ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಳುಬೇನೆ : ಐವರು ಅಧಿಕಾರಿಗಳ ಅಮಾನತು

By Super
|
Google Oneindia Kannada News

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕರಳುಬೇನೆ ನಿಯಂತ್ರಿಸುವಲ್ಲಿ ಕರ್ತವ್ಯಲೋಪ ಎಸಗಿದ ಐವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ಯಾನಿಟರಿ ಇನ್ಸ್‌ಪೆಕ್ಟರ್‌ಗಳಾದ ಹಾಲಮಠ, ದೊಡ್ಡಮನಿ, ಕಿರಿಯ ಎಂಜಿನಿಯರ್‌ಗಳಾದ ಹುಟಗಣ್ಣನವರ ಹಾಗೂ ಅಳ್ನಾವರ ಮತ್ತು ಜಾವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಅಂಕಲಗಿ ಮತ್ತು ಡಾ.ಸವಿತಾ ಸೇವೆಯಿಂದ ಅಮಾನತುಗೊಂಡಿರುವ ಅಧಿಕಾರಿಗಳು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಸಚಿವ ಎ.ಎಂ.ಹಿಂಡಸಗೇರಿ, ಶುಕ್ರವಾರ ಧಾರವಾಡದ ಕೆಲವು ಸೋಂಕು ಪೀಡಿತ ಕ್ರದೇಶಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅತಿಸಾರ ರೋಗ ನಿಯಂತ್ರಣಕ್ಕೆ ಬಂದಿದೆ. ಶುಕ್ರವಾರ ಕರಳುಬೇನೆಯೂ ಇಳಿಮುಖವಾಗಿದೆ. ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕುಡಿಯುವ ನೀರಿನ ಪರೀಕ್ಷೆಗೆ ಬೇಕಾದ 33 ಗ್ಯಾಸ್ಟ್ರೋಸ್ಕೋಪ್‌ಗಳನ್ನು ಖರೀದಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ 60 ಕ್ಲೋರೋಸ್ಕೋಪ್‌ ಯಂತ್ರಗಳು ಪೂರೈಕೆಯಾಗಿವೆ ಎಂದು ಅವರು ವಿವರಿಸಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 56 ಕರಳುಬೇನೆ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಭೆ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಶುಕ್ರವಾರ ಪಾಲಿಕೆಯ ಸಭಾಂಗಣದಲ್ಲಿ ಕರಳುಬೇನೆ ಕುರಿತು ತುರ್ತು ಸಭೆ ನಡೆಸಿ, ಚರ್ಚಿಸಿತು. ಈ ರೋಗ ಇನ್ನೂ ನಿಯಂತ್ರಣಕ್ಕೆ ಬಾರದ ಬಗೆಗೆ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಮೇಯರ್‌ ಸರಳಾ ಭಾಂಡಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಭೇಟಿ : ಶನಿವಾರ ಅವಳಿ ನಗರಗಳಲ್ಲಿ ಕರಳುಬೇನೆ ಹರಡಿರುವ ಕಾರಣ ನಗರಾಭವೃದ್ಧಿ ಸಚಿವ ಚಿಮ್ಮನಕಟ್ಟಿ ಮತ್ತು ಆರೋಗ್ಯ ಸಚಿವ ಡಾ.ಮಲಕಾ ರೆಡ್ಡಿ ಭೇಟಿ ನೀಡುವರು.

English summary
Gastroenteritis: 5 officials suspended
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X