ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಮೀನು ಎಷ್ಟು ಖುಷಿಯಾಗಿವೆ

|
Google Oneindia Kannada News

ಒಂದು ದಿನ ಚಾಂಗ್ ತ್ಸು ಮತ್ತು ಅವನ ಸ್ನೇಹಿತ ನದಿಯ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದರು.

'ಈಜುತ್ತಿರುವ ಮೀನುಗಳನ್ನು ನೋಡು, ಎಷ್ಟು ಖುಷಿಯಾಗಿವೆ' ಎಂದ ಚಾಂಗ್ ತ್ಸು.

ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ

'ನೀನು ಮೀನಲ್ಲ. ಆದ್ದರಿಂದ ಅವು ಖುಷಿಯಾಗಿವೆಯೋ ಇಲ್ಲವೋ ನಿನಗೆ ಗೊತ್ತಾಗುವುದು ಸಾಧ್ಯವಿಲ್ಲ' ಎಂದು ಹೇಳಿದ ಗೆಳೆಯ.

'ನೀನು ನಾನಲ್ಲ, ಮೀನು ಖುಷಿಯಾಗಿವೆ ಅನ್ನುವುದು ನನಗೆ ಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು?' ಎಂದು ಮರುಪ್ರಶ್ನೆ ಹಾಕಿದ ಚಾಂಗ್ ತ್ಸು.

Zen Stories Fish Is So Happy And A Precious Tea Cup

***

ಲೋಟಕ್ಕೆ ಸಾಯುವ ಕಾಲ ಬಂದಿತ್ತು...

ಇಕ್ಯು ಪ್ರಸಿದ್ಧ ಜೆನ್ ಗುರುಗಳಲ್ಲಿ ಒಬ್ಬ. ಆತ ಬಾಲ್ಯದಿಂದಲೇ ಮಹಾ ಬುದ್ಧಿವಂತ. ಚಿಕ್ಕಂದಿನಲ್ಲಿ ಆತನ ಗುರುವಿನ ಬಳಿ ಬಹಳ ಬೆಲೆ ಬಾಳುವ ಒಂದು ಅಮೂಲ್ಯ ಚಹಾ ಲೋಟವಿತ್ತು. ಒಂದು ದಿನ, ಪಾತ್ರೆಗಳನ್ನು ಜೋಡಿಸುವ ವೇಳೆ ಇಕ್ಯು ಅಕಸ್ಮಾತಾಗಿ ಆ ಲೋಟವನ್ನು ಕೆಳಕ್ಕೆ ಬೀಳಿಸಿ ಒಡೆದುಬಿಟ್ಟ! ಆಗ ಅಲ್ಲಿ ಗುರು ಬರುತ್ತಿರುವ ಹೆಜ್ಜೆ ಸಪ್ಪಳವನ್ನು ಕೇಳಿದ ಕೂಡಲೇ ಅವನು ಪ್ರಶ್ನೆ ಮುಂದಿಟ್ಟ, "ಗುರುಗಳೇ, ಜನರೇಕೆ ಸಾಯುತ್ತಾರೆ?".

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದುಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

"ಅದು ಸಹಜ ಮಗೂ, ಸ್ವಲ್ಪ ಕಾಲ ಜೀವಿಸಿದ ನಂತರ ಎಲ್ಲವೂ ಸಾಯಲೇ ಬೇಕು." ಗುರು ಹೇಳಿದ.

ಇಕ್ಯು ಒಡೆದ ಲೋಟದ ತುಂಡುಗಳನ್ನು ತೋರಿಸುತ್ತಾ ಹೇಳಿದ, "ಗುರುಗಳೇ, ತಮ್ಮ ಲೋಟಕ್ಕೆ ಸಾಯುವ ಕಾಲ ಬಂದಿತ್ತು!".

(ಸಂಗ್ರಹ)

English summary
Zen Story of the day: Two Zen stories, fish is so happy and a precious tea cup broker by Ikkyu of his Master.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X