• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಕ್ಸಿಕೋ-ಯುಎಸ್ ಗಡಿಯಲ್ಲಿ ಗುಂಡಿನ ದಾಳಿ, 15 ಮಂದಿ ಮೃತ

By Dw News
|
Google Oneindia Kannada News

ಮೆಕ್ಸಿಕೋ ಹಾಗೂ ಅಮೆರಿಕ ಗಡಿ ಭಾಗದ ರೆನೋಸಾ ನಗರದಲ್ಲಿ ಭಾನುವಾರ ಗುಂಡಿನ ಮೊರೆತ ಕೇಳಿ ಬಂದಿದೆ. ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ವಿವಿಧೆಡೆ 15 ಮಂದಿ ಮೃತಪಟ್ಟಿರುವ ವರದಿ ಬಂದಿದೆ.

ಪೊಲೀಸರ ಜೊತೆ ಗುಂಡಿನ ಚಕಮಕಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ವರದಿ ಬಂದಿದೆ. ಟೆಕ್ಸಾಸ್ ಪ್ರಾಂತ್ಯದ ಮೆಕ್ ಅಲೆನ್ ಗಡಿಯಲ್ಲಿರುವ ರೇನೋಸಾ ನಗರದ ವಿವಿಧೆಡೆ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿವೆ.

ಗುಂಡಿನ ದಾಳಿ ಮಾಡಿದ್ದು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತರ ಗುರುತು ಪತ್ತೆ ಕಾರ್ಯ ಕೂಡಾ ಆಗಿಲ್ಲ, ನಗರದೆಲ್ಲೆಡೆ ಮಿಲಿಟರಿ, ಪೊಲೀಸರು, ಭದ್ರತಾ ಪಡೆ ಪಹರೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಮೆಕ್ಸಿಕೋದ ಗಡಿಭಾಗದಲ್ಲಿ 2019ರಲ್ಲಿ 34, 681 ಮಂದಿ ಮೃತಪಟ್ಟಿದ್ದರೆ, 2020ರಲ್ಲಿ 34, 554 ಮಂದಿ ಈ ರೀತಿ ಅಸುನೀಗಿದ್ದಾರೆ.

ಯುಎಸ್ ಹಾದಿಗಾಗಿ ಕಿತ್ತಾಟ
ಯುಎಸ್ಎಗೆ ತೆರಳಲು ಕಳ್ಳಹಾದಿ ಮಾರ್ಗ ಇದಾಗಿದ್ದು, ಸ್ಮಗಲಿಂಗ್ ದಂಧೆಯ ಮೇಲೆ ನಿಯಂತ್ರಣ ಹೊಂದಲು ಅನೇಕ ಗ್ಯಾಂಗ್ ಗಳು ಗುಂಡಿನ ದಾಳಿ, ಗ್ಯಾಂಗ್ ವಾರ್ ನಡೆಸುತ್ತಿರುತ್ತವೆ. ಕ್ರೈಂ ಸಿಂಡಿಕೇಟ್ ಮೇಲೆ ನಿಯಂತ್ರಣ ಸಾಧಿಸಲು ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ.

ಸರಕು ಸಾಗಣೆ ಮೇಲೆ ನಿಯಂತ್ರಣ ಹೊಂದಿರುವ ಈ ಒಕ್ಕೂಟದ ಮೇಲೆ ಪ್ರಹಾರ ಮಾಡಲು ಒಪ್ಪದ ಹಾಲಿ ಅಧ್ಯಕ್ಷ ಆಂಡ್ರ್ಯೂಸ್ ಮ್ಯಾನ್ಯೂಯಲ್ ಲೋಪೆಸ್ಜ್ ಒಬ್ರಾಡೋರ್ ಅವರು, ''ಅಪ್ಪುಗೆ ನೀಡಿ ಗುಂಡಿನ ದಾಳಿ ಬೇಡ'' ಎಂದು ಶಾಂತಿ ಸಂದೇಶ ಹೊರಡಿಸಿದ್ದಾರೆ.

ಮೆಕ್ಸಿಕೋದ ಈ ನೀತಿ ಬಗ್ಗೆ ಪ್ರತಿಕ್ರಿಯಿಸಲು ಯುಎಸ್ ಆಂತರಿಕ ಭದ್ರತಾ ಕಾರ್ಯದರ್ಶಿ ಅಲೆಜಾಂಡ್ರೋ ಮಯೋರ್ಕಾಸ್ ನಿರಾಕರಿಸಿದ್ದಾರೆ.

rc/mm (EFE, dpa, AP)

English summary
Gunmen in sports utility vehicles shot some 14 people in different parts of the Mexican border city of Reynosa, according to reports on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X