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಯು.ಆರ್‌. ಅನವಂತಮೂರ್ತಿ ಕಟುವಾಗಿ ಟೀಕಿಸಿದ್ದಾರೆ.

ಸರ್ಕಾರದ ಐಟಿ ಪರ ನಿಲುವು ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಮರಣದಂಡನೆಯಾಗಿ ಪರಿಣಮಿಸಿದೆ. ಶಿಕ್ಷಣದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ನೀಡುವ ಸರ್ಕಾರದ ನಿಲುವು ಸರಿಯಾದುದಲ್ಲ . ಇದರಿಂದಾಗಿ ಅತ್ಯುತ್ತಮವಾದ ಜ್ಞಾನವನ್ನು ಬೆನ್ನಟ್ಟಿ ಮಟ್ಟ ಹಾಕಿದಂತಾಗುತ್ತದೆ ಎಂದು ಪ್ರೊ.ಅನಂತಮೂರ್ತಿ ಬಣ್ಣಿಸಿದ್ದಾರೆ. ಅವರು ಗುಲ್ಬರ್ಗಾ ವಿವಿಯಲ್ಲಿ ಮಂಗಳವಾರ ನಡೆದ 'ಇಂಟಿಗ್ರೇಟೆಡ್‌ ಅಕಾಡೆಮಿಸ್‌’ ರಾಷ್ಟ್ರೀಯ ಕಮ್ಮಟದಲ್ಲಿ ಸಮಾರೋಪ ಭಾಷಣ ಮಾಡುತ್ತಿದ್ದರು.

ವಿವಿಧ ವಿಷಯಗಳಲ್ಲಿ , ವಿಶೇಷವಾಗಿ ಭೌತಶಾಸ್ತ್ರ , ವೈದ್ಯಕೀಯ ಹಾಗೂ ಐಟಿ ಕ್ಷೇತ್ರಗಳಲ್ಲಿ ವಿಪರೀತವಾದ ವಿಂಗಡಣೆಗಳು ಸಮಾಜಕ್ಕೆ ಒಳಿತಲ್ಲ . ಒಂದು ವಿಷಯದಲ್ಲಿ ಪರಿಣತಿಯನ್ನು ಪಡೆವ ವ್ಯಕ್ತಿ , ತನ್ನ ಪರಿಣತಿಯನ್ನು ವಿಭಿನ್ನ ವಿಷಯಗಳ ಹಿನ್ನೆಲೆಯಲ್ಲಿ ಉತ್ತಮಪಡಿಸಿಕೊಳ್ಳುತ್ತಾನೆ. ಅಂತಹ ವ್ಯಕ್ತಿ ಸಮಾಜಕ್ಕೆ ಉಪಯುಕ್ತ ಎಂದು ಅವರು ಹೇಳಿದರು.

ಮೆಡಿಕಲ್‌ ಹಾಗೂ ಇಂಜಿನಿಯರಿಂಗ್‌ ವಿಷಯಗಳಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಬೇಕೆನ್ನುವ ಅಭಿಪ್ರಾಯದ ಬಗ್ಗೆ ಮಾತನಾಡಿದ ಅನಂತಮೂರ್ತಿ, ವಿಶ್ವ ವಿದ್ಯಾಲಯವೊಂದು ಏಕ ಛತ್ರಿಯಡಿ ವಿವಿಧ ವಿಷಯಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಿದೆ ಹಾಗೂ ವಿಭಿನ್ನ ವಿಷಯಗಳ ವಿಭಾಗಗಳ ನಡುವೆ ಅತ್ಯುತ್ತಮ ಸಂವಹನ ಸಾಧಿಸಲೂ ಸಾಧ್ಯವಿದೆ ಎಂದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+