‘ಹುಬ್ಬಳ್ಳಿ ರೇಲ್ವೆ ವಿಭಾಗೀಯ ಕಚೇರಿ ಅಡಿಪಾಯ ಪೂಜೆ ಮಮತಾರಿಂದ’
ಹುಬ್ಬಳ್ಳಿ : ಸದ್ಯದಲ್ಲೇ ಕೇಂದ್ರ ರೇಲ್ವೆ ಮಂತ್ರಿ ಮಮತಾ ಬ್ಯಾನರ್ಜಿ ಹುಬ್ಬಳ್ಳಿಯ ರೇಲ್ವೆ ವಿಭಾಗೀಯ ಕಚೇರಿ ಕಟ್ಟಡದ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗುರುವಾರ ತಿಳಿಸಿದ್ದಾರೆ.
ರೇಲ್ವೆ ವಿಭಾಗೀಯ ಕಚೇರಿ ಕಟ್ಟಡ ಸ್ಥಾಪಿಸುವ ಕುರಿತ ಸರ್ಕಾರಿ ಪ್ರಕ್ರಿಯೆಗಳೆಲ್ಲಾ ಪೂರ್ಣವಾಗಿದ್ದು, ಶಂಕುಸ್ಥಾಪನೆ ದಿನವನ್ನು ಸದ್ಯದಲ್ಲೇ ನಿಗದಿಪಡಿಸಲಾಗುವುದು. ಶಂಕುಸ್ಥಾಪನೆಯನ್ನು ತಾವೇ ನೆರವೇರಿಸುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್ ಅವರಿಗೆ ಇತ್ತೀಚೆಗೆ ದೆಹಲಿಯಲ್ಲಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ ಎಂದು ಶೆಟ್ಟರ್ ಹೇಳಿದರು.
ಪ್ರತ್ಯೇಕ ಹೈಕೋರ್ಟ್ ಪೀಠಕ್ಕೆ ಜೈಟ್ಲಿ ಒಲವು : ಉತ್ತರ ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪಿಸುವ ಬಗ್ಗೆ ಕೇಂದ್ರ ಕಾನೂನು ಸಚಿವ ಅರುಣ್ ಜೈಟ್ಲಿ ಒಲವು ತೋರಿದ್ದಾರೆ. ಕರ್ನಾಟಕದ ಕಾನೂನು ಸಚಿವಾಲಯ ಈ ಕುರಿತ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ ಎಂ-ದು ಶೆಟ್ಟ-ರ್ ತಿಳಿ-ಸಿ-ದ-ರು.
(ಯುಎನ್‌ಐ)












Click it and Unblock the Notifications