ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಊಟ ಬಚ್ಚಿಟ್ಳು ಪತಿ ವಿಚ್ಛೇದನ ಪಡೆದ

By Mahesh
|
Google Oneindia Kannada News

ಮುಂಬೈ, ಸೆ.14: ಇಲ್ಲಿನ ವೈದ್ಯರೊಬ್ಬರಿಗೆ ಕೌಟುಂಬಿಕ ನ್ಯಾಯಲಯವು ವಿವಾಹ ವಿಚ್ಛೇದನ ನೀಡಿದೆ. ವೈದ್ಯನ ಪತ್ನಿ ಊಟ ಕೊಡದೆ ಸತಾಯಿಸಿದ್ದನ್ನು ಅಮಾನವೀಯ ಎಂದು ಕೋರ್ಟ್ ಪರಿಗಣಿಸಿದೆ.

19 ವರ್ಷದ ದಾಂಪತ್ಯ ಮುರಿಯಲು ಫ್ರೀಜರ್ ಕಾರಣವಾಗಿದೆ. ವೈದ್ಯನ ಪಟ್ನಿ ಫ್ರೀಜರ್ ನಲ್ಲಿ ಊಟ ಬಚ್ಚಿಟ್ಟು ಸತಾಯಿಸಿದ್ದಾರೆ. 1994ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಮಕ್ಕಳಿಲ್ಲ. ಪತ್ನಿ ವಿರುದ್ಧ ವೈದ್ಯ ದೂರು ನೀಡಿದ್ದರು. ಕೋರ್ಟ್ ವಿಚಾರಣೆಗೆ ಪತ್ನಿ ಎಂದಿಗೂ ಹಾಜರಾಗಿರಲಿಲ್ಲ. ನನ್ನನ್ನು ಮದುವೆಯಾಗುವ ಮೊದಲಿನಿಂದಲೂ ಕಾಟ ಕೊಟ್ಟಿದ್ದಾಳೆ ಎಂದು ವೈದ್ಯ ದೂರಿದ್ದಾರೆ.

Mumbai doctor granted divorce after wife locks fridge

ಇವರಿಬ್ಬರ ಕಿತ್ತಾಟ ಕಾಲೇಜು ದಿನಗಳಲ್ಲೇ ಆರಂಭವಾಗಿದೆ. 2011ರಲ್ಲಿ ಕೊಎನ್ಗೂ ಬೇಸತ್ತು ವೈದ್ಯ ದೂರು ಸಲ್ಲಿಸಿದ್ದಾರೆ. ಮುಂಬೈನಲ್ಲಿ ಎಂಬಿಬಿಎಸ್ ಓದುವಾಗ ಆಕೆ ಕರ್ನಾಟಕದಲ್ಲಿ ಡಿಗ್ರಿ ಓದುತ್ತಿದ್ದಳು. ನಾನು ಬ್ಯಾಚುಲರ್ ಕ್ವಾರ್ಟರ್ಸ್ ನಲ್ಲಿದ್ದರೂ ಆಕೆ ಮುಂಬೈಗೆ ಬಂದರೆ ನನ್ನ ರೂಮಿಗೆ ನುಗ್ಗಿ ಬಿಡುತ್ತಿದ್ದಳು.

ನಾನು ನನ್ನ ಸಹಪಾಠಿಗಳ ಜತೆ ಸಂಬಂಧ ಇರಿಸಿಕೊಂಡಿದ್ದೇನೆ ಎಂಬ ಕೆಟ್ಟ ಅನುಮಾನ ಆಕೆಗಿತ್ತು. ಕೊನೆಗೂ ನನ್ನ ಕ್ಯಾಂಪಸ್ ಬದಲಾಯಿಸುವಲ್ಲಿ ಯಶಸ್ವಿಯಾದಳು. ಕೊನೆ ವರ್ಷದ ಎಂಡಿ ಪರೀಕ್ಷೆ ಬರೆಯಲು ಆಗದಂತೆ ಮಾಡಿಬಿಟ್ಟಳು ಎಂದು ವೈದ್ಯ ದೂರು ನೀಡಿದ್ದಾರೆ.

2003ರಿಂದ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ನನ್ನ ಜತೆ ಸರಿಯಾಗಿ ವಿಷಯಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಸದಾ ಕಾಲ ಅನುಮಾನ ಪಿಶಾಚಿಯಂತೆ ವರ್ತಿಸುತ್ತಿದ್ದಳು. ಅವರ ನಡೆ ನುಡಿಗೆ ಹೆದರಿ ನನ್ನ ಆಸ್ಪತ್ರೆಯನ್ನು ಮುಚ್ಚ ಬೇಕಾಯಿತು.

ಮನೆಯಲ್ಲಿ ವಸ್ತುಗಳು ಸಿಗದಂತೆ ಮಾಡಿಬಿಟ್ಟಳು. ಫ್ರೀಜರ್ ನಲ್ಲಿ ಊಟ ಬಚ್ಚಿಡುತ್ತಿದ್ದಳು. ತಿನ್ನಲು ಅನ್ನ, ಕುಡಿಯಲು ನೀರು ಸಿಗುತ್ತಿರಲಿಲ್ಲ. ಆಕೆ ಜತೆಗಿದ್ದರೆ ಮಾತ್ರ ಕಾರು ತೆಗೆಯಲು ಬಿಡುತ್ತಿದ್ದಳು ಎಂದು ವೈದ್ಯ ಗೋಳು ತೋಡಿಕೊಂಡಿದ್ದಾರೆ.

English summary
A family court in Mumbai has granted divorce to a doctor couple married for 19 years on grounds of cruelty after he told the court that she had repeatedly insulted him and had denied him food by locking up the refrigerator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X