ಬಾನಂಗಳದಿ ಹಾರಿದ ಗಾಳಿಪಟಗಳು,
ಇಷ್ಟು ದೂರ ಬಂದಿದ್ದೀರಿ, ಪಕ್ಕದಲ್ಲೊಂದು ಸನ್ ಸೆಟ್ ವ್ಯೂ ಪಾಯಿಂಟಿಗೂ ಭೇಟಿ ನೀಡಿ. ಇಲ್ಲಿ ಸೂರ್ಯಾಸ್ತ ಮಾತಿಗೆ ಮೀರಿದ್ದು. ಅಂದ ಹಾಗೆ ಅದು ಹೆಸರಿಗೆ ತಕ್ಕಂತೆ ಅಕ್ಷರಶಃ ಜೇನುಕಲ್ಲು ಗುಡ್ಡವೇ. ಗುಡ್ಡದ ಕೆಳಗೆ ನೂರಾರು ಜೇನಿನ ಹುಟ್ಟುಗಳಿವೆ. ನೋಡಲು ಮರೆಯದಿರಿ. ಸಂಜೆಯಾಗುತ್ತಿದ್ದಂತೆ, ಕಣಿವೆ ಸಿಂಗರಿಸಿಕೊಳ್ಳಲಾರಂಭಿಸುತ್ತದೆ.
ಸಂಜೆ ಸೂರ್ಯ ಕಿತ್ತಳೆ ಹಣ್ಣಿನಂತಾಗುತ್ತಿದ್ದಂತೆ, ಕಣಿವೆಯ ತಳದಲ್ಲಿ ಹರಿವ ನದಿ ನಿಸರ್ಗ ಸೌಂದರ್ಯಕ್ಕೆ ಕನ್ನಡಿ. ಗುಡ್ಡದಲ್ಲಿ ಮಲಯ ಮಾರುತದ ಹಿಮ್ಮೇಳ. ಕಣಿವೆಯಲ್ಲಿ ತಿಮಿರ ಅಮರುತ್ತಿದ್ದಂತೆ, ಕಾಡಿನಲ್ಲಿ ಹಾದಿ ತಪ್ಪುವ ಮುನ್ನ ಯಲ್ಲಾಪುರದತ್ತ ಕಾಲು ಕೀಳುವುದು ಅನಿವಾರ್ಯ.
ಯಲ್ಲಾಪುರದಿಂದ ಮುಕ್ಕಾಲು ತಾಸಿನ ಹಾದಿ ಸವೆಸಿದರೆ, ದೊರಕುವ ಸಾತೊಡ್ಡಿ ಜಲಪಾತ ಅನೇಕ ರೀತಿಯಲ್ಲಿ ವಿಶಿಷ್ಟವಾದುದು. ಬರಿ 16 ಮೀಟರ್ ಎತ್ತರದಿಂದ ನದಿ ನಿಧಾನವಾಗಿ ಬಳುಕುತ್ತಾ ಬೀಳುತ್ತದೆ. ಇದೊಂದು ಲೆಕ್ಕದಲ್ಲಿ ವಿಶ್ವ ವಿಖ್ಯಾತ ನಯಾಗಾರ ಜಲಪಾತದ ಮಿನಿಯೇಚರ್‌ನಂತಿದೆ. ಜಲಪಾತದ ಬುಡದವರೆಗೂ ನಡೆದು ಹೋಗಿ, ಜಲಧಾರೆಗೆ ತಲೆಯಾಡ್ಡಿದರೆ.....,












Click it and Unblock the Notifications