ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಈ ಶಿವರಾತ್ರಿಯ ಜಾಗರಣೆಗೆ ಇನ್ನಿಲ್ಲದ ಕಳೆ. ಆಪ್ತ ಗೆಳೆಯರು ಜೊತೆಯಾಗುವುದು ಇದಕ್ಕೆ ಕಾರಣವಿದ್ದೀತು. ಅದೇನಾದರೂ ಇರಲಿ, ನಿಮ್ಮ ಮನಸ್ಸು ಇತ್ತೀಚೆಗೆ ಅಧ್ಯಾತ್ಮದತ್ತ ತುಡಿಯುತ್ತಿರುವುದು ನಿಜ ತಾನೆ.ವೃಷಭ : ಉದ್ದಿಮೆದಾರರಿಗೆ ಯಶಸ್ಸಿನ ದಿನ. ಹೊಸ ಲೆಕ್ಕಾಚಾರಗಳಿಗೆ ಕೈ ಹಾಕುವುದಿದ್ದರೂ ಒಳ್ಳೆಯ ಮುಹೂರ್ತ. ಶಿವನನ್ನು ಅರ್ಚಿಸುವುದರಿಂದ ಇರುವ ಅಲ್ಪಸ್ವಲ್ಪ ಅಡೆತಡೆಗಳೂ ಇಲ್ಲವಾಗುತ್ತವೆ.
ಮಿಥುನ : ಆರೋಗ್ಯವಾಗಿದ್ದೀರಾ. ಸುಮ್ಮನೆ ಗಾಬರಿಗೊಳ್ಳುತ್ತೀರಿ. ಶಿವ ಕರುಣೆ ಸಂಪೂರ್ಣವಾಗಿರುವುದರಿಂದ ನೀವು ಶತಾಯುಷಿಗಳಾಗುತ್ತೀರಿ. ನಿಮ್ಮಿಂದ ಯಾರೆಲ್ಲ ಏನೆಲ್ಲಾ ನಿರೀಕ್ಷಿಸಿದ್ದಾರೆ ಎನ್ನುವುದು ನಿಮಗೂ ಗೊತ್ತು.
ಕಟಕ : ಕುಟುಂಬದ ಸದಸ್ಯರ ಸಹಚರ್ಯದಿಂದ ಕಳಕೊಂಡಿದ್ದೇನೋ ಹತ್ತಿರವಾಯಿತು ಅನ್ನಿಸುತ್ತದೆ. ಆ ಭಾವನೆ ನಿಜ. ನೀವು ಇತ್ತೀಚೆಗೆ ನಿಮ್ಮ ತುರ್ತುಗಳಲ್ಲೇ ಮುಳುಗಿ ಹೋಗಿದ್ದಿರಿ. ಮನೆಯವರಿಗೂ ಸ್ವಲ್ಪ ಸಮಯ ಮೀಸಲಿಡಿ.
ಸಿಂಹ : ಈ ದಿನ ಹೊಸ ಗೆಳೆಯರು ಬದುಕಿನಲ್ಲಿ ಪ್ರವೇಶಿಸುವ ಸಾಧ್ಯತೆಗಳು ಉಜ್ವಲವಾಗಿವೆ. ನಿಮ್ಮ ಹಣಕಾಸಿನ ಗೆರೆಗಳೂ ಹೊಳೆಯಲಾರಂಭಿಸಿವೆ. ಸರಿಯಾದ ದಿಕ್ಕಿನಲ್ಲಿ ಸಾಗುವುದು ನಿಮಗೇ ಬಿಟ್ಟಿದ್ದು.
ಕನ್ಯಾ : ಗೆಳೆಯರೊಡನೆ ವೃಥಾ ಕಲಹ ಬೇಡ . ಮನೆಯವರು ಹಾಗೂ ಗೆಳೆಯರನ್ನು ಒಂದೇ ತಕ್ಕಡಿಯಲ್ಲಿ ಅಳೆಯುವುದು ಬೇಡ. ಈ ನಡುವೆ ವೃತ್ತಿ ಸಂಬಂಧ ನಿಮಗೊಂದು ಶುಭಸುದ್ದಿ ಕಾದಿದೆ.
ತುಲಾ : ಆರೋಗ್ಯ ಅಷ್ಟೇನೂ ಹಿತಕರವಾಗಿಲ್ಲವಾಗಿರುವುದರಿಂದ ಜೇಬು ಸಾಕಷ್ಟು ಕೈ ಕಚ್ಚುತ್ತದೆ. ಇದೆಲ್ಲಾ ತಾತ್ಕಾಲಿಕ. ಮನಸ್ಸಿನ ನೆಮ್ಮದಿ ಕಳಕೊಳ್ಳಬೇಡಿ. ಮನೆದೇವರನ್ನು ಪೂಜಿಸಿ.
ವೃಶ್ಚಿಕ : ಅಮ್ಮನ ತುತ್ತು ತಿಂದು ಯಾವ ಕಾಲವಾಯಿತು. ನೀವು ತುದಿಗಾಲಲ್ಲಿ ನಿಂತಿದ್ದರೂ, ಗಳಿಗೆ ನಿಮ್ಮ ನಿಯಂತ್ರಣದಲ್ಲಿಲ್ಲ . ಜೊತೆಗೆ ಅಲ್ಲಿ ನೆಮ್ಮದಿ ಸಿಕ್ಕುತ್ತದೆ ಎಂದು ನೀವು ನಿರೀಕ್ಷಿಸುವಂತೆಯೂ ಇಲ್ಲ.
ಧನಸ್ಸು : ಅನಿರೀಕ್ಷಿತ ಪ್ರಯಾಣಕ್ಕೆ ಸಿದ್ಧರಾಗಿ. ಈ ಪ್ರಯಾಣ ನಿಮಗೆ ಹೊಸತೊಂದು ರೋಮಾಂಚನ, ಅನುಭವವನ್ನು ಒದಗಿಸಲಿದೆ. ವೃತ್ತಿಯಲ್ಲಿ ನೀವು ಮಾಡಿದ್ದೇ ಸರಿ.
ಮಕರ : ಉನ್ನತ ವ್ಯಾಸಂಗದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುತ್ತೀರಿ. ಸುಮ್ಮನೆ ಅಂಜಬೇಡಿ. ಪರೀಕ್ಷೆಯಲ್ಲೂ ಯಶಸ್ಸು ಸಾಧಿಸುತ್ತೀರಿ. ಸದ್ಯಕ್ಕೆ ನಿಯಂತ್ರಿಸಬೇಕಾದುದು ನಿಮ್ಮ ಮನಸ್ಸನ್ನು ಮಾತ್ರ. ಶುಭ ಶಿವರಾತ್ರಿ.
ಕುಂಭ : ಉಭಶುಭ ಅನ್ನಲಿಕ್ಕೆ ಶಿವರಾತ್ರಿ ಒಳ್ಳೆಯ ದಿನ. ಒಳ್ಳೆಯ ಮನಸ್ಸಿನಿಂದ ಯಾವುದಾದರೂ ನಿಶ್ಚಯಕ್ಕೆ ಬಂದುಬಿಡಿ. ಇದರಿಂದಾಗಿ ಅಡ್ಡಗೋಡೆಯ ಮೇಲೆ ಹೊಯ್ದಾಡುತ್ತಿರುವ ಬದುಕು ಹಳಿ ಸೇರುತ್ತದೆ.
ಮೀನ : ಈಶ್ವರನನ್ನು ಅರ್ಚಿಸಿ. ಮನೆ ಮಂದಿಯಾಂದಿಗೆ ಸಂತೋಷದ ದಿನ . ಹೊಸ ಒಡಂಬಡಿಕೆಗಳಿಗೂ ಹ್ಞೂಂಗುಟ್ಟಲು ಶುಭ ಮೂಹೂರ್ತವಿದೆ. ಶಿವನ ಮೇಲೆ ಭಾರ ಹಾಕಿ ಧೈರ್ಯಮಾಡಿಬಿಡಿ.












Click it and Unblock the Notifications