ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು-ನಿಜಾಮುದ್ದೀನ್ ನಡುವೆ ವಾರಕ್ಕೊಮ್ಮೆ ವಿಂಟರ್ ಸ್ಪೆಷಲ್ ರೈಲು
ಬೆಂಗಳೂರು: ದಕ್ಷಿಣ ರೈಲ್ವೆಯು ವಾರಕ್ಕೊಮ್ಮೆ ಬೆಂಗಳೂರಿನಿಂದ ನಿಜಾಮುದ್ದೀನ್ಗೆ ವಿಂಟರ್ ಸ್ಪೆಷಲ್ ರೈಲು ಸಂಚಾರವನ್ನು ಡಿಸೆಂಬರ್ 10ರಿಂದ ಆರಂಭಿಸಲಿದೆ ಎಂದು ರೈಲ್ವೇ ಮಂಡಳಿಯ ಪ್ರಕಟಣೆ ತಿಳಿಸಿದೆ.
ರೈಲು ನಂಬರ್ 414 , ಬೆಂಗಳೂರು -ನಿಜಾಮುದ್ದೀನ್ ರೈಲು, ಪ್ರತಿ ಭಾನುವಾರ ರಾತ್ರಿ 11.55ಕ್ಕೆ ಬೆಂಗಳೂರಿನಿಂದ ಹೊರಟು ಮಂಗಳವಾರ ಬೆಳಿಗ್ಗೆ 4.30ಕ್ಕೆ ನಿಜಾಮುದ್ದೀನ್ ತಲುಪಲಿದೆ. ನಂತರ ಬುಧವಾರದಂದು ಬೆಳಿಗ್ಗೆ 8.45ಕ್ಕೆ ನಿಜಾಮುದ್ದೀನ್ನಿಂದ ಹೊರಡುವ ರೈಲು ಶುಕ್ರವಾರ ಬೆಳಿಗ್ಗೆ 4.15ಕ್ಕೆ ಬೆಂಗಳೂರು ತಲುಪಲಿದೆ.
ಡಿಸೆಂಬರ್ 10, 17, 24, 31, ಮತ್ತು ಜನವರಿ 7, 14ರಂದು ಬೆಂಗಳೂರಿನಿಂದ ಈ ರೈಲು ಹೊರಡಲಿದೆ. ಡಿಸೆಂಬರ್ 13, 20, 27, ಮತ್ತು ಜನವರಿ 3, 10 ಮತ್ತು 17ರಂದು ರೈಲು ನಿಜಾಮುದ್ದೀನ್ನಿಂದ ಮರು ಸಂಚಾರ ಆರಂಭಿಸಲಿದೆ. ಚಳಿಗಾಲದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ದೃಷ್ಠಿಯಲ್ಲಿ ಈ ಹೊಸ ಸಂಚಾರ ಆರಂಭಿಸಲಾಗಿದೆ ಎಂದು ರೈಲ್ವೇ ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]