Get Updates
Get notified of breaking news, exclusive insights, and must-see stories!

ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಎಸ್ಸೆನ್‌ ಅಂತ್ಯ ಸಂಸ್ಕಾರ

ಬೆಂಗಳೂರು : ನವಕರ್ನಾಟಕ ನಿರ್ಮಾಣದ ಹರಿಕಾರ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಬುಧವಾರ ಸಂಜೆ ಇಲ್ಲಿ ಗೆ ನಾಲ್ಕು ಕಿಲೋ ಮೀಟರ್‌ ದೂರದಲ್ಲಿರುವ ಸೀಬಾರದಲ್ಲಿ ನೆರವೇರಿತು.

ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪೊಲೀಸ್‌ ಪಡೆ ಕುಶಾಲತೋಪು ಹಾರಿಸುವ ಮೂಲಕ ತಮ್ಮ ಗೌರವ ಸಲ್ಲಿಸಿತು. ಕೇಂದ್ರ ಸರಕಾರ ಹಾಗೂ ರಾಜ್ಯಸರಕಾರದ ಪರವಾಗಿ ಪುಷ್ಪಗುಚ್ಛಗಳನ್ನು ಅರ್ಪಿಸಲಾಯಿತು. ಎಸ್ಸೆಎನ್‌ ಕುಟುಂಬ ವರ್ಗದವರು ಶಾಸ್ತ್ರೋಕ್ತ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಪೂರೈಸಿದರು.

ಉಪರಾಷ್ಟ್ರಪತಿ ಕೃಷ್ಣಕಾಂತ್‌, ರಾಜ್ಯಪಾಲರಾದ ವಿ.ಎಸ್‌. ರಮಾದೇವಿ, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಕೇಂದ್ರ ಸಚಿವರಾದ ಮುರಳಿ ಮನೋಹರ ಜೋಷಿ, ಅನಂತಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಂ. ವೀರಪ್ಪ ಮೊಯ್ಲಿ ಮತ್ತು ಎಸ್‌. ಬಂಗಾರಪ್ಪ ಅಗಲಿದ ನಾಯಕನಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದರು.

ಸಚಿವರುಗಳಾದ ಡಿ.ಕೆ. ಶಿವಕುಮಾರ್‌, ಜಯಚಂದ್ರ, ಪ್ರತಿಪಕ್ಷದ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಪಿ.ಜಿ.ಆರ್‌. ಸಿಂಧ್ಯಾ, ಪೊಲೀಸ್‌ ಮಹಾನಿರ್ದೇಶಕ ಸಿ. ದಿನಕರ್‌, ಮುಖ್ಯಕಾರ್ಯದರ್ಶಿ ಭಟ್ಟಾಚಾರ್ಯ ಮುಂತಾದ ನೂರಾರು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೆರವಣಿಗೆ : ಇದಕ್ಕೂ ಮುನ್ನ ಎಸ್‌.ಜೆ. ಎಂ. ಸಭಾಂಗಣದಲ್ಲಿ ಇಡಲಾಗಿದ್ದ ಎಸ್ಸೆನ್‌ ಅವರ ಪಾರ್ಥಿವ ಶರೀರಕ್ಕೆ ಸಾವಿರಾರು ಅಭಿಮಾನಿಗಳು, ಬಂಧುಗಳು ಪುಷ್ಪಾಂಜಲಿ ಅರ್ಪಿಸಿದರು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಸಭಾಂಗಣದಿಂದ ಎಸ್ಸೆನ್‌ ಕಳೇಬರವನ್ನು ಮೆರವಣಿಗೆಯ ಮೂಲಕ ರುದ್ರಭೂಮಿಗೆ ಕೊಂಡೊಯ್ಯಲಾಯಿತು.

ಶ್ರದ್ಧಾಂಜಲಿ: ಪ್ರಾಮಾಣಿಕತೆಗೆ ಹೆಸರಾಗಿದ್ದ, ಎಸ್ಸೆನ್‌ ಅವರ ನಿಧನಕ್ಕೆ ಪ್ರಧಾನಿ ವಾಜಪೇಯಿ, ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಸೇರಿದಂತೆ ಸಾವಿರಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಅಪಾರ ಪ್ರತಿಭೆಯ ನಿಜಲಿಂಗಪ್ಪನವರ ರಾಷ್ಟ್ರಸೇವೆ ಅಗಾಧವಾದುದು ಎಂದು ರಾಷ್ಟ್ರಪತಿಗಳು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ. ನಿಜಲಿಂಗಪ್ಪನರ ಕುಟುಂಬದವರಿಗೆ ಬರೆದಿರುವ ಪತ್ರದಲ್ಲಿ ಪ್ರಧಾನಿ ವಾಜಪೇಯಿ ಅವರು ಎಸ್‌ಎಸ್‌ ಅವರನ್ನು ಭಾರತದ ಮಹಾನ್‌ ಸುಪುತ್ರ ಎಂದು ಬಣ್ಣಿಸಿ, ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ್ದಾರೆ. ಕೇಂದ್ರ ಸಚಿವ ಮುರಳಿ ಮನೋಹರ ಜೋಷಿ ಅವರು ಸಾರ್ವಜನಿಕ ಜೀವನದ ನೈತಿಕ ಮೌಲ್ಯ ಎತ್ತಿಹಿಡಿದ ಮಹಾನ್‌ ಸಾಧಕ ಎಸ್ಸೆನ್‌ ಎಂದು ಕೊಂಡಾಡಿದ್ದಾರೆ.

ವಿಸ್ತುತ ಹಾಗೂ ಸಮಗ್ರ ಕರ್ನಾಟಕದ ರೂವಾರಿ ಎಸ್ಸೆನ್‌ ಎಂದು ವರ್ಣಿಸಿರುವ ರಮಾದೇವಿ ಅವರು ಭ್ರಷ್ಟಾಚಾರ ನಿರ್ಮೂಲನೆಗೆ ಅವರು ನಡೆಸಿದ ಹೋರಾಟವನ್ನು ನಾವು ಆದರ್ಶವಾಗಿ ಪಾಲಿಸಬೇಕೆಂದು ಹೇಳಿದ್ದಾರೆ. ಏಕೀಕರಣದಲ್ಲಿ ಎಸ್ಸೆನ್‌ ಅವರ ಪಾತ್ರ ಮಹತ್ತರವಾದುದಾಗಿತ್ತು ಎಂದು ಸಭಾಧ್ಯಕ್ಷ ವೆಂಕಟಪ್ಪ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+