-ದ-ಸ-ರಾ ಉದ್ಘಾ-ಟ-ನೆ : ಈಗ ಸ್ವಾತಂತ್ರ್ಯ ಹೋರಾಟಗಾರ ಜೋಯಿಸ್‌ರ ಸರ-ದಿ
ಮೈಸೂರು : ದಸರಾ ಉತ್ಸವವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್. ಜೋಯಿಸ್ ಉದ್ಘಾಟಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ವಿಶ್ವನಾಥ್ ಬುಧವಾರ ಹೇಳಿದ್ದಾರೆ.
ಸೆಪ್ಟೆಂಬರ್ 28 ರಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ , ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವ ಆರಂಭವಾಗಲಿದೆ. ವಿಶ್ವನಾಥ್ ಅವರು ಬುಧವಾರದಂದು ಎಂ.ಎನ್. ಜೋಯಿಸ್ ಅವರ ಮನೆಗೆ ತೆರಳಿ ದಸರಾ ಉದ್ಘಾಟಿಸುವಂತೆ ಅವರನ್ನು ಕೋರಿದ್ದು, ನಾಡಹಬ್ಬದ ಉದ್ಘಾಟಕರು ಯಾರು ಎನ್ನುವ ಪ್ರಶ್ನೆಗೆ ತೆರೆ ಬಿದ್ದಿದೆ.
ರಾಜ್ ಕುಮಾರ್ ಕೂಡ ದಸರಾ ಉತ್ಸವಕ್ಕೆ ನಮ್ಮ ಜೊತೆಯಾಗುವರು ಎನ್ನುವ ನಿರೀಕ್ಷೆಯಲ್ಲಿ ಉತ್ಸವವನ್ನು ಆರಂಭಿಸಲಾಗುವುದು ಎಂದು ವಿಶ್ವನಾಥ್ ಇನ್ಫೋ ಪ್ರತಿನಿಧಿಯಾಂದಿಗೆ ಮಾತನಾಡುತ್ತಾ ಹೇಳಿದರು. ರಾಜ್ ಅಪಹರಣದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲು ಉದ್ದೇಶಿಸಿದ್ದರೂ, ದಸರಾ ಪರಂಪರೆಗೆ ಚ್ಯುತಿ ಬಾರದಂತೆ ಆಚರಿಸಲಾಗುವುದು ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)












Click it and Unblock the Notifications