Get Updates
Get notified of breaking news, exclusive insights, and must-see stories!

ಬಸ್ಸಿಗೆ ಕಾಯುತ್ತಿದ್ದವರ ಮೇಲೆ ಹರಿದ ಲಾರಿ: ಆರು ಮಂದಿ ದುರ್ಮರಣ

ಬೆಳಗಾವಿ : ಇಲ್ಲಿನ ಹಲಗಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಲಾರಿ ಅಪಘಾತದ ದುರಂತದಲ್ಲಿ ಒಂದೇ ಕುಟುಂಬದ ಐದು ಮಂದಿ ಮಹಿಳೆಯರೂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

ಗುರುವಾರ ಬೆಳಿಗ್ಗೆ ಹತ್ತೂಮುಕ್ಕಾಲರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಬಳಿ ಬಸ್ಸು ಕಾಯುತ್ತಿದ್ದ ಒಬ್ಬ ಬಾಲಕ, ನಾಲ್ವರು ಹೆಂಗಸರು ಹಾಗೂ ಒಬ್ಬ ಬಾಲಕಿಯ ಮೇಲೆ, ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಲಾರಿ ಹರಿದಾಗ ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತರಾದರು. ಮತ್ತೊಬ್ಬ ಮಹಿಳೆ ಆಸ್ಪತ್ರೆಯ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರೆ, ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತನಾದ.

ರಾಜ್ಯ ರಸ್ತೆ ಸಾರಿಗೆಯ ಬೆಳಗಾವಿ ಮರಕಟ್ಟಿ ಬಸ್ಸು ಪಂಕ್ಚರ್‌ ಆಗಿ ಕೆಟ್ಟಿರುವುದರಿಂದ ನತದೃಷ್ಟ ಮಹಿಳೆಯರು ಬೇರೆ ಬಸ್ಸಿಗಾಗಿ ಕಾಯುತ್ತಿದ್ದರು. ಡಿಕ್ಕಿ ಹೊಡೆದ ಟಿಪ್ಪರ್‌ ಲಾರಿ ಬೆಳಗಾವಿಯ ಸಾಂಬ್ರಾ ಏರ್‌ಫೋರ್ಸ್‌ ಸ್ಪೇಷನ್‌ನ ಕ್ಯಾಂಟೀನ್‌ಗೆ ಗೃಹ ಬಳಕೆಯ ಸರಕನ್ನು ಸಾಗಿಸುತ್ತಿದ್ದು, ಚಾಲಕ ಚೆನ್ನವೀರಯ್ಯನ ಪ್ರಕಾರ ಲಾರಿ ಬ್ರೇಕ್‌ ಫೈಲ್‌ ಆಗಿರುವುದರಿಂದ ಅಪಘಾತ ಘಟಿಸಿದೆ. ಆದರೆ ಪೊಲೀಸರು ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

ಮೃತ ಪಟ್ಟವರನ್ನು, ಬಡಾಲನ ಅಂಕಲಗಿಯ ಕಾಶವ್ವ ರುದ್ರಪ್ಪ ಶಿವಪ್ಪನವರ್‌(40), ಮಲ್ಲವ್ವಾ ಭರಮಪ್ಪ ಹುಂದ್ರಿ(55), ರುದ್ರವ್ವಾ ರಾಮಲಿಂಗ ಬಾನಿ(40), ಕಮಲವ್ವ ನಾಗಪ್ಪ ಜಾಡರ್‌ (40), ಮತ್ತು ಗಿರಿಯಾಲದ ಈರಣ್ಣ ಬಸವಂತ ಇಟಗಿ (10) ಎಂದು ಗುರುತಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+