Get Updates
Get notified of breaking news, exclusive insights, and must-see stories!

ಭೂಕಂಪದಿಂದ ಅನಾಥರಾದ ಮಕ್ಕಳ ಸಲಹಲು ವಿಎಚ್‌ಪಿ ನಿರ್ಧಾರ

ಉಡುಪಿ : ಜನವರಿ 26ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾದ ಸುಮಾರು 1500 ಮಕ್ಕಳಿಗೆ ಆಸರೆಯಾಗಿ ನಿಲ್ಲಲು ನಿರ್ಧರಿಸಿರುವ ವಿಶ್ವಹಿಂದು ಪರಿಷತ್‌ ವಾತ್ಸಲ್ಯ ಮಂದಿರಗಳನ್ನು ನಿರ್ಮಿಸಲು ಯೋಜಿಸಿದೆ.

ಈ ಅನಾಥ ಮಕ್ಕಳಿಗೆ ಸ್ಲೇಟು, ಬಳಪ, ಪುಸ್ತಕಗಳನ್ನು ನೀಡುವುದಲ್ಲದೆ , ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಲೂ ಪರಿಷತ್‌ ತೀರ್ಮಾನಿಸಿದೆ. ಈ ವಿಷಯವನ್ನು ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ವಿಎಚ್‌ಪಿಯ ಕರ್ನಾಟಕ ಘಟಕದ ವಲಯ ಕಾರ್ಯದರ್ಶಿ ಬಿ.ಎನ್‌. ಮೂರ್ತಿ ತಿಳಿಸಿದರು.

ಗುಜರಾತ್‌ನಲ್ಲಿ ಬಲವಾದ ಸಂಘಟನೆಯನ್ನು ಹೊಂದಿರುವ ಪರಿಷತ್‌ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿತು. ಸುಮಾರು 15 ಸಾವಿರ ವಿಎಚ್‌ಪಿ ಕಾರ್ಯಕರ್ತರು ಪರಿಹಾರ ಕಾಮಗಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದೂ ಅವರು ಹೇಳಿದರು.

ಉದ್ದೇಶಿತ ವಾತ್ಸಲ್ಯ ಧಾಮದಡಿಯಲ್ಲಿ ಮನೆಗಳನ್ನು ನಿರ್ಮಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು. ಇದಲ್ಲದೆ ಭೂಕಂಪದಿಂದ ಸಂಪೂರ್ಣ ನಾಶವಾಗಿರುವ ಗುಜರಾತ್‌ನ ದೇವಾಲಯಗಳು, ಕೆಲವು ಹಳ್ಳಿಗಳು ಹಾಗೂ ಕುಟುಂಬಗಳನ್ನು ದತ್ತು ಪಡೆದು ಪುನರ್ವಸತಿ ಕಲ್ಪಿಸಲೂ ಚಿಂತಿಸಲಾಗುತ್ತಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+