ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾಗೆ ತೆರಳಲು ತುದಿಗಾಲಲ್ಲಿ ನಿಂತವರಿಗೆ ಹಾಟ್‌ ನ್ಯೂಸ್‌

By Staff
|
Google Oneindia Kannada News

ವಾಷಿಂಗ್ಟನ್‌ : ಕೆಲವೇ ವರ್ಷಗಳ ಹಿಂದೆ ಪ್ರತಿಭಾ ಪಲಾಯನದ ಕೂಗುಗಳು ಕೇಳಿಬರುತ್ತಿತ್ತು. ಈಗ ಮನೆಗೊಬ್ಬರಂತೆ ವಿದೇಶಕ್ಕೆ ಹಾರಿದ್ದಾರೆ ನಮ್ಮ ಪ್ರತಿಭಾವಂತರು . ಹೈಟೆಕ್‌ ತಂತ್ರಜ್ಞಾನದ ಅಭಿವೃದ್ಧಿ, ಉನ್ನತ ವ್ಯಾಸಂಗದ ಅವಕಾಶಗಳು ಹೆಚ್ಚಾದ ನಂತರವಂತೂ ವಿಶ್ವಾದ್ಯಂತ ಭಾರತದ ಮಿದುಳಿಗೆ ಬಂಗಾರದ ಬೆಲೆ ಬಂದಿದೆ. ಪ್ರತಿಭಾ ಪಲಾಯನದ ಮಾತಾಡುತ್ತಿದ್ದ ಮಂದಿಯೇ ವಿದೇಶಗಳಲ್ಲಿ ನೆಲೆಸಿದ್ದಾರೆ.

ಈಗ ಮತ್ತೊಂದು ಸಂತಸದ ಸುದ್ದಿ ಅಮೆರಿಕಾಕ್ಕೆ ಉದ್ಯೋಗ ಅರಸಿ ಹೋಗುವವರಿಗೆ ಇಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ ಹೊಸದಾಗಿ 6 ಲಕ್ಷ ವೀಸಾ ನೀಡಲು ಅಮೆರಿಕಾ ಸೆನೆಟ್‌ ಮಂಗಳವಾರ ಕಾಯಿದೆಯ ಮೂಲಕ ಅನುಮತಿ ನೀಡಿದೆ. ಹೈಟೆಕ್‌ ತಂತ್ರಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಈ ಹೆಚ್ಚುವರಿ ವೀಸಾದಲ್ಲಿ ಸಿಂಹಪಾಲು.

ಎಚ್‌1 ಬಿ ತಾತ್ಕಾಲಿಕ ವೀಸಾ ನೀಡುವ ಈ ಮಸೂದೆ ಅಮೆರಿಕಾ ಸೆನೆಟ್‌ನಲ್ಲಿ ಬಹುಮತದ ಬೆಂಬಲ ಪಡೆದಿದೆ. ಆದರೆ, ಮತ್ತೊಂದು ಸದನ ಇದಕ್ಕೆ ಪೂರ್ಣಾನುಮತಿ ನೀಡಿದ ತರುವಾಯ ಇದು ಕಾರ್ಯರೂಪಕ್ಕೆ ಬರಲಿದೆ. ಭಾರತೀಯ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ಪ್ರೋಗ್ರಾಮರ್‌ಗಳಿಗೆ ಇದರಿಂದ ಭಾರಿ ಲಾಭ ಆಗಲಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ಯೋಗಾವಕಾಶಗಳ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಭರ್ತಿಮಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಮೆರಿಕೆಯಲ್ಲಿರುವ ದೊಡ್ಡ ಕಂಪನಿಗಳು ತಂತ್ರಜ್ಞರ ಕೊರತೆ ಅನುಭವಿಸುತ್ತಿವೆ. ಒಂದು ವೇಳೆ ಅಮೆರಿಕಾ ಸಂಸತ್‌ ವೀಸಾ ನೀಡಿಕೆಗೆ ವಿಳಂಬ ಮಾಡಿದರೆ, ಈ ಕಂಪನಿಗಳೇ ಪ್ರತಿಭಾವಂತರಿರುವ ನಾಡಿಗೆ ತೆರಳಿ ತಮ್ಮ ಕಂಪನಿ ಸ್ಥಾಪಿಸುವ ಅಪಾಯ ಇರುವುದನ್ನು ಅರಿತಿರುವ ಶ್ವೇತಭವನ, 6 ಲಕ್ಷ ಹೊಸ ವೀಸಾ ನೀಡಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ಸೆನೆಟರ್‌ ಅಬ್ರಹಾಂ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X