ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಭೂಕಂಪಕ್ಕೆ 1.25 ಲಕ್ಷ ಮಂದಿ ಬಲಿ - ವಿಕಾಸ್‌ ಟ್ರಸ್ಟ್‌

By Super
|
Google Oneindia Kannada News

ಭುಜ್‌ : ಗುಜರಾತ್‌ನಲ್ಲಿ ಭೂಕಂಪದಿಂದಾಗಿ ಈವರೆಗೆ ಸತ್ತವರ ಸಂಖ್ಯೆ ಎಷ್ಟು ? ಈ ಸಂಖ್ಯೆ 20 ಸಾವಿರದಿಂದ 1.25 ಲಕ್ಷದವರೆಗೆ ಸುಳಿದಾಡುತ್ತಿದ್ದು ನಿಜವಾದ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ . ಸರ್ಕಾರದ ವಕ್ತಾರರು ಹೇಳುವಂತೆ ಈವರೆಗೆ ಸತ್ತಿರುವವರ ಸಂಖ್ಯೆ 20 ಸಾವಿರ. ರೆಡ್‌ಕ್ರಾಸ್‌ ಪ್ರಕಾರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಅರ್ಧಲಕ್ಷ . ರಕ್ಷಣಾ ಸಚಿವರು ಹೇಳುವಂತೆ ಈ ಸಂಖ್ಯೆ ಬರೋಬ್ಬರಿ ಲಕ್ಷ . ಇದೆಲ್ಲವನ್ನೂ ಮೀರುವಂತ ಸಂಖ್ಯೆಯಾಂದನ್ನು ಸ್ವಯಂ ಸೇವಾ ಸಂಸ್ಥೆಯಾಂದು ಮುಂದಿಟ್ಟಿದೆ. ಜ. 26 ರ ಕಂಪನದಿಂದ 1.25 ಲಕ್ಷ ಜನರು ಅಸು ನೀಗಿದ್ದಾರೆ ಎನ್ನುವುದು ಭೂಕಂಪ ಗ್ರಸ್ತರ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಅತಿ ದೊಡ್ಡ ಎನ್‌ಜಿಒ ಕಛ್‌ ವಿಕಾಸ್‌ ಟ್ರಸ್ಟ್‌ ನ ಹೇಳಿಕೆ.

ಟ್ರಸ್ಟ್‌ ನ ಕಾರ್ಯಕರ್ತರು ಭೂಕಂಪದಿಂದ ನೆಲಕಚ್ಚಿರುವ ಸುಮಾರು 30 ಹಳ್ಳಿ ಮತ್ತು ನಗರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರು ನೀಡಿದ ವರದಿಗಳ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ ಎಂದು ಟ್ರಸ್ಟ್‌ನ ಫಾ. ಜಾರ್ಜ್‌ ಕುನ್ನತ್‌ ಹೇಳಿದ್ದಾರೆ.

46,400 ಚದರ ಕಿ.ಮೀ. ವಿಸ್ತಾರವಾಗಿರುವ ಕಛ್‌ನ ಜನಸಂಖ್ಯೆ 15 ಲಕ್ಷ . ಕಛ್‌ನ ಪಂಚನಗರಗಳಾದ ಗಾಂಧಿ ಧಾಮ, ಭುಜ್‌, ಅಂಜಾರ್‌, ಮಾಂಡವಿ ಮತ್ತು ಮಂದಿರ್‌ ಪ್ರದೇಶಗಳಲ್ಲಿದ್ದ ಹೆಚ್ಚಿನ ನಗರಗಳು ನೆಲಸಮವಾಗಿವೆ. ಅಂದ ಮೇಲೆ ಸಂಖ್ಯೆ 20 ಸಾವಿರದ ಆಸು ಪಾಸಿನಲ್ಲಿರುವುದು ಸಾಧ್ಯವೇ ಇಲ್ಲ ಎನ್ನುವುದು ವಿಕಾಸ್‌ ಟ್ರಸ್ಟ್‌ನ ಲೆಕ್ಕಾಚಾರ.

ಸ್ವಯಂ ಸೇವಕರು ಮತ್ತು ಕಾರ್ಯಕರ್ತರು ಟ್ರಸ್ಟ್‌ಗೆ ಒಪ್ಪಿಸಿರುವ ವರದಿಗಳ ಪ್ರಕಾರ 25 ಸಾವಿರ ಜನಸಂಖ್ಯೆ ಇದ್ದ ಬಚಾವ್‌ ಪ್ರದೇಶದಲ್ಲಿ 20 ಸಾವಿರ ಸಾವು ಸಂಭವಿಸಿದೆ. ಅಲ್ಲದೆ, 35 ಸಾವಿರ ಜನಸಂಖ್ಯೆಯ ಅಂಜಾರ್‌ನಲ್ಲಿಯೂ 15 ಸಾವಿರ ಮಂದಿ, ರಾಪರ್‌ಲ್ಲಿ 20 ಸಾವಿರ ಮತ್ತು ಗಾಂಧಿಧಾಮದಲ್ಲಿ 30 ಸಾವಿರ ಮಂದಿ ಸತ್ತಿರುವ ಅಂದಾಜು ಟ್ರಸ್ಟಿನದು.

ಸತ್ತವರ ಸಂಖ್ಯೆಯ ಬಗೆಗಿನ ಗೊಂದಲ : ಗುಜರಾತ್‌ ಭೂಕಂಪದಲ್ಲಿ ಸತ್ತವರ ಸಂಖ್ಯೆ ಅಧಿಕೃತವಾಗಿ 20 ಸಾವಿರ ಮಾತ್ರ. ಆದರೆ ಭೂಕಂಪದ ಬಗ್ಗೆ ಭಾನುವಾರದಂದು, ಗುಜರಾತ್‌ ಮುಖ್ಯ ಮಂತ್ರಿ ಕೇಶುಭಾಯ್‌ ಪಟೇಲ್‌ ಸಾವಿನ ಸಂಖ್ಯೆ ಒಂದು ಲಕ್ಷಕ್ಕೇರಬಹುದು ಎಂಬ ಕಳವಳ ವ್ಯಕ್ತ ಪಡಿಸಿದ್ದರು.

ಅಂಜಾರ್‌ನಲ್ಲಿ ಸತ್ತಿರುವುದು 15 ಸಾವಿರ ಜನ ಎಂದು ವಿಕಾಸ್‌ ಸಂಸ್ಥೆ ಪ್ರಕಟಿಸಿರುವ ಬೆನ್ನಿಗೇ, ಅಂಜಾರ್‌ನಲ್ಲಿ ಯಾರೂ ಬದುಕುಳಿದಿಲ್ಲ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಈ ನಡುವೆ, ಗುಜರಾತ್‌ ಭೂಕಂಪದಲ್ಲಿ ಮೃತರಾಗಿರುವವರ ಸಂಖ್ಯೆ ಒಂದು ಲಕ್ಷ ಮೀರಬಹುದು ಎನ್ನುವ ತಮ್ಮ ಹೇಳಿಕೆಯನ್ನು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಬುಧವಾರ ಸಮರ್ಥಿಸಿಕೊಂಡಿದ್ದಾರೆ. ನಾನು ಭೂಕಂಪ ವಾಗಿರುವ ಪ್ರದೇಶದಲ್ಲಿ ಖುದ್ದು ವೀಕ್ಷಣೆ ನಡೆಸಿದ್ದೇನೆ. ಅನೇಕ ಪ್ರದೇಶಗಳು ನಾಮಾವಶೇಷವಾಗಿವೆ. ಒಂದು ಲಕ್ಷ ಸಂಖ್ಯೆ ಉತ್ಪ್ರೇಕ್ಷೆಯಲ್ಲ ಎಂದು ಫರ್ನಾಂಡಿಸ್‌ ಹೇಳಿದರು. ಆದರೆ ಪ್ರಧಾನಿ ವಾಜಪೇಯಿ ಈ ಹೇಳಿಕೆ ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿರುವುದರಿಂದ ಅಧಿಕೃತ ವರದಿ ಸಾವಿನ ಸಂಖ್ಯೆ 20 ಸಾವಿರ ದಾಟಿರುವ ಬಗ್ಗೆ ಇದುವರೆಗೆ ಬಂದಿಲ್ಲ.

English summary
Kutchi NGO estimates toll will exceed 1,25,000
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X