ಬೆಂದ್ರ್ ತೀರ್ಥವನ್ನು ಪ್ರವಾಸೀ ತಾಣವನ್ನಾಗಿ ಮಾಡುವುದಿಲ್ಲ
ಪುತ್ತೂರು : ಇಲ್ಲಿನ ಬಿಸಿನೀರಿನ ಬುಗ್ಗೆ , ಬೆಂದ್ರ್ ತೀರ್ಥ ವನ್ನು -ಪ್ರ-ವಾಸೀ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವುದಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.
ಇಲ್ಲಿಗೆ ಬರುವ ಪ್ರವಾಸಿಗರ ಕೊರತೆಯಿಂದಾಗಿ ಬೆಂದ್ರ್ ತೀರ್ಥವನ್ನು ಪ್ರವಾಸೀ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಕೈ ಬಿಡಲಾಗಿದೆ. ಈ ಕೊಳದಲ್ಲಿ ಬಿಸಿ ನೀರು ಉಕ್ಕುತ್ತಿದ್ದುದರಿಂದ ಇದನ್ನು ಬೆಂದ್ರ್‌ತೀರ್ಥ( ಬಿಸಿ ನೀರಿನ ತೀರ್ಥ) ಎಂದೇ ಕರೆಯುತ್ತಾರೆ. ಕಳೆದ ವರ್ಷ ಕೊಳಕ್ಕೆ ಹೊಂದಿಕೊಂಡಿರುವ ನದಿಗೆ ಅಣೆಕಟ್ಟು ಕಟ್ಟಿರುವುದರ ಪರಿಣಾಮವಾಗಿ ಕೊಳ ನದಿ ನೀರಿನಲ್ಲಿ ಮುಳುಗಿ ಹೋಗಿತ್ತು. ಇದರಿಂದಾಗಿ ಕೊಳದಲ್ಲಿ ಬಿಸಿನೀರಿನ ಒರತೆ ನಿಂತು ಹೋಗಿತ್ತು. ಅಕ್ಕ ಪಕ್ಕದಲ್ಲಿ ಅಡಿಕೆ ತೋಟದ ಮಾಲಿಕರು ಕೊಳವೆ ಬಾವಿ ತೋಡಿರುವುದರ ಪರಿಣಾಮವಾಗಿ ನೀರಿನ ಒರತೆ ಬತ್ತಿ ಹೋಗಲಾರಂಭಿಸಿದೆ.
ಈ ಕುರಿತು ಸರಕಾರಕ್ಕೆ ಗ್ರಾಮಸ್ಥರು ಮಾಡಿಕೊಂಡ ಮನವಿಯಿಂದ ಯಾವುದೇ ಪ್ರಯೋಜನ ವಾಗಲಿಲ್ಲ. ಕೊಳದಲ್ಲಿ ಉಕ್ಕುತ್ತಿದ್ದ ಬಿಸಿನೀರಿನ ಬದಲಿಗೆ ತಣ್ಣೀರೇ ಬರುತ್ತಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಸಮಸ್ಯೆ ಹಾಗೆಯೇ ಉಳಿದುಕೊಂಡಿದ್ದರಿಂದ ಪ್ರವಾಸೋದ್ಯಮ ಇಲಾಖೆ ಈ ಪ್ರದೇಶವನ್ನು ಪ್ರವಾಸೀ ತಾಣವಾಗಿ ಅಭಿವೃದ್ಧಿ ಪಡಿಸುವ ಕಾರ್ಯದಿಂದ ಹಿಂದೆ ಸರಿದಿದೆ.
(ಇನ್ಫೋ ವಾರ್ತೆ)












Click it and Unblock the Notifications