ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ : ಎಸ್ಸೆಸ್ಸೆಲ್ಸಿ ಗಣಿತದ ಪಠ್ಯ ಸದ್ಯದಲ್ಲೇ ಇಂಟರ್‌ನೆಟ್‌ನಲ್ಲಿ

By Staff
|
Google Oneindia Kannada News

ಪಣಜಿ : ಕಂಪ್ಯೂಟರ್‌ ಅಧ್ಯಯನ ಕುರಿತ ಆನ್‌ಲೈನ್‌ ಕೋರ್ಸುಗಳು ದಿನಕ್ಕೆ ಹತ್ತರಂತೆ ತಲೆಯೆತ್ತುತ್ತಿರುವ ಈ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪಠ್ಯಗಳನ್ನೂ ಇಂಟರ್‌ನೆಟ್‌ ಮೂಲಕವೇ ಒದಗಿಸುವ ಯತ್ನಗಳು ನಡೆಯುತ್ತಿದ್ದು , ಈಗಾಗಲೇ ಗಣಿತ ವಿಷಯದ ಇಂಟರ್‌ನೆಟ್‌ ಆಧಾರಿತ ಪಠ್ಯವನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸಿದ್ಧಪಡಿಸುತ್ತಿದೆ.

ಮಹಾರಾಷ್ಟ್ರ ಎಸ್ಸೆಸ್ಸೆಲ್ಸಿ ಮಂಡಲಿಗಾಗಿ ಐಐಟಿ ಈ ಪಠ್ಯವನ್ನು ಸಿದ್ಧಪಡಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ಶಿಕ್ಷಣ 2001(ಐಸಿಎಸ್‌ಟಿಎಂಇ) ವಿಷಯ ಕುರಿತ 5 ದಿನಗಳ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಐಐಟಿ ಅಧಿಕಾರಿ ಅಭಿರಾಮ್‌ ರಾನಡೆ ಈ ವಿಷಯ ತಿಳಿಸಿದರು.

ಓಬಿರಾಯನ ಕಾಲದ ಮಕ್ಕಿಕಾಮಕ್ಕಿ ಪಠ್ಯಕ್ಕಿಂತ ಬುದ್ಧಿಗೆ ಕಸರತ್ತು ಕೊಡುವ, ಮಕ್ಕಳನ್ನು ಚರ್ಚೆಗೆ ಒಡ್ಡುವ, ಹೊಸ ಹೊಸ ಸಮಸ್ಯೆಗಳ ಸವಾಲೆಯುವಂಥ ಪಠ್ಯ ಇಂದಿನ ಪರಿಸ್ಥಿತಿಗೆ ಅತ್ಯಗತ್ಯ. ನಾವು ಸಿದ್ಧ ಪಡಿಸುತ್ತಿರುವ ಇಂಟರ್‌ನೆಟ್‌ ಆಧಾರಿತ ಪಠ್ಯದಲ್ಲಿ ರೇಖಾಗಣಿತಕ್ಕೆ ಅನುವಾಗುವ ಗ್ರಾಫಿಕ್‌ ಕಲೆಗಳೂ ಅಡಕವಾಗಿವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಅನುಮಾನ ಪರಿಹರಿಸಿಕೊಳ್ಳುವ ಮಾರ್ಗೋಪಾಯಗಳೂ ಇವೆ. ದೀರ್ಘ ಕಾಲದ ಅಧ್ಯಯನದ ನಂತರ ಅಗತ್ಯ ಹಾಗೂ ಸೂಕ್ತ ಮಾರ್ಪಾಟುಗಳೊಂದಿಗೆ ಪಠ್ಯ ಕ್ರಮ ಸಿದ್ಧಪಡಿಸುತ್ತಿದ್ದೇವೆ ಎಂದು ರಾನಡೆ ವಿವರಿಸಿದರು.

ಮರಾಠಿ ಹಾಗೂ ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಪಠ್ಯ ಸಿದ್ಧಪಡಿಸುವ ನಿರ್ಧಾರವಿದ್ದು, ಅದನ್ನೂ ಜಾರಿಗೆ ತರಲು ಐಐಟಿ ಕಾರ್ಯನಿರತವಾಗಿದೆ. ಈ ಸುದ್ದಿ ನಮ್ಮ ಐಟಿ ಮುಖ್ಯಮಂತ್ರಿ ಕೃಷ್ಣ ಅವರಿಗೂ ಮುಟ್ಟಿದಲ್ಲಿ ಕರ್ನಾಟಕದ ಎಸ್ಸ್ಸೆಸೆಲ್ಸಿ ವಿದ್ಯಾರ್ಥಿಗಳೂ ಇಂಟರ್‌ನೆಟ್‌ ಆಧಾರಿತ ಪಠ್ಯ ಪಡೆಯುವ ದಿನ ದೂರವಿಲ್ಲ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X