Get Updates
Get notified of breaking news, exclusive insights, and must-see stories!

ಹಾಲು ಕೊಳ್ಳೀರೇ.. ನಗರದ ಬೀದಿಗಳಲ್ಲಿ ಅನುರಣನಗೊಳ್ಳುವ ಹಾಡುಪಾಡು

ರಾಯಚೂರು : ಸಂತ ಶಿಶುನಾಳ ಷರೀಫರ ಕೋಡಗನ ಕೋಳಿ ನುಂಗಿತ್ತಾ ... ಎಂಬ ಅರ್ಥಗರ್ಭಿತ ಹಾಡನ್ನು ನೆನಪಿಸುವ ಹೀಗೊಂದು ಕೃತಕ ಸೃಷ್ಟಿ ನಿಯಮ ಸದ್ದುಗದ್ದಲ ತುಂಬಿದ ನಗರದ ನೆರಳಿನಲ್ಲಿಯೇ ಚಾಚಿಕೊಂಡಿರುವ ಹಳ್ಳಿಗಳಲ್ಲಿ ಸದ್ದು ಗದ್ದಲವಿಲ್ಲದೇ ಪಾಲನೆಯಾಗುತ್ತಿದೆ.

ಬೆಳೆಯುತ್ತಿರುವ ರಾಯಚೂರು ನಗರದ ಆಸುಪಾಸಿನಲ್ಲಿ ಉಳಿದುಕೊಂಡಿರುವ ಮಲಿಯಾಬಾದ್‌, ಬಿಜನಗೇರಾ, ತುಂಟಾಪುರ, ಸಿದ್ರಾಂಪುರ, ಬೋಳಮ್ಮನ ದೊಡ್ಡಿ, ಯರಮರಸ್‌, ಅಸ್ಕಿಹಾಳ್‌, ಮುಂತಾದ ಹತ್ತಕ್ಕೂ ಹೆಚ್ಚು ಹಳ್ಳಿಗಳ ಹೈನುಗಾರಿಕೆ ಅವಲಂಬಿತ ಕುಟುಂಬಗಳಿಗೆ ನಗರದ ಮಧ್ಯಮ ವರ್ಗದ ಕುಟುಂಬಗಳು ಆಧಾರವಾಗಿವೆ. ಬೆಳಗಿನ ಸೂರ್ಯೋದಯದೊಂದಿಗೆ ತಲೆಯ ಮೇಲೆ ಬುಟ್ಟಿ ಹೊತ್ತು ಬರುವ ಮಹಿಳೆಯರು ಕಾಣುವುದು ಸಾಮಾನ್ಯ ದೃಶ್ಯ. ಹಣಕಾಸಿನ ಬಲಕ್ಕೆ ತಕ್ಕಂತೆ ಒಂದು ಅಥವಾ ಎರಡು ಎಮ್ಮೆ ಕಟ್ಟಿಕೊಂಡು ಮೊಸರು, ಬೆಣ್ಣೆ , ತುಪ್ಪ ಮಾರಾಟ ಮಾಡಿ ಜೀವನ ಸಾಗಿಸುವ ಮಹಿಳೆಯರತ್ತ ಸರಕಾರ ಮಹಿಳೆಯರಿಗೆಂದೇ ಜಾರಿಗೆ ತಂದಿರುವ ಹಲವು ಯೋಜನೆಗಳು ಸುಳಿದಾಡಿಲ್ಲ.

ನಗರದಲ್ಲಿ ಮೊಸರು, ಬೆಣ್ಣೆ, ತುಪ್ಪ ಮಾರಾಟದಿಂದ ಗಳಿಸುವ ಸರಿ ಸುಮಾರು 60 ರೂಪಾಯಿಗಳಲ್ಲಿ 10 ರೂಪಾಯಿ ಗಂಡನ ಕುಡಿತಕ್ಕೆ ಮುಡಿಪು. ಮಿಕ್ಕಿದ್ದು , ದಿನದ ಪ್ರಯಾಣದ ಖರ್ಚು. ಇದು ದಿನವಹಿ ಬಜೆಟ್‌ನ ಬಗ್ಗೆ ವಿವರಿಸುವ ಮಲಿಯಾಬಾದ್‌ ನರಸಮ್ಮ ಎಂಬ ಅನಕ್ಷರಸ್ಥೆಯ ಬದುಕು. ಇದೇ ರೀತಿಯ ಬದು-ಕು ಮೊಸರು, ಬೆಣ್ಣೆ ತುಪ್ಪ, ಮಾರಲು ಬರುವ ಇತರ ಹಳ್ಳಿಗಳ ಮಹಿಳೆಯರ-ದೂ. ಈ ಊರುಗಳಲ್ಲಿ ಆಗಾಗ್ಗೆ ಕೆಡುವ ಬೋರ್‌ ವೆಲ್‌ಗಳಿವೆ. ಕಣ್ಣಾ ಮುಚ್ಚಾಲೆಯಾಡುವ ಕರೆಂಟ್‌ ಇದೆ, ನೃತ್ಯ ಮಾಡಿಸುವ ರಸ್ತೆಗಳಿವೆ. ಮನಸುಬಂದಾಗೊಮ್ಮೆ ಬರುವ ಕೆಂಪು ಬಸ್ಸುಗಳ ಸೌಲಭ್ಯವಿದೆ. ಮೈ ಮುಖ ಕಾಣದಂತೆ ತುಂಬಿಕೊಂಡು ಓಡಾಡುವ ಆಟೋ ಜೀಪುಗಳಿವೆ. ಎಲ್ಲಾ ನಾಗರಿಕ ಸೌಲಭ್ಯಗಳಿದ್ದರೂ ಇಲ್ಲದಂತಿರುವ, ನಾಗರಿಕತೆಯ ಸೋಂಕಿದ್ದರೂ ಜನ ಸಾಮಾನ್ಯ ಬದುಕಿನಿಂದ ವಂಚಿತ ಈ ಮಹಿಳೆಯರಿಗೆ ಮನೆ ತುಂಬ ಮಕ್ಕಳಿವೆ, ವಿ-ದ್ಯೆಯಿಲ್ಲ. ಚುನಾವಣೆ ಬಂದಾಗೊಮ್ಮೆ ಈ ಜನರ ನೆನಪಾಗುವಂತೆ ಬೆಳಿಗ್ಗೆ ಎಲ್ಲಾ ದುಡಿದು ಬರುವ ಗಂಡಂದಿರು ಕುಟುಂಬದ ಖರ್ಚಿನಲ್ಲಿ ಪಾಲು ತೆಗೆದುಗೊಳ್ಳುವ ಬದಲು ಹೆಂಡತಿ ತಂದ ದುಡ್ಡಿನಲ್ಲಿ ಪಾಲು ನಡೆದು ನಶೆಯ ನಿಶೆ ಏರಿಸಿಕೊಳ್ಳಲು ಬಳಸುವುದು ಸರ್ವೇಸಾಮಾನ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+