ಅವನ ಆಟ ನಿಲ್ಲಿಸಬೇಕು ನನ್ನ ನೆಚ್ಚಿನ ಸಂಪಾದಕರೇ
ಅವನ ಆಟ ನಿಲ್ಲಿಸಬೇಕು ನನ್ನ ನೆಚ್ಚಿನ ಸಂಪಾದಕರೇ ,
ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಎಲ್ಲಾ ಅಂಕಣಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ಸುದ್ದಿಗಳೇ ಆಗಲಿ , ಒಳನಾಡು ಹಾಗೂ ಹೊರನಾಡಿನ ವಿಷಯಗಳೇ ಇರಲಿ, ಸಾಹಿತ್ಯವೇ ಆಗಿರಲಿ, ಆರೋಗ್ಯದ ವಿಚಾರವೇ ಇರಲಿ , ಅದ್ಭುತವಾಗಿ ವರ್ಣಿಸಲಾಗಿದೆ. ಮನಸು ಸೆಳೆಯುವಂಥದ್ದು ಡಾ. ರಾಜ್‌ಕುಮಾರ್ ಅವರ ಅಪಹರಣ ಸಂಬಂಧಿತ ಸುದ್ದಿಗಳು... ನನಗೆ ಅವರು ಚೆನ್ನಾಗಿದ್ದಾರೆ ಎಂಬ ಸುದ್ದಿ ನಿಮ್ಮ ವಾರ್ತೆಗಳಲ್ಲಿ ಓದಿದ ತಕ್ಷಣ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷಗಳೂ ಒಮ್ಮೆಗೇ ಆದವು.
ಬೆಂಗಳೂರಿನಲ್ಲಿ ಜನರು ರೊಚ್ಚಿಗೆದ್ದಿದ್ದಾರೆ....ಸಹಜ... ನಾವೆಲ್ಲಾ ಪ್ರೀತಿಸುವ ನೆಚ್ಚಿನ ನಾಯಕ, ಒಬ್ಬ ಕೀಳು ಮಟ್ಟದ ದಂತಚೋರನಿಂದ ಅಪಹರಣಕ್ಕೊಳಗಾಗಿದ್ದಾರೆ ಎಂದರೆ ಎಂಥ ಕಲ್ಲು ಹೃದಯವೂ ಮರುಗುವುದು ಸಹಜ.
ಆದರೆ ಜನ ಒಂದು ವಿಷಯವನ್ನು ಮರೆಯದಿದ್ದರೆ ಒಳಿತು. ಒಂದು ಸಲ ಡಾ. ರಾಜ್ ಅವರು ಅಲ್ಲಿಂದ ಬಂದ ಮೇಲೆ ನಾವು ಕನ್ನಡಿಗರೆಲ್ಲ ಬೇಕಾದರೆ ಕಾಡಿಗೆ ನುಗ್ಗಬಹುದು. ಜನ ಶಕ್ತಿಯ ಮುಂದೆ ಎಂಥ ಶಕ್ತಿಯೂ ನಿಲ್ಲಲಾರದು. ನಮ್ಮ ಸರಕಾರಗಳು ಒಂದು ಇಲಿಯನ್ನು ಹಿಡಿಯುವ ಶಕ್ತಿಯನ್ನೂ ಕಳೆದುಕೊಂಡು ಬಿಟ್ಟಿವೆ. ಅಂಥ ಸರಕಾರವನ್ನು ನಂಬಿಕೊಂಡು ಕುಳಿತರಾಗದು. ಜನರು ಮುಂದೆ ಬರಬೇಕು. ಈಗ ನಡೆಯುತ್ತಿರುವ ಪ್ರತಿಭಟನೆಗಳು , ಸಭೆಗಳು, ಭಜನೆಗಳು, ಪೂಜೆ ಹಾಗೂ ಪ್ರಾರ್ಥನೆಗಳು ನಾವು ಕನ್ನಡಿಗರೆಲ್ಲಾ ಒಂದು, ನಮ್ಮನ್ನು ಅಳಿಸಿಹಾಕುವುದಾಗಲೀ, ನಮ್ಮ ಹುತ್ತಕ್ಕೆ ಕೈ ಹಾಕುವುದಾಗಲಿ ಮಾಡುವುದು ಹಾನಿಕಾರಕ ಎಂಬುದನ್ನು ಸಾಬೀತು ಪಡಿಸಿವೆ. ನಮ್ಮ ಅಭಿಮಾನವನ್ನು ಕೆಣಕುವುದು ಆ ವೀರಪ್ಪನಿಗೆ ಆಟ ಆಗಿದೆ. ಅವನ ಆಟವನ್ನು ನಿಲ್ಲಿಸಲೇಬೇಕು. ಅಣ್ಣಾವ್ರ ಅಪಹರಣ ಅವರ ಕೊನೆ ಅಪಹರಣವಾಗಬೇಕು. ಅಂಥ ನಿಟ್ಟಿನಲ್ಲಿ ನಿಮ್ಮ ಪತ್ರಿಕೆ ಜನರ ಭಾವನೆಗಳನ್ನು ಬಿತ್ತರಿಸುವಂತಹ ಕೆಲಸ ಮಾಡಬೇಕು ಎಂಬುದೇ ನನ್ನ ಕಳಕಳಿಯ ಪ್ರಾರ್ಥನೆ. ನಿಮ್ಮಲ್ಲಿ ಸರಕಾರವನ್ನು ಬಡಿದೆಬ್ಬಿಸುವ ಶಕ್ತಿಯಿದೆ ಎಂಬುದನ್ನು ಮರೆಯದಿರಿ. ನನ್ನ ಆಶಯ ವೀರಪ್ಪನನ್ನು ಬಂಧೀಖಾನೆಯಲ್ಲಿ ನೋಡುವುದು... ಅದೂ ಕರ್ನಾಟಕದ ಬಂಧೀಖಾನೆಯಲ್ಲಿ. ಅವನು ಈವರೆಗೆ ನಡೆಸಿದ ಅನಾಹುತಗಳು ಕರ್ನಾಟಕದವರ ಪಾಲಿನಲ್ಲಿ ಹೆಚ್ಚಿಗೆ ಇದೆ. ಆದ್ದರಿಂದ ಅವನ ವಿಚಾರಣೆ ಇಲ್ಲೇ ಆಗಬೇಕು.
ನಿಮ್ಮ ಒಳಿತಿನ ಕೆಲಸವನ್ನು ಹೀಗೇ ಮುಂದುವರೆಸಿ ಎಂದು ಹಾರೈಸುವ ಓದುಗ.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications