ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಯೋಜನಾ ಗಾತ್ರ 7,250 ಕೋಟಿ ರುಪಾಯಿಗಳಿಗೆ ನಿಗದಿ

By Staff
|
Google Oneindia Kannada News

ನವದೆಹಲಿ : 2000-2001ನೇ ಇಸವಿಗಾಗಿ ರಾಜ್ಯದ ಯೋಜನಾ ಗಾತ್ರವನ್ನು 7250 ಕೋಟಿ ರುಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಈ ಸಂಬಂಧ ಬುಧವಾರ ಚರ್ಚಿಸಿದ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್‌ ಹಾಗೂ ಮುಖ್ಯಮಂತ್ರಿ ಕೃಷ್ಣ ಈ ಸಾಲಿನ ರಾಜ್ಯದ ಯೋಜನಾ ಗಾತ್ರವನ್ನು ಅಂತಿಮಗೊಳಿಸಿದ್ದಾರೆ. ಈ ಸಾಲಿನ ರಾಜ್ಯದ ಬಜೆಟ್‌ ಗಾತ್ರ 7,274 ಕೋಟಿ ರೂಪಾಯಿಗಳಾಗಿದ್ದು, ಇದ್ದಕ್ಕೆ ಆಯೋಗ ಒಪ್ಪಿಗೆ ನೀಡಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯೋಜನಾ ವೆಚ್ಚದ ವಿಷಯವಾಗಿ ರಾಜ್ಯದ ಸಾಧನೆಯನ್ನು ಶ್ಲಾಘಿಸಿರುವ ಕೆ.ಸಿ. ಪಂತ್‌, 9ನೇ ಆಯೋಗದ ಮೊದಲ 2 ವರ್ಷಗಳಲ್ಲಿ ರಾಜ್ಯದ ಯೋಜನಾ ವೆಚ್ಚ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿತ್ತು ಎಂದು ತಿಳಿಸಿದ್ದಾರೆ. ವಿದ್ಯುತ್‌ ವಲಯದ ಖಾಸಗೀಕರಣ, ವ್ಯವಸಾಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗ್ರಾಹಕ ಶುಲ್ಕದಲ್ಲಿ ಹೆಚ್ಚಳಗೊಳಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಪಂತ್‌ ಸ್ವಾಗತಿಸಿದ್ದಾರೆ.

ಕೃಷ್ಣ-ಮಮತಾ ಭೇಟಿ : ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕೃಷ್ಣ ಅವರು ರಾಜ್ಯದ ರೈಲ್ವೇ ಯೋಜನೆಗಳ ಕುರಿತು ಚರ್ಚೆ ನಡೆಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X