Get Updates
Get notified of breaking news, exclusive insights, and must-see stories!

ಕಾಲ ಮೀರಿ ಹೋಗುತ್ತಿದೆ... ಮಿಂಚಿ ಹೋದಮೇಲೆ ಚಿಂತಿಸಿ ಫಲವಿಲ್ಲ

ನವದೆಹಲಿ : ದೇಶವಿದೇಶಗಳಿಂದ ನಾನಾ ರೂಪದ ನೆರವು ಭೂಕಂಪ ಪೀಡಿತ ಗುಜರಾತ್‌ಗೆ ಹರಿದು ಬರುತ್ತಿದ್ದರೂ ಏನೇನೂ ಸಾಕಾಗುತ್ತಿಲ್ಲ. ಗಾಯಗೊಂಡವರಿಗೆ ಶುಶ್ರೂಷೆ ಮಾಡುತ್ತಿರುವ ವೈದ್ಯರ ಮಾತುಗಳಲ್ಲೇ ಹೇಳುವುದಾದರೆ ಆಂಟಿಬಯಾಟಿಕ್ಸ್‌ ಕೊರತೆ, ಬ್ಯಾಂಡೇಜ್‌ಬಟ್ಟೆಗಳಿಗೂ ಅಭಾವ. ನೆರವು ಹರಿದು ಬರುತ್ತಿರಬಹುದು , ಆದರೆ ಸಕಾಲಕ್ಕೆ ಅಗತ್ಯ ಔಷಧ ಸಾಮಗ್ರಿಗಳು ಕೈಗೆ ಬರದಿದ್ದರೆ ಪ್ರಯೋಜನವಾಗುವುದಿಲ್ಲ. ಅವಶೇಷಗಳ ಅಡಿಯಲ್ಲಿ ಸಾವುನೋವಿನ ಹೋರಾಟ ನಡೆಸುತ್ತಿರುವ ಹತಭಾಗ್ಯರಿಗೆ ಕಾಲ ಮೀರಿ ಹೋಗುತ್ತಿದೆ...ಕಾಲ ಮಿಂಚಿ ಹೋದಮೇಲೆ ಚಿಂತಿಸಿ ಫಲವಿಲ್ಲ.

ಗುಜರಾತಿನ ಅದರಲ್ಲೂ ಕಚ್‌ ಪ್ರಾಂತ್ಯದ ಅನೇಕ ಹಳ್ಳಿಗಳು ಸರ್ವನಾಶವಾಗಿದ್ದು, ಸತ್ತವರಾರು ಎಂದು ಗುರುತು ಹಿಡಿಯುವವರೂ ಇಲ್ಲ. ಯಾಕೆಂದರೆ ಪತ್ತೆ ಹಿಡಿಯಬೇಕಾದವರು ಬದುಕುಳಿದಿಲ್ಲ. ಇಡೀ ಹಳ್ಳಿಗೆ ಹಳ್ಳಿಯೇ ರುದ್ರಭೂಮಿಯಾಗಿ ಎಲ್ಲೆಲ್ಲೂ ಹೆಣಗಳ ರಾಶಿ. ಆಕಸ್ಮಾತ್‌ ಬದುಕುಳಿದವರಿಗೆ ಕುಡಿಯುವ ನೀರು, ಆಹಾರ ಸಿಗುವುದೇ ದುಸ್ತರ.ಇದು ಸೋಮವಾರ ಮಧ್ಯಾನ್ಹದ ಚಿತ್ರ. ಇದೀಗ ಪ್ರಧಾನಿ ವಾಜಪೇಯಿ ಭೂಕಂಪ ಪೀಡಿತ ಪ್ರದೇಶಗಳಿಗೆ ಬಂದಿಳಿದಿದ್ದಾರೆ. ಅಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಕ್ರಮಗಳನ್ನು ಅವರು ಖುದ್ದು ಕಂಡು ಪರಿಶೀಲಿಸಲಿದ್ದಾರೆ. ಭಗ್ನಾವಶೇಷಗಳ ಅಡಿಯಿಂದ ಸಿಕ್ಕಿಬಿದ್ದ ಮಂದಿಯನ್ನು ಬಚಾವ್‌ ಮಾಡುವ ಸುದ್ದಿಗಳು ಅಲ್ಲೊಂದು ಇಲ್ಲೊಂದು ಬರುತ್ತಿರುವ ನಡುವೆ ಸಾವಿನ ನಗ್ನ ನರ್ತನ ಅಬಾಧಿತವಾಗಿ ಮುಂದುವರೆದಿದೆ. ಈವರೆಗೆ ಸತ್ತವರ ಸಂಖ್ಯೆ 25 ಸಾವಿರ ದಾಟಿದೆ. ಗಾಯಗೊಂಡವರ ಸಂಖ್ಯೆ 70 ಸಾವಿರದ ಆಸುಪಾಸಿದೆ.ಈ ಮಧ್ಯೆ ಭಾನುವಾರ ರಾತ್ರಿ ಮತ್ತೆ ಸೋಮವಾರ ಬೆಳಗ್ಗೆ ಮೂರ್ನಾಲ್ಕು ಬಾರಿ ಭುಜ್‌ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ ಈ ಭೂಕಂಪಗಳ ತೀವ್ರತೆ 3.3 ಮತ್ತು 4.4 ಎಂದು ದಾಖಲಾಗಿದೆ. ಈ ವಿಷಯವನ್ನು ಅಹ್ಮದಾಬಾದ್‌ನಲ್ಲಿರುವ ಭಾರತೀಯ ಭೂಮಾಪನ ವಿಭಾಗದ ನಿರ್ದೇಶಕ ಆರ್‌.ಕೆ. ಕಂಕಾಣೆ ತಿಳಿಸಿದ್ದಾರೆ. ಶುಕ್ರವಾರದ ಭೂಕಂಪದ ತರುವಾಯ ಒಟ್ಟು 88 ಬಾರಿ ಭುಜ್‌ನಲ್ಲಿ ಭೂಮಿ ಕಂಪಿಸಿದೆ.

ಸಾವಿನ ಹಾಗೂ ಗಾಯಾಳುಗಳ ಸಂಖ್ಯೆ ಏರುತ್ತಲೇ ಇದೆ. ಗುಜರಾತ್‌ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಪರಿಹಾರ ಕಾಮಗಾರಿಗಳಿಗೆ ಪೂರ್ಣ ಚಾಲನೆ ದೊರೆತೇ ಇಲ್ಲ. ಹೆಚ್ಚು ಹಾನಿಗೊಳಗಾಗಿರುವ ಭುಜ್‌ ಹಾಗೂ ಕಛ್‌ ಪ್ರದೇಶಗಳಲ್ಲಿ ಮಾತ್ರ ತೀವ್ರ ಕಾರ್ಯಾಚರಣೆ ಮುಂದುವರಿದಿದೆ. ಸಂಪೂರ್ಣವಾಗಿ ಹೇಳ ಹೆಸರಿಲ್ಲದಂತೆ ಸರ್ವನಾಶವಾಗಿರುವ ಭುಜ್‌ ಪ್ರದೇಶವೊಂದರಲ್ಲೇ 16 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ವರೆಗೆ ಅಲ್ಲಿ ಸುಮಾರು 7 ಸಾವಿರ ಶವಗಳನ್ನಷ್ಟೇ ಹೊರತೆಗೆಯಲಾಗಿದೆ.

ಹೊಸ ತೆರಿಗೆ ನಿರೀಕ್ಷೆ : ಭೂಕಂಪದಿಂದ ಉಂಟಾಗಿರುವ ನಷ್ಟವನ್ನು ಭರಿಸಲು ಹಾಗೂ ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಸಮಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಹೊಸ ತೆರಿಗೆಗಳನ್ನು ಹೇರುವ ಸಾಧ್ಯತೆಗಳೂ ಇವೆ ಎಂದು ವಿತ್ತ ಖಾತೆಯ ಮೂಲಗಳು ಹೇಳಿವೆ.

ಹೆಚ್ಚುವರಿ ತೆರಿಗೆ ಹೇರುವ ನಿಟ್ಟಿನಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಸಮಾಲೋಚನೆ ನಡೆಸುತ್ತಿದ್ದಾರೆ. ಉದ್ದಿಮೆಗಳ ರಾಜ್ಯ ಎನಿಸಿದ್ದ ಗುಜರಾತ್‌ ಅನ್ನು ಮತ್ತೆ ಪುನರ್ನಿರ್ಮಿಸಲು ರಾಷ್ಟ್ರದ ಜನತೆ ಹೆಚ್ಚುವರಿ ತೆರಿಗೆಯ ಹೊರೆ ಹೊರುವುದು ಅನಿವಾರ್ಯವಾಗಬಹುದು ಎಂಬ ಸೂಚನೆಯನ್ನು ವಿತ್ತ ಸಚಿವ ಯಶವಂತ ಸಿನ್ಹಾ ನೀಡಿದ್ದಾರೆ. (ಇಂಡಿಯಾ ಇನ್‌ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+