ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಡೀಸ್‌ ವಿರುದ್ಧದ ಸರಣಿ ಗೆಲುವಿಗೆ 32 ರನ್‌ ಅಂತರದಲ್ಲಿ ಆಸ್ಟ್ರೇಲಿಯಾ

By Staff
|
Google Oneindia Kannada News

ಅಡಿಲೇಡ್‌ : ಗೆಲುವಿನ ರುಚಿ ಹತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ವಿಂಡೀಸ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯವನ್ನು ತನ್ನದಾಗಿಸಿಕೊಳ್ಳಲು ಇನ್ನು 32 ರನ್‌ ಸಾಕು. ಅದರ ಕೈಯ್ಯಲ್ಲಿನ್ನೂ 6 ವಿಕೆಟ್‌ಗಳಿವೆ.

ವಿಂಡೀಸ್‌ನ ಬ್ಯಾಟಿಂಗ್‌ ಅನಿಶ್ಚಿತತೆ ಸೋಮವಾರ ಮತ್ತೊಮ್ಮೆ ಸಾಬೀತಾಯಿತು. ಮೊದಲ ಇನಿಂಗ್ಸ್‌ನಲ್ಲಿ ನಾನ್ನೂರರ ಗಡಿ ಹತ್ತಿರ ಬಂದಿದ್ದ ವಿಂಡೀಸರು ಎರಡನೆ ಇನಿಂಗ್ಸ್‌ನಲ್ಲಿ 141 ರನ್‌ಗಳಿಗೆ ಕುಸಿದು, ಆಸ್ಟ್ರೇಲಿಯಾಕ್ಕೆ 130 ರನ್‌ಗಳ ಗುರಿಯಾಡ್ಡಿದರು. ಮೂರನೇ ದಿನದ ಕೊನೆಗೆ 98 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿರುವ ಆಸ್ಟ್ರೇಲಿಯಾ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿದೆ.

ಒಂದು ಹಂತದಲ್ಲಿ 48 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ ಸೋಲಿನ ಆತಂಕದಲ್ಲಿತ್ತಾದರೂ, ಜಸ್ಟಿನ್‌ ಲ್ಯಾಂಗರ್‌(43) ಹಾಗೂ ಮಾರ್ಟಿನ್‌(18) ಅವರ ಉತ್ತಮ ಅಜೇಯ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಚೇತರಿಕೆ ಕಂಡಿತು. ಬಿದ್ದ ನಾಲ್ಕು ವಿಕೆಟ್‌ಗಳನ್ನು ವಾಲ್ಷ್‌ ಹಾಗೂ ಧಿಲ್ಲಾನ್‌ ತಲಾ 2 ರಂತೆ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ಆಫ್‌ ಸ್ಪಿನ್ನರ್‌ ಮಿಲ್ಲರ್‌ ಅವರ ದಾಳಿಗೆ ಸಿಲುಕಿದ ವಿಂಡೀಸ್‌ನ ಎರಡನೇ ಇನಿಂಗ್ಸ್‌ ಕೇವಲ 141 ರನ್‌ಗಳಿಗೆ ಕೊನೆಯಾಯಿತು. ಮೊದಲ ಇನಿಂಗ್ಸ್‌ ಹೀರೋ ಲಾರಾ 39 ರನ್‌ ಗಳಿಸಿ 2 ನೇ ಇನಿಂಗ್ಸ್‌ನಲ್ಲೂ ಮಿಲ್ಲರ್‌ಗೆ ಬಲಿಯಾದರು. ಮೊದಲ ಇನಿಂಗ್ಸ್‌ನಲ್ಲಿ 81 ರನ್‌ಗೆ 5 ವಿಕೆಟ್‌ ಪಡೆದಿದ್ದ ಮಿಲ್ಲರ್‌ 2 ನೇ ಇನಿಂಗ್ಸ್‌ನಲ್ಲಿ 32 ರನ್‌ಗೆ 5 ವಿಕೆಟ್‌ ಕಿತ್ತು , ಪಂದ್ಯವೊಂದರಲ್ಲಿ ಮೊದಲ ಬಾರಿಗೆ 10 ವಿಕೆಟ್‌ ಸಾಧನೆ ಮಾಡಿದರು. ಉಳಿದಂತೆ ಮೆಕ್‌ ಗಿಲ್‌ 2 ವಿಕೆಟ್‌ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಒಂದೂ ವಿಕೆಟ್‌ ಕೀಳದೆ ನಿರಾಶರಾಗಿದ್ದ ಮೆಕ್‌ಗ್ರಾತ್‌ 3 ವಿಕೆಟ್‌ ಕಿತ್ತು ಸಮಾಧಾನಗೊಂಡರು.

ಸ್ಕೋರ್‌ ವಿವರ : ವೆಸ್ಟಿಂಡೀಸ್‌ - ಮೊದಲ ಇನಿಂಗ್ಸ್‌ 391 ಹಾಗೂ ಎರಡನೇ ಇನಿಂಗ್ಸ್‌ 141. ಆಸ್ಟ್ರೇಲಿಯಾ - ಮೊದಲ ಇನಿಂಗ್ಸ್‌ 403 ಹಾಗೂ ಎರಡನೇ ಇನಿಂಗ್ಸ್‌ 4 ವಿಕೆಟ್‌ಗೆ 98.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X