ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಪತ್ನಿ- ಸೊಸೆಗೆ ಆಸಿಡ್‌:ನ್ಯಾಯಾಂಗ ತನಿಖೆಗೆ ಆದೇಶ

By Oneindia Staff
|
Google Oneindia Kannada News

ಬೆಂಗಳೂರು : ಮಾಜಿ ಪ್ರಧಾನಿ ದೇವಗೌಡರ ಪತ್ನಿ ಚೆನ್ನಮ್ಮ ಹಾಗೂ ಸೊಸೆ ಭವಾನಿ ಅವರ ಮೇಲೆ ಆಸಿಡ್‌ ಎರಚಿದ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರ ಗುರುವಾರ ಆದೇಶಿಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರಕರಣದ ಕೂಲಂಕಷ ತನಿಖೆ ನಡೆಸುವಂತೆ ಸಿಓಡಿಗೂ ತಿಳಿಸಲಾಗಿದೆ ಎಂದರು. ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಬ್ಬರನ್ನು ತನಿಖೆಗೆ ನೇಮಿಸಲಾಗುವುದು. ಸರ್ಕಾರ ಈ ನೇಮಕಾತಿ ಕೋರಿ ಹೈಕೋರ್ಟಿಗೆ ಸದ್ಯದಲ್ಲೇ ಪತ್ರ ಬರೆಯಲಿದೆ ಎದು ಪ್ರಶ್ನೆಗಳಿಗೆ ಉತ್ತರಿಸುತ್ತಾ ಖರ್ಗೆ ಹೇಳಿದರು.

ಭದ್ರತೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬುದರ ಬಗೆಗೆ ಸಚಿವ ಸಂಪುಟ ಅಂತಿಮ ನಿರ್ಧಾರ ಕೈಗೊಳ್ಳುವುದು. ಈ ಪ್ರಕರಣದ ಹಿಂದಿನ ಅಪರಾಧಿ ಪಿತೂರಿ ಸೇರಿದಂತೆ ಇತರೆ ಮಗ್ಗಲುಗಳನ್ನು ಪತ್ತೆ ಹಕ್ಷಿಚ್ಚುವ ಕೆಲಸವನ್ನು ತಕ್ಷಣವೇ ಸಿಓಡಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ಸ್ಥಳೀಯ ಪೊಲೀಸರು ವಿವಿಧ ಒತ್ತಡಗಳನ್ನು ಎದುರಿಸಬೇಕಾದ ಸಂದರ್ಭ ಒದಗಿಬರುವ ಸಾಧ್ಯತೆಗಳಿರುವುದರಿಂದ ಈ ಜವಾಬ್ದಾರಿಯನ್ನು ಸಿಓಡಿಗೆ ವಹಿಸಿ, ಯಾವುದೇ ಕಿರಿಪಿರಿಗೆ ಅವಕಾಶ ನೀಡದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು.

ಚೆನ್ನಮ್ಮ ಅವರ ದೇಹಸ್ಥಿತಿಯ ಬಗೆಗೆ ಪ್ರಶ್ನಿಸಿದಾಗ, ಅವರು ನಗರದ ಖಾಸಗಿ ಆಸ್ಪತ್ರೆಯಾಂದರ ತೀವ್ರ ನಿಗಾ ಘಟಕದಲ್ಲಿದ್ದಾರೆ. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಆಕೆಯನ್ನು ಭೇಟಿ ಮಾಡಲು ಬಯಸಿದರು. ಆದರೆ ವೈದ್ಯರು ಸದ್ಯಕ್ಕೆ ಯಾರೂ ಆಕೆಯನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ಉತ್ತರಿಸಿದರು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X