ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊಯೋಟಾ ಕಾರ್ಪೋರೇಷನ್‌ ಜೊತೆ ಸಂಬಂಧ ಬೆಳೆಸಿದ ಕಿರ್ಲೋಸ್ಕರ್‌

By Staff
|
Google Oneindia Kannada News

ಬೆಂಗಳೂರು : ವಾಹನಗಳ ಬಿಡಿ ಭಾಗಗಳನ್ನು ಉತ್ಪಾದಿಸುವ ಕಿರ್ಲೋಸ್ಕರ್‌ ಕಂಪೆನಿಯು ಜಪಾನ್‌ ಮೂಲದ ಟೊಯೋಟಾ ಮೋಟಾರ್‌ ಕಾರ್ಪೋರೇಷನ್‌ ಜೊತೆ ಹೊಸ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪೆನಿಯ ಉಪನಿರ್ದೇಶಕ ಕೆ.ಕೆ. ಸ್ವಾಮಿ ತಿಳಿಸಿದ್ದಾರೆ.

ಈ ಕುರಿತ ಒಪ್ಪಂದ ಪತ್ರಕ್ಕೆ ಎರಡೂ ಕಂಪೆನಿಗಳು ಇತ್ತೀಚೆಗೆ ಸಹಿ ಹಾಕಿದ್ದು, ಹೊಸ ವರ್ಷದ ಜನವರಿ ತಿಂಗಳಿಂದ ಈ ಒಪ್ಪಂದ ಜಾರಿಗೆ ಬರಲಿದೆ ಎಂದು ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದ್ದಾರೆ.

ವಿವಿಧ ನಮೂನೆ ಕಾರುಗಳ ತಯಾರಿಕೆಗೆ ಹೆಸರು ಮಾಡಿರುವ ಟೊಯೋಟಾ ಮೋಟಾರ್‌ ಕಾರ್ಪೊರೇಷನ್‌ ಮುಂದಿನ ದಿನಗಳಲ್ಲಿ ಕಿರ್ಲೋಸ್ಕರ್‌ ಕಂಪೆನಿಯ ಸಹಯೋಗದಲ್ಲಿ ಕಾರುಗಳ ಜೊತೆಗೆ ಬಹುಪಯೋಗಕ್ಕೆ ಬರುವ ಇತರ ವಾಹನಗಳನ್ನೂ ತಯಾರಿಸಲಿದೆ. ಈಗಾಗಲೇ ಟೊಯೋಟಾ ಕಾಲಿಸ್‌ ಮಾರುಕಟ್ಟೆಗೆ ಬಂದಿದ್ದು , ಒಂದೇ ವರ್ಷದ ಅವಧಿಯಲ್ಲಿ 20ರಿಂದ 30 ಸಾವಿರ ಕಾರುಗಳು ಮಾರಾಟವಾಗಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಎರಡು ಕಂಪೆನಿಗಳ ನಡುವೆ ನಡೆದಿರುವ ಒಪ್ಪಂದದಿಂದಾಗಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಕಿರ್ಲೊಸ್ಕರ್‌ ಮತ್ತೊಂದು ಹೆಜ್ಜೆ ಇರಿಸಿದಂತಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X