• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋಕರ್ಣೇ-ಶ್ವ-ರ-ನ ತಲೆ-ಯ ಮೇಲೆ ಗಂಗಾ-ವ-ತ-ರ--ಣ

By Staff
|

Shivaಕಾರವಾರ: ಗೋಕರ್ಣದ ಮಹಾಬಲೇಶ್ವರನಿಗೆ ಮಳೆರಾಯನಿಂದ ಮಹಾಮಜ್ಜನ!

ವರ್ಷಕ್ಕೊಮ್ಮೆ ವರ್ಷಧಾರೆ ಸುರಿದಾಗ ಮಹಾಬಲೇಶ್ವರನಿಗೆ ವಷ ರ್ಗಟ್ಟಲೆ ಅರ್ಚಕರ ಸಂಪಕ ರ್ವಿಲ್ಲ, ಭಕ್ತರ ಭೇಟಿಯಿಲ್ಲ. ಮಂತ್ರ ಮೊಳಗುವುದಿಲ್ಲ, ಹೂವು-ಗಂಧಗಳ ಗೊಡವೆಯೂ ಇಲ್ಲ. ಎಲ್ಲದನ್ನೂ ಎಲ್ಲವನ್ನೂ ಬಿಟ್ಟು ಆತ್ಮಲಿಂಗ ನೀರಿನಲ್ಲಿ ಅಂತರ್ಧಾನ.

-ಹೌದು, ಈ ಸಲವೂ ಮುಂಗಾರಿನಿಂದ ಮೊದಲ ಪೂಜೆ ಮಹಾಬಲನಿಗೆ ಸಂದಿದೆ. ಗೋಕರ್ಣದ ಆತ್ಮಲಿಂಗಕ್ಕೆ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ವರುಣದೇವನ ಅಭಿಷೇಕವಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಆರಂಭವಾಗಿರುವ ಮುಂಗಾರು ಮಳೆಗೆ ಗೋಕರ್ಣದ ಆತ್ಮಲಿಂಗ ಜಲಾವೃತವಾಗಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಆತ್ಮಲಿಂಗಕ್ಕೆ ದೇವಾಲಯದ ಹೊರಗಿನಿಂದಲೇ ಭಕ್ತರು ಪೂಜೆ ಸಲ್ಲಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು.

ದೇವಾಲಯದ ಗರ್ಭಗುಡಿಯಿಂದ ಪೂಜೆಗೆ ಬಳಸಿದ ಜಲ ಸಾಮಗ್ರಿಗಳು ಸೋಮಸೂತ್ರ ಎಂಬ ನಾಲೆಯ ಮುಖಾಂತರ ಹರಿದು, ಹೊರಗಿನ ಊರ ಹಳ್ಳವನ್ನು ಸೇರುವ ವ್ಯವಸ್ಥೆಯಿದೆ. ಆದರೆ, ಮಳೆಗಾಲದಲ್ಲಿ ಹಳ್ಳದಲ್ಲಿ ನೀರಿನ ಮಟ್ಟ ಏರಿದಾಗಲೆಲ್ಲಾ ದೇವಾಲಯದಿಂದ ಸೋಮಸೂತ್ರದಿಂದ ಹೋಗುವ ನೀರನ್ನು ಹಳ್ಳ ಸ್ವೀಕರಿಸುವುದಿಲ್ಲ. (ಹಳ್ಳದಲ್ಲಿಯ ನೀರಿನ ಅಗಾಧ ಒತ್ತ್ತಡದ ಮುಂದೆ ಸೋಮಸೂತ್ರದಿಂದ ಹರಿಯುವ ನೀರಿನ ಒತ್ತಡ ಕಡಿಮೆಯಿರುವುದರಿಂದ ಹೀಗಾಗುತ್ತದೆ.) ಇದರಿಂದಾಗಿ ದೇವಾಲಯದಲ್ಲಿಯೇ ನೀರಿನ ಸಂಗ್ರಹವಾಗಲಾರಂಭಿಸುತ್ತದೆ. ಪರಿಣಾಮವಾಗಿ ತಗ್ಗಿನಲ್ಲಿರುವ ಆತ್ಮಲಿಂಗ ಸಂಪೂರ್ಣ ಜಲಾವೃತ.

ಇಂತಹ ಸ್ಥಿತಿಯಿಂದ ಪಾರಾಗಬೇಕೆಂದರೆ, ಸೋಮಸೂತ್ರ ನಾಲೆ ಸೇರುವ ಹಳ್ಳವನ್ನು ಸರಿಪಡಿಸಬೇಕು. ಕಳೆದ ಹಲವಾರು ವರ್ಷಗಳಿಂದ ಅದರಲ್ಲಿನ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗಿಲ್ಲ. ಇದನ್ನು ತೆಗೆಯುವಂತೆ ಹಲವಾರು ಸರಕಾರಿ ಇಲಾಖೆಗಳಿಗೆ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ದೇವಾಲಯ ಖಾಸಗಿ ಟ್ರಸ್ಟಿಗೆ ಸೇರಿದ್ದು, ಅಪಾರ ಹಣ ಬೇರೇ ಬರುತ್ತದೆ. ಹೀಗಿದ್ದಾಗ, ಅದನ್ನು ದೇವಾಲಯ ಆಡಳಿತವೇ ಮುಂದೆ ನಿಂತು ದುರಸ್ತಿ ಮಾಡಿಸಿದರೆ, ದೇವಸ್ಥಾನಕ್ಕೂ ಒಳ್ಳೆಯದು, ಊರಿಗೂ ಉಪಕಾರವಾಗುತ್ತದೆ ಎಂಬ ಅವ್ಯಕ್ತ ಆಶಯವನ್ನು ಸರಕಾರಿ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ ಎಂದು ತಿಳಿದು ಬಂದಿದೆ. ಹೀಗೆ ಇತ್ತಂಡಗಳಿಂದಲೂ ಹೊಣೆ ನುಣುಚಿಕೊಳ್ಳುವ ಕ್ರಿಯೆಯಿಂದಾಗಿಯೇ ಮಹಾಲೇಶ್ವರನಿಗೆ ಮಳೆಗಾಲದ ಮುಸಲಧಾರೆಯ ಅಭಿಷೇಕ ಮುಂದುವರಿದಿದೆ. ಮಳೆಗಾಲದ ಆರಂಭದಲ್ಲಿಯೇ ಈ ಗತಿಯಾದರೆ, ಇನ್ನು ರಭಸದ ಮಳೆ ಆರಂಭವಾದರೆ, ಗತಿಯೇನು ಎಂ ಆತಂಕ ಭಕ್ತರನ್ನು ಆವರಿಸಿದೆ. ಇದರ ಹೊಣೆ ಹೊತ್ತವರೂ ಸಾಕ್ಷಾತ್‌ ಆತ್ಮಲಿಂಗದಷ್ಟೇ ನಿರ್ಲಿಪ್ತರಾಗುವುದರಿಂದ ಸಮಸ್ಯೆ ಮುಂದುವರಿಯುತ್ತಿದೆ. ಆದರೆ, ಮಹಾದೇವನಂತೂ ಮಹಾ ನಿರ್ಲಿಪ್ತನೆಂದೇ ಹೆಸರಾದವ. ಏಷ್ಟೇ ಆಗಲಿ ‘ರುದ್ರೋ ಅಭಿಷೇಕ ಪ್ರಿಯಃ’ ಅಲ್ಲವೇ.

Ganesha ಗೋಕರ್ಣ ಮಹಾತ್ಮೆ :ಗೋಕರ್ಣ ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಸ್ಥಳ. ಗೋಕರ್ಣವನ್ನು ಭೂಕೈಲಾಸ ಎಂದೂ ಕರೆಯುವುದೂ ಉಂಟು. ಕಾರವಾರದಿಂದ 60 ಕಿ.ಮೀ. ದಕ್ಷಿಣಕ್ಕಿರುವ ಪವಿತ್ರ ಸ್ಥಳ ಇದು. ಇಲ್ಲಿ ಅತ್ಯಂತ ಪುರಾತನವಾದ ಶಿವನಾತ್ಮಲಿಂಗವಿರುವ ದೇಗುಲ ಇದೆ. ಗೋಕರ್ಣ ಸಂಸ್ಕೃತ ಕಲಿಯುವವರಿಗೆ ಒಂದು ಕೇಂದ್ರ ಸ್ಥಳ. ಓಂ ಆಕಾರದಲ್ಲಿ ಇರುವಂತೆ ತೋರುವ ಓಂ ಬೀಚ್‌, ಕುಟ್ಲೇ ಬೀಚ್‌ಗಳು ಇಲ್ಲಿನ ಮತ್ತೊಂದು ಆಕರ್ಷಣೆ. ಹಿಪ್ಪಿಗಳ ಹಿಡಿತಕ್ಕೆ ಸಿಕ್ಕಿ ನರಳಿದ ಬಗ್ಗೆ ಈ ಬೀಚ್‌ ಕುಖ್ಯಾತಿಯನ್ನೂ ಪಡೆದಿವೆ.

ಗೋಕರ್ಣ ಪುರಾಣ ಪ್ರಸಿದ್ಧ ಸ್ಥಳ. ಶ್ರೀರಾಮನ ಮಡದಿಯನ್ನೇ ಅಪಹರಿಸಿದ ರಾವಣೇಶ್ವರನೊಂದಿಗೆ ತಳುಕು ಹಾಕಿಕೊಂಡ ಸ್ಥಳ. ರಾವಣ ರಾಕ್ಷಸನಾದರೂ ಮಹಾ ಬ್ರಾಹ್ಮಣ. ವೇದ ಶಾಸ್ತ್ರ ಪಾರಂಗತ. ಮಹಾ ಶಿವಭಕ್ತ. ರಾವಣನ ತಾಯಿ ಸಮುದ್ರದಡದಲ್ಲಿ ಸೈಕತ (ಮರಳಿನ) ಲಿಂಗವನ್ನು ಮಾಡಿ ಪೂಜಿಸುತ್ತಿದ್ದಳಂತೆ. ಸಮುದ್ರರಾಜನ ಅಲೆಗಳ ಹೊಡೆತಕ್ಕೆ ಸಿಕ್ಕಿ ಮರಳಿನ ಲಿಂಗ ಸಮುದ್ರದ ಪಾಲಾಯಿತು. ತಾಯಿಗೆ ಆಗ ರಾವಣ ಶಿವನ ಆತ್ಮಲಿಂಗವನ್ನೇ ತಂದುಕೊಡುವುದಾಗಿ ಅಭಯ ಇತ್ತ. ಘೋರ ತಪಸ್ಸನ್ನೂ ಆಚರಿಸಿದ. ವಿಷ್ಣು ಮಾಯೆಯ ಜಾಲದಲ್ಲಿ ಆತ್ಮಲಿಂಗದ ಬದಲು ಶಿವೆಯನ್ನೇ ತನ್ನೊಡನೆ ಕಳಿಸುವಂತೆ ಕೋರಿದ. ಮಂಡೋದರಿಯನ್ನು ವರಿಸಿದ. ಮತ್ತೆ ತನ್ನ ಶಿರವನ್ನೇ ಶಿವನಿಗರ್ಪಿಸಿ, ಶಿವನನ್ನು ಗೆದ್ದು ಆತ್ಮಲಿಂಗವನ್ನು ವರವಾಗಿ ಪಡೆದನಂತೆ.

ಶಿವನಾತ್ಮಲಿಂಗವನ್ನು ಭೂಸ್ಪರ್ಶಮಾಡದಂತೆ ಶಿವ ಆಣತಿ ಇತ್ತನಂತೆ. ಆದರೆ ಸಂಧ್ಯಾ ಸಮಯದಲ್ಲಿ ತನ್ನ ಲಂಕೆಯತ್ತ ಹೊರಟ ರಾವಣ ಸಂಧ್ಯಾವಂದನೆಗಾಗಿ ವಟುವಿನ ರೂಪದಲ್ಲಿ ತನ್ನೆದುರು ಪ್ರತ್ಯಕ್ಷನಾದ ಗಣಪನಿಗೆ ಆತ್ಮಲಿಂಗ ಹಿಡಿದು ಕೊಂಡಿರುವಂತೆ ಸೂಚಿಸಿ ಅರ್ಘ್ಯಕೊಡಲು ಹೋದನಂತೆ. ಆ ಸಮಯ ನೋಡಿ ರಾವಣನ ಮೂರು ಬಾರಿ ಕರೆದು ಗಣಪ ಶಿವನ ಆತ್ಮಲಿಂಗವನ್ನು ಗೋಕರ್ಣದಲ್ಲಿ ಭೂಸ್ಪರ್ಶ ಮಾಡಿದನಂತೆ. ರೊಚ್ಚಿಗೆದ್ದ ರಾವಣ ವಟು ರೂಪಿ ಗಣಪನ ತಲೆಯ ಮೇಲೆ ಕುಕ್ಕಿದನಂತೆ. ಈಗಲೂ ಇಲ್ಲಿ ತಲೆ ಹಳ್ಳವಾಗಿರುವ ಶಿಲಾ ರೂಪಿ ಗಣಪ ತನ್ನ ತಂದೆಯಾಂದಿಗಿದ್ದಾನೆ. ಅವನದೂ ಒಂದು ಗುಡಿ ಇದೆ. ಭೂಸ್ಪರ್ಶವಾದ ಆತ್ಮಲಿಂಗವಿರುವೆಡೆ ಮಹಾಬಲ ಶಿವ ನೆಲೆಸಿದ್ದಾನೆ. ಆತ್ಮಲಿಂಗವಿರುವ ಈ ಕ್ಷೇತ್ರ ಭೂಕೈಲಾಸ ಎಂದೂ ಹೆಸರಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more