Get Updates
Get notified of breaking news, exclusive insights, and must-see stories!

ಪಂಚತಾರಾ ಹೊಟೇಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿಗಳ ಆತ್ಮಹತ್ಯೆ

ಬೆಂಗಳೂರು : ನಗರದ ಓಬೆರಾಯ್‌ ಪಂಚತಾರಾ ಹೋಟೆಲಿನಲ್ಲಿ ಆಂಧ್ರಪ್ರದೇಶದ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸೋಮವಾರ ವರದಿಯಾಗಿದೆ.

ಮೃತ ದಂಪತಿಗಳನ್ನು ಶ್ರೀನಿವಾಸ್‌ ಹಾಗೂ ಜಯಲಕ್ಷ್ಮಿ ಎಂದು ಪೊಲೀಸರು ಗುರ್ತಿಸಿದ್ದಾರೆ. ಹೊಟೇಲಿನಲ್ಲಿ ವಾಸ್ತವ್ಯ ಹೂಡಿದ ಸ್ವಲ್ಪ ಹೊತ್ತಿನಲ್ಲೇ ಹಣ್ಣಿನ ರಸವನ್ನು ತರಿಸಿಕೊಂಡ ದಂಪತಿಗಳು ಅದರಲ್ಲಿ ವಿಷ ಬೆರೆಸಿ ಸೇವಿಸಿದ್ದಾರೆ. ವಿಷ ಸೇವಿಸುವ ಮುನ್ನ ತಮ್ಮ 18 ತಿಂಗಳ ಗಂಡು ಮಗು ಹಾಗೂ 3 ವರ್ಷದ ಮಗಳಿಗೆ ವಿಷ ಉಣ್ಣಿಸಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.

ಶ್ರೀನಿವಾಸ್‌ ಹಾಗೂ ಜಯಲಕ್ಷ್ಮಿ ಅವರದ್ದು ಪ್ರೇಮ ವಿವಾಹ. ನಾಲ್ಕು ವರ್ಷಗಳ ಹಿಂದೆ ಅವರ ವಿವಾಹವಾದಾಗ ಶ್ರೀನಿವಾಸ್‌ ಅವರ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು . ಇತ್ತೀಚೆಗೆ ಅವರ ಮರು ವಿವಾಹಕ್ಕೆ ಮತ್ತೊಂದು ಹೆಣ್ಣನ್ನು ಗೊತ್ತು ಪಡಿಸಿ, ಡಿಸೆಂಬರ್‌ 6 ರಂದು ಮದುವೆಯನ್ನು ಗೊತ್ತು ಪಡಿಸಿದ್ದರು. ಇದರಿಂದ ಬೇಸತ್ತ ಶ್ರೀನಿವಾಸ್‌ ಅವರು ಹೆಂಡತಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಮರಣಕ್ಕೆ ಕಾರಣಗಳನ್ನು ಪತ್ರದಲ್ಲಿ ಬರೆದಿರಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+