ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆಗಳು ಈಡೇರದೇ ಹಠಮಾರಿ ವೀರಪ್ಪನ್‌ ಹೇಗೆ ತೃಪ್ತನಾದ !

By Staff
|
Google Oneindia Kannada News

ಬೆಂಗಳೂರು : ರಾಜ್‌ ಬಿಡುಗಡೆಗಾಗಿ ವೀರಪ್ಪನ್‌ ಇಟ್ಟಿದ್ದ ಬೇಡಿಕೆಗಳ ಬಗ್ಗೆ ಚರ್ಚಿಸಬೇಕಾದ ಕಾಲ ಬಂದಿದೆ. ಆತ ಇಟ್ಟಿದ್ದ 10 ಬೇಡಿಕೆಗಳು, ಅದಕ್ಕೆ ಸರಕಾರ ಕೊಟ್ಟ ಉತ್ತರ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ನೋಡಿದರೆ ವೀರಪ್ಪನ್‌ಗೆ ಪರವಾದ ಏನೂನೂ ಬೆಳವಣಿಗೆ ನಡೆದೇ ಇಲ್ಲ ಎಂಬುದು ಖಾತ್ರಿಯಾಗುತ್ತದೆ.

ಬೇಡಿಕೆಗಳ ಸ್ವರೂಪ ಮತ್ತು ಅವುಗಳ ಈಗಿನ ಪರಿಸ್ಥಿತಿ ಅವಲೋಕಿಸಿದರೆ ವೀರಪ್ಪನ್‌, ರಾಜ್‌ರಂಥ ಜನಪ್ರಿಯ ವ್ಯಕ್ತಿಯನ್ನು ಹಿಡಿದಿಟ್ಟುಕೊಂಡು, ಬೆಟ್ಟ ಅಗೆದು ಇಲಿ ಹಿಡಿದ ಕತೆಗೆ ಪೂರಕವಾಗಿ ನಡೆದುಕೊಂಡ! ಆತನ ಬೇಡಿಕೆಗಳು ಹಾಗೂ ಅವುಗಳ ಬಗೆಗೆ ಸರ್ಕಾರ ತಳೆದಿರುವ ನಿಲುವಿನ ಬಗ್ಗೆ ಒಂದು ಅವಲೋಕನ ಇಲ್ಲಿದೆ.

  • ತಮಿಳುನಾಡಿಗೆ ತಕ್ಷಣ 205 ಟಿಎಂಸಿ ನೀರಿನ ಬಿಡುಗಡೆ : ಈ ವಿಷಯದಲ್ಲಿ ಭವಿಷ್ಯದಲ್ಲಿ ಯಾವುದೇ ಕಿರಿಕಿರಿ ಉಂಟಾಗಬಾರದು ಎಂಬುದು ಆತನ ಮೊದಲ ಬೇಡಿಕೆ. ಇದಕ್ಕೆ ಸರಕಾರ ಕೊಟ್ಟ ಉತ್ತರ ನೋಡಿ. ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ಜಾರಿಗೆ ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ ಕಾವೇರಿ ನದಿ ನೀರು ಪ್ರಾಧಿಕಾರ ರಚಿಸಲಾಗಿದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಶೀಘ್ರದಲ್ಲೇ ಬರಲಿದೆ. ಅಂದರೆ ಬೇಡಿಕೆಯ ಬಗ್ಗೆ ಬೇರೆ ಮಾತನಾಡಲು ಅವಕಾಶವೇ ಇಲ್ಲ.
  • 1991ನೇ ಕಾವೇರಿ ಗಲಭೆಯಲ್ಲಿ ನೊಂದ ಎಲ್ಲ ತಮಿಳು ಸಂತ್ರಸ್ತರಿಗೆ ಸಮರ್ಪಕ ಮತ್ತು ನ್ಯಾಯಯುತ ಪರಿಹಾರ: 12 ತಿಂಗಳ ಒಳಗಾಗಿ ವಿಚಾರಣೆ ಮುಗಿಯಬೇಕಾಗಿತ್ತು. ಕೆಲಸದ ಒತ್ತಡದಿಂದಾಗಿ ಆಗಿಲ್ಲ. 31 ಮೇ 2001ರವರೆಗೆ ಅವಧಿ ವಿಸ್ತರಿಸಿ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ ಎಂದು ಉತ್ತರ ನೀಡಿತ್ತು. ನಂತರದ ಬೆಳವಣಿಗೆ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
  • ಕರ್ನಾಟಕದಲ್ಲಿ ತಮಿಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಬೇಕು : ಭಾಷಾ ಅಲ್ಪ ಸಂಖ್ಯಾತರ ಪ್ರಮಾಣ ಶೇ. 15ಕ್ಕಿಂತ ಹೆಚ್ಚಾಗಿದ್ದಲ್ಲಿ ಸರ್ಕಾರದ ಪ್ರಕಟಣೆಗಳು, ಆಜ್ಞೆಗಳು, ನೀತಿ- ನಿಯಮಾವಳಿಗಳು ಆಯಾ ಅಲ್ಪ ಸಂಖ್ಯಾತ ಭಾಷೆಯಲ್ಲೇ ಇರಬೇಕು ಎನ್ನುವುದು ಕೇಂದ್ರ ಸರ್ಕಾರ ಕೊಟ್ಟಿರುವ ಸೂಚನೆ. ಈ ನಿಯಮವು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ನಿಯಮದ ಮೊರೆ ಹೊಕ್ಕಿತು. ಒಟ್ಟಾರೆ ಹೇಳಬೇಕೆಂದರೆ ಇದರ ಫಲಶ್ರುತಿ ಸೊನ್ನೆಯೆ.
  • ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಸ್ಥಾಪನೆ : ತಿರುವಳ್ಳುವರ್‌ ಪ್ರತಿಮೆಯನ್ನು ಬೆಂಗಳೂರಿನಲ್ಲೂ , ಸರ್ವಜ್ಞನ ಪ್ರತಿಮೆಯನ್ನು ಚೆನ್ನೈನಲ್ಲೂ ಸ್ಥಾಪಿಸಲು ಉಭಯ ರಾಜ್ಯಗಳ ಮುಖ.್ಯಮಂತ್ರಿಗಳೂ ಒಪ್ಪಿಕೊಂಡಿದ್ದಾರೆ. ಬಹುಶಃ ವೀರಪ್ಪನ್‌ ಬೇಡಿಕೆಗಳಲ್ಲಿ ಶೀಘ್ರ ಈಡೇರುವ ಬೇಡಿಕೆ ಇದೇ ಆಗಬಹುದೇನೋ ಎನಿಸುತ್ತದೆ.
  • ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ತಕ್ಷಣ ಬಹಿರಂಗವಾಗಬೇಕು : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸುಗಳ ಅನ್ವಯ ವಿಚಾರಣೆ ಅಖೈರುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗುತ್ತಿದೆ ಎಂದು ಉತ್ತರ ನೀಡಿತ್ತು . ನಂತರದ ಬೆಳವಣಿಗೆಯಲ್ಲಿ ಎರಡೂ ಸರಕಾರಗಳು ತಲಾ ಐದು ಕೋಟಿ ರೂ. ಮೊತ್ತದ ಪರಿಹಾರ ನಿಧಿ ಸ್ಥಾಪಿಸಿವೆ.
  • ಕರ್ನಾಟಕದ ಜೈಲುಗಳಲ್ಲಿರುವ ನಿರಪರಾಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು : ಈ ಬೇಡಿಕೆಗೆ ಎರಡೂ ರಾಜ್ಯ ಸರಕಾರಗಳು ಒಪ್ಪಿದ್ದವು. ಆದರೆ, ವೀರಪ್ಪನಿಂದ ಹತರಾದ ಪೊಲೀಸ್‌ ಅಧಿಕಾರಿ ಶಕೀಲ್‌ ಅವರ ತಂದೆ ಅಬ್ದುಲ್‌ ಕರೀಂ ಸಲ್ಲಿಸಿದ ಮೇಲ್ಮನವಿ ಅಂಗೀಕರಿಸಿ ಸುಪ್ರೀಂಕೋರ್ಟ್‌ ಎರಡೂ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡು ಬಿಡುಗಡೆಗೊಳಿಸಲು ನಿರಾಕರಿಸಿದೆ.
  • ಕಂಬಾಲಪಲ್ಲಿ ಹತ್ಯಾಕಾಂಡದಲ್ಲಿ ಹತರಾದ ಪರಿಶಿಷ್ಟ ಜಾತಿ ಮತ್ತು ವರ್ಗದ 9 ಜನರ ಕುಟುಂಬಗಳಿಗೆ ಸಮರ್ಪಕ ಪರಿಹಾರ : ಕೂಲಂಕಷ ವಿವರ ಪಡೆದು ಪರಿಹಾರ ನೀಡುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಸರಕಾರ ಹೇಳಿದೆ.
  • ನೀಲಗಿರಿಯ ಚಹಾ ಬೆಳೆಗಾರರ ಹಿತದೃಷ್ಟಿಯಿಂದ ಹಸುರು ಎಲೆ ಖರೀದಿಯ ಕನಿಷ್ಠ ಬೆಲೆ 15 ರು.ಗೆ ಏರಿಕೆ : ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿವೆ ಎಂದು ತಿಳಿಸಲಾಗಿದೆ. (ಈಗಿನ ಕನಿಷ್ಠ ಬೆಲೆ 9.50 ರುಪಾಯಿ)
  • ತಮಿಳುನಾಡು ಜೈಲಿನಲ್ಲಿರುವ 5 ಮಂದಿ ಕಟ್ಟಾ ತಮಿಳು ಉಗ್ರಗಾಮಿಗಳನ್ನು ಬಿಡುಗಡೆ: ಕಾನೂನು ಪ್ರಶ್ನೆ ಮತ್ತು ಇತರ ಸಂವಿಧಾನಿಕ ತಕರಾರುಗಳನ್ನು ಸುಪ್ರೀಂಕೋರ್ಟ್‌ ಎತ್ತಿದೆ.
  • ಮಂಜು ಅಲೈ ಎಸ್ಟೇಟ್‌ ಕಾರ್ಮಿಕರ ಸಮಸ್ಯೆ ನಿವಾರಣೆ, ಕನಿಷ್ಠ ವೇತನ 150 ರು.ಗೆ ನಿಗದಿ: ಕನಿಷ್ಠ ವೇತನ ಏರಿಕೆ ಬಗೆಗೆ ಪರಸ್ಪರ ಸಮಾಲೋಚಿಸಿ ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿದೆ. (ಈಗಿರುವ ಕನಿಷ್ಠ ವೇತನ 139 ರುಪಾಯಿ)

ಅಖಿಲ ಭಾರತ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯಂ ಸ್ವಾಮಿ, ಕರ್ನಾಟಕ ಸರಕಾರ ವೀರಪ್ಪನ್‌ಗೆ ನೀಡಿದೆ ಎಂದು ಆಪಾದಿಸಿರುವ 30 ಕೋಟಿ ಹಣದ ವಿಷಯವೂ ಸೇರಿದಂತೆ ಅನೇಕ ಊಹಾಪೋಹಗಳಿಗೆ ಉತ್ತರ ಹೇಳುವವರೇ ಇಲ್ಲದಂತಾಗಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ವೀರಪ್ಪನ್‌ನ ಎರಡು ಮಹಾತ್ವಾಕಾಂಕ್ಷೆ ಬೇಡಿಕೆಗಳಾದ ಟಾಡಾ ಬಂಧಿಗಳ ಬಿಡುಗಡೆ ಮತ್ತು ತಮಿಳು ಉಗ್ರಗಾಮಿಗಳ ಬಿಡುಗಡೆ ಕನಸೇ ಆಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಈಗ ಎದ್ದಿರುವ ಪ್ರಶ್ನೆಗಳೆಂದರೆ ಇಷ್ಟು ಬೆಳವಣಿಗೆಯಿಂದ ವೀರಪ್ಪನ್‌ಗೆ ಆದ ಲಾಭವೇನು ? ಎಂಬುದು. ಅಂದರೆ ವೀರಪ್ಪನ್‌ ಮತ್ತೊಬ್ಬರ ಒತ್ತೆಯಾಳಿನಂತೆ ವರ್ತಿಸಲು ಹೋಗಿ ಮಣ್ಣುಮುಕ್ಕಿದ ಕತೆಯಂತೆ ಈ ಎಲ್ಲಾ ಘಟನೆಗಳೂ ಕಾಣುತ್ತಿವೆ. ಈ ನಡುವೆ ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ಮಾತನ್ನು ಕೇಂದ್ರ ಸಚಿವ ವೆಂಕಯ್ಯನಾಯ್ಡು ಆಡಿದ್ದಾರೆ. ಇದು ಕೇಂದ್ರ ಸರಕಾರ ಪಾಠ ಕಲಿತಿರುವುದನ್ನು ಸೂಚಿಸುತ್ತದೆ. ಈ ಸಂಬಂಧ ಗಂಭೀರ ಯತ್ನ ನಡೆದರೆ ರಾಜ್‌ ಅಪಹರಣದಿಂದ ವೀರಪ್ಪನ್‌ ಲಾಭ ಪಡೆದದ್ದಕ್ಕಿಂತ ತನ್ನ ಹಳ್ಳ ತಾನೇ ತೋಡಿಕೊಂಡಂತಾಗುತ್ತದೆ. ಇಷ್ಟಕ್ಕೂ ವೀರಪ್ಪನ್‌ ಹೇಗೆ ಸಂಧಾನಕಾರ ನೆಡುಮಾರನ್‌ ಅವರ ಮಾತಿಗೆ ಒಪ್ಪಿಗೆ ನೀಡಿದ, ಇದರ ಹಿಂದಿರುವ ಕಾರಣಗಳೇನು ಎಂಬುದನ್ನು ನೆಡುಮಾರನ್‌ ಮಾತ್ರ ವಿವರಿಸಿ ಹೇಳಲು ಸಾಧ್ಯ ಎನಿಸುತ್ತದೆ.

ಮುಖಪುಟ / ರಾಜ್‌ ಬಿಡುಗಡೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X