ರಾಜ್‌ರನ್ನು ತಕ್ಷಣ ಬಿಡುಗಡೆ ಮಾಡುವಂತೆ ವೀರಪ್ಪನ್‌ಗೆ ತಮಿಳರ ಮನವಿ

ಬೆಂಗಳೂರು: ಕರ್ನಾಟಕ ಮೂಲದ ಹದಿನೇಳು ತಮಿಳು ಸಂಘಟನೆಗಳು ರಾಜ್‌ ಕುಮಾರ್‌ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ವೀರಪ್ಪನ್‌ನ್ನು ಕೇಳಿಕೊಂಡಿವೆ. ಈ ಕುರಿತ ಮನವಿ ಪತ್ರವನ್ನು ವೀರಪ್ಪನ್‌ಗೆ ತಲುಪಿಸುವಂತೆ ಸಂಧಾನಕಾರ ನಕ್ಕೀರನ್‌ ಗೋಪಾಲ್‌ಗೆ ಬುಧವಾರ ನೀ-ಡಿವೆ.

ತಮಿಳು ಸಂಘಟನೆಗಳ ಪ್ರತಿನಿಧಿಗಳು ಚೆನ್ನೈಯಲ್ಲಿ ಗೋಪಾಲ್‌ರನ್ನು ಭೇಟಿಯಾಗಿ ತಮ್ಮ ಮನವಿ ಪತ್ರವನ್ನು ವೀರಪ್ಪನ್‌ಗೆ ತಲು-ಪಿ-ಸ-ಲು, ಕನ್ನಡಿಗರು ಮತ್ತು ತಮಿಳರ ಬಾಂಧವ್ಯ ರಕ್ಷಣೆ ಹಾಗೂ ಕರ್ನಾಟಕದಲ್ಲಿರುವ ತಮಿಳರ ಹಿತದೃಷ್ಟಿಯಿಂದಲೂ ರಾಜ್‌ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬ ತಮ್ಮ ಮನ-ವಿಯನ್ನು ವೀರಪ್ಪನ್‌ಗೆ ಮನವರಿಕೆ ಮಾಡಿಕೊಡುವಂತೆ ಗೋಪಾಲ್‌ರನ್ನು ಕೇಳಿಕೊಂಡಿದ್ದಾರೆ. ಮನವಿ ಪತ್ರವನ್ನು ಪಡೆದುಕೊಂಡ ಗೋಪಾಲ್‌ ತಮಿಳು ಸಂಘಗಳ ಈ ಪ್ರಯತ್ನ ಶ್ಲಾಘನಾರ್ಹ ಎಂದಿದ್ದಾರೆ.

ತಿರುವಳ್ಳುವರ್‌ ಪೀಪಲ್‌ ಅಸೋಸಿಯೇಷನ್‌ನ ಪ್ರಮುಖ ಉದಯ ಕುಮಾರ್‌ ನೇತೃತ್ವದಲ್ಲಿ , ಬೆಂಗಳೂರು ತಮಿಳು ಸಂಘಂನ ಅಧ್ಯಕ್ಷ ಎಂ. ದಾಸ್‌, ತಿರುವಳ್ಳುವರ್‌ ಸಂಘದ ಅಧ್ಯಕ್ಷ ಎ.ಎಂ. ವೇಣುಗೋಪಾಲ್‌ ಮತ್ತಿತರರು ಗೋಪಾಲ್‌ ಅವರನ್ನು ಭೇಟಿಯಾಗಿದ್ದರು.

(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+