ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿವಿ ‘ಅಮುಕ್ತ್‌’ದಲ್ಲಿ ಭಿನ್ನ ಮತ ಹೊಸ ಸಂಘಟನೆ ಅಸ್ತಿತ್ವಕ್ಕೆ

By Super
|
Google Oneindia Kannada News

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ 'ಅಮುಕ್ತ್‌ " ದಲ್ಲಿ ಭಿನ್ನಮತ ತಲೆದೋರಿದ್ದು, ಪ್ರಗತಿಪರ ಮಂಗಳೂರು ವಿವಿ ಕಾಲೇಜು ಅಧ್ಯಾಪಕರ ಪ್ರತ್ಯೇಕ ಸಂಘವೊಂದು ಅಸ್ತಿತ್ವಕ್ಕೆ ಬಂದಿದೆ.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕಾಲೇಜಿನ ಉಪನ್ಯಾಸಕ ಬಿ. ವಸಂತ ಶೆಟ್ಟಿಯ ನೇತೃತ್ವದಲ್ಲಿ ಈ ಹೊಸ ಸಂಘ ಹುಟ್ಟಿಕೊಂಡಿದೆ. ಅಮುಕ್ತ್‌ ಪದಾಧಿಕಾರಿಗಳು ಸ್ಥಾಪಿತ ಹಿತಾಸಕ್ತಿಗಳ ಒಳಿತನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಬೇರೆ ವೇದಿಕೆಯನ್ನು ನಿರ್ಮಿಸಿಕೊಳ್ಳಬೇಕಾಯಿತು ಎಂದು ವಸಂತ ಶೆಟ್ಟಿ ಹೇಳಿದ್ದಾರೆ. ಪುನರ್‌ವಿಮರ್ಶಿತ ಯುಜಿಸಿ ವೇತನ ಶ್ರೇಣಿ ಪಡೆಯುತ್ತಿರುವ ಅಧ್ಯಾಪಕರು ಈಗ ಅಮುಕ್ತ್‌ದ ಮೂಲಕ ಮೌಲ್ಯಮಾಪನ ಬಹಿಷ್ಕಾರ ಹಾಕುತ್ತಿದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸುವ ವಸಂತ ಶೆಟ್ಟಿ , ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮುಕ್ತ್‌ ತೆಗೆದುಕೊಂಡಿರುವ ಕೆಲವು ನಿಲುವುಗಳು ನಮಗೆ ಸರಿಬರದೇ ಇದ್ದುದರಿಂದ ನಾವು ಪ್ರತ್ಯೇಕ ವೇದಿಕೆ ಸ್ಥಾಪಿಸಬೇಕಾಯಿತು ಎಂದು ಹೇಳಿದ್ದಾರೆ.

ಅಮುಕ್ತ್‌ , ಹಿಂದಿನಿಂದಲೂ ವಿಶ್ವವಿದ್ಯಾಲಯದ ಎಲ್ಲಾ ಕ್ರಮಗಳನ್ನೂ ಟೀಕಿಸುತ್ತಲೇ ಬಂದಿರುವ ಸಂಘಟನೆಯಾಗಿ-ದೆ. ಶಿಕ್ಷಕರ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯ ನೀಡಿರುವ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿಯೇ ಇದು ನಿರ್ಲಕ್ಷಿಸುತ್ತಾ ಬಂದಿದೆ ಎಂದು -ವ-ಸಂ-ತ-ಶೆ-ಟ್ಟಿ ಆಪಾ-ದಿ--ಸಿ-ದ್ದಾ-ರೆ.

ಸು-ಳ್ಳು ಆಪಾ-ದ-ನೆ : ವಸಂ-ತ ಶೆಟ್ಟಿ ಅವ-ರ ನೇತೃ-ತ್ವ-ದ ಸಂಘ-ಟ-ನೆ-ಯ ಹೇಳಿ-ಕೆ-ಗ-ಳ-ನ್ನು ಅಮು-ಕ್ತ್‌ ಪ್ರತಿ-ನಿ-ಧಿ-ಗ-ಳು ಅಲ್ಲಗಳೆದಿ--ದ್ದಾ-ರೆ. ರಾತ್ರೋ ರಾತ್ರಿ ಹುಟ್ಟಿಕೊಂಡ ಈ ಸಂಘಟನೆ, ವರ್ಷಾನುಗಟ್ಟಲೆ ಕೆಲಸ ಮಾಡಿರುವ ಅಮುಕ್ತ್‌ದ ಮೇಲೆ ಸುಳ್ಳು ಆಪಾದನೆ ಹೊರಿಸುತ್ತಿದೆ . ಇಂತಹ ಆಪಾದನೆಗಳ ಬಗ್ಗೆ ಸದಸ್ಯರು ತಲೆಕೆಡಿಸಿಕೊಳ್ಳಬಾರದು ಎಂದು ತನ್ನ ಸದಸ್ಯರಿಗೆ ಅಮು-ಕ್ತ್‌ ಸೂಚಿಸಿದೆ.

English summary
mangalore : Amukt splits
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X