ಈಗತಾನೆ ಗಿಡದಿಂದ ಬಿಡಿಸಿದ ಹೂವು

Short story by Raksha Belli
ಮುಸ್ಸಂಜೆಯಾಗುತ್ತಿದ್ದಂತೆ ಅವಳ ಕಾಲು ಒಂದು ಕ್ಷಣ ಸಹ ಆಫೀಸ್‌ನಲ್ಲಿ ನಿಲ್ತಿರಲಿಲ್ಲ. ಮನಸ್ಸು ಅತ್ತ ಸೆಳೆಯುತ್ತಿತ್ತು. ಎಷ್ಟೆ ಕೆಲಸವಿದ್ರು, ಯಾವ ಸ್ನೇಹಿತರು ಕರೆದ್ರೂ, ಸ್ವಲ್ಪವು ತಡ ಮಾಡ್ದೆ ಸಂಜೆಯ ತಂಪಿಗೆ ಮೈ ಚೆಲ್ಲುತ್ತ ಸೊಂಪಾಗುತ್ತಿರೋ ಆ ಮೈದಾನದ ಎಡೆಗೆ ಆಕೆಯ ಹೆಜ್ಜೆಗಳು ಸಾಗಿಬಿಡ್ತಿದ್ದು. ಅದು ಬಸವನಗುಡಿಯಲ್ಲಿರೋ ಮೈದಾನ. ಸಂಜೆ ಆದ್ರೆ ಅಲ್ಲಿ ಪುಟ್ಟ ಮಕ್ಕಳ ಸಂತೆ ಸೇರುತ್ತಿತ್ತು. ಅವಳಿಗೆ ಅಲ್ಲಿ ಸಿಗೋ ಸಂತೋಷ ಬೇರೆಲ್ಲೂ ಸಿಕ್ತಿರಲ್ಲಿಲ್ಲ.

ಪ್ರತಿದಿನ ಆಫೀಸ್ ಮುಗ್ಸಿ ಇಳಿಸಂಜೆ ಹೊತ್ತಲ್ಲಿ ಆ ಮೈದಾನಕ್ಕೆ ಹೋಗುತ್ತಿದ್ದ ಸುಮ, ಅಲ್ಲಿ ಆಡೋ ಪುಟ್ಟ ಮಕ್ಕಳ ನಗುವಲ್ಲಿ ಜಗತ್ತನೆ ಮರೆತ್ತು ಬಿಡ್ತಿದ್ಲು. ಆ ಪುಟ್ಟ ಹೆಜ್ಜೆಗಳು.. ಬಿದ್ದು ಎದ್ದು ಮಣ್ಣಿನಲ್ಲಿ ಆಡೋ ಮಕ್ಕಳು.. ವಾವ್ ಮೈದಾನದ ತುಂಬ ಆ ನಸು ಕತ್ತಲಲ್ಲು ಮಿಂಚು ಹುಳುಗಳಂತೆ ಅಮ್ಮ ಅಮ್ಮ ಅಂತ ಆಡಿ ಕುಣಿಯುತ್ತಿದ್ರೆ ಅದ್ರಲ್ಲೆ ಸಂತಸ ಕಾಣೋ ಅಮ್ಮದಿರನ್ನು ನೋಡೋಕ್ಕೆ ಸುಮ ಪ್ರತಿದಿನ ಸಂಜೆ ಹಾಜರಿರ್ತಿದ್ಲು. ಸುಮಳ ಇಳಿ ಸಂಜೆಯ ದಿನಚರಿ ನೋಡಿದ್ದ ಸ್ನೇಹಿತ ಸಹ ಎಷ್ಟೋ ಬಾರಿ ಅವಳನ್ನ ಆಫೀಸ್‌ನಿಂದ ಅದೇ ಮೈದಾನಕ್ಕೆ ಕರ‍್ಕೊಂಡು ಹೋಗಿ ಇವಳ ನಗು ನೋಡಿ ಖುಷಿ ಪಡ್ತಿದ್ದ. ಸುಮ ಆ ಮಕ್ಕಳ ಜೊತೆ ನಗ್ತಿದ್ಲು ಆಡ್ತಿದ್ಲು ಆ ಮೈದಾನ ಅವಳಿಗೊಂದು ಒಂದು ಲೋಕವೇ ಆಗಿತ್ತು.

ಆದ್ರೆ ಅವತ್ತು ಸ್ವಲ್ಪ ಬೇಗನೆ ಆ ಮೈದಾನಕ್ಕೆ ಹೋಗಿದ್ದ ಸುಮಳನ್ನು ಹುಡುಕಿ ಹೋದ ಗೆಳಯನಿಗೆ ಶಾಕ್ ಕಾದಿತ್ತು. ಗೆಳೆಯನನ್ನ ನೋಡಿದ ಸುಮ ಬಿಕ್ಕಿಬಿಕ್ಕಿ ಅತ್ತಿದ್ಲು. ನೀನ್ಯಾಕೆ ಹೀಗೆ ಅಂತಾ ಕೇಳಿ ಕೇಳಿ ಸುಸ್ತಾಗಿದ್ದ ಗೆಳೆಯನಿಗೆ ಅವತ್ತು ಕೇಳದಿದ್ರು ತನ್ನ ಪಾಪು ಬಗ್ಗೆ ಹೇಳೋಕೆ ಶುರುಮಾಡಿದಳು.

ಹೌದು, ಅದು ಅವಳ ಬಾಲ್ಯದ ನೆನಪಲ್ಲ.. ಅಲ್ಲಿ ಅವಳ ಆ ದಿನಗಳ ನೆನಪಿರ‍್ಲಿಲ್ಲ.. ಅದು ಪ್ರೀತಿ ಹುಡುಗನ ಕನಸಲ್ಲ.. ಅದು ಪ್ರೇಮಿಯೊಂದಿಗೆ ಅಡ್ಡಾಡಿದ ಅಡ್ಡ ಸಹ ಆಗಿರ‍್ಲಿಲ್ಲ. ಆದ್ರೆ ಆ ಮೈದಾನದಲ್ಲಿದ್ದದ್ದು ಸುಮ ಪ್ರೀತಿಸಿದ ಹುಡುಗನ ಉಸಿರು... ಸುಮ ಜೀವನದಲ್ಲಿ ಪ್ರೀತಿ ನೋಡಿದ್ಲು ಪ್ರೀತಿ ಪಡೆದಿರ‍್ಲಿಲ್ಲ..

ಅದು ಏಳು ವರ್ಷದ ಮಾತು. ಆಗಿನ್ನು ಕಾಲೇಜ್‌ಗೆ ಕಾಲಿಟ್ಟಿದ್ಲು ಮುದ್ದು ಮೊಗದ ಸುಮ. ಆಗ ತಾನೆ ಗಿಡದಿಂದ ಬಿಡಿಸಿದ ಹೂಗಳಷ್ಟೆ ಸುಂದರವಾಗಿದ್ಲು. ಮನಸ್ಸಿನ್ನು ಕುಡಿ ಒಡೆಯದ ಹೂವು. ಹದಿನಾರರ ಆ ಹುಡುಗಿ ಬಿಡದಿಯಿಂದ ಟೆನ್ತ್ ಮುಗಿಸಿ ಕಾಲೇಜಿಗೆ ಸೇರಿದ್ದು ಸಿಲಿಕಾನ್ ಸಿಟಿಯಲ್ಲಿ. ಪ್ರತಿ ದಿನ ಬಿಡದಿಯಿಂದ ಬೆಂಗಳೂರಿಗೆ ಬರುವಾಗ ಸೀಟ್ ಹಿಡಿಯುತ್ತಿದ್ದ ಅವಳ ಪ್ರೀತಿಯ ಪಾಪು.. ಪ್ರಾಣೇಶ್.

ಆ ಚಿಕ್ಕ ಹೃದಯದಲ್ಲಿ ಪ್ರೀತಿ ಅರಳೋಕೆ ತುಂಬ ದಿನ ತೆಗೆದುಕೊಳ್ಳಲಿಲ್ಲ. ಫಸ್ಟ್ ಇಯರ್ ಡಿಗ್ರೀ ಮಾಡ್ತಿದ್ದ ಪಾಪು ಸುಮ ಮನಸ್ಸಿನಲ್ಲಿ ಮನೆಮಾಡಿಯಾಗಿತ್ತು. ಆರೇಳು ತಿಂಗಳೂ ಕಾದ ಪ್ರಾಣೇಶ್ ಅದೊಂದು ದಿನ ಕೇಳೆ ಬಿಟ್ಟಿದ್ದ ನಾನು ನಿನ್ನ ಪ್ರೀತಿಸುತ್ತಿದ್ದೇನೆ ಅಂತಾ.... ಸುಮ ಕಣ್ಣಿನಲ್ಲಿ ಭಯ ಆತಂಕ ಇತ್ತಾದ್ರೂ ಅದು ಹರೆಯದ ದಿನಗಳು ಅರಿವಿಲ್ಲದೆ ಪ್ರೀತಿಗೆ ಓಕೆ ಅಂದಿದ್ಲು ಸುಮ.

ನಂತ್ರ ಮನೆಯಿಂದ ಪ್ರೀತಿಯ ಪಾಪುಗೆ ಡಬ್ಬಿ ಬರ‍್ತಿತ್ತು. ಅಪ್ಪನ ಕೈಯಲ್ಲಿ ಕಬ್ಬು ತುಂಡು ಮಾಡಿಸ್ಸಿಕೊಂಡು ಕವರ್‌ಗೆ ಹಾಕೊಂಡು ಬರ‍್ತಿದ್ದ ಸುಮ, ಪಾಪು ಬಾಯಿ ಚಪ್ಪರಿಸಿ ತಿನ್ನೋದನ್ನ ನೋಡಿ ಸಂತೋಷ ಪಡ್ತಿದ್ಲು. ಕಬ್ಬಿನ ಜಲ್ಲೆಯಲ್ಲಿ ಮನೆಕಟ್ಟಿ ಸಕ್ಕರೆಯತ್ತ ಕಬ್ಬು ಚಂದಾ.. ಪ್ರೀತಿ ತುಂಬಿ ತಂದಿರೋ ಸ್ನೇಹ ಚಂದ.. ಇದೆಲ್ಲ ನಿನಗೆ ನನ್ನ ಚಂದ.. ಅಂತಾ ಹಾಡುತ್ತಿದ್ಲು.. ಎಷ್ಟೆ ಆದ್ರು ಹಳ್ಳಿ ಹೆಣ್ಣುಮಗಳು ನೋಡಿ.. ಮಾತೃ ಹೃದಯ ಸ್ವಲ್ಪ ಜಾಸ್ತಿನೆ.. ಆ ದುಂಡು ಮುಖ, ಮುದ್ದು ನಗು, ಪಟ್ಟಪಟ್ಟ ಮಾತಾಡೋವಾಗ ಮಿರಿ ಮಿರಿ ಮಿಂಚುತ್ತಿದ್ದ ಆ ಕಣ್ಣುಗಳು.. ಹೀಗೆ ದಿನ ಪೂರ್ತಿ ಸಾಗುತ್ತಿತ್ತು ಪಾಪುನ ವರ್ಣನೆ.

ತುಂಬಾ ಓದ್ಬೇಕು ತುಂಬಾ ಸಾಧಿಸ್ಬೇಕು ಅಪ್ಪ ಅಮ್ಮನನ್ನ ಒಪ್ಪಿಸಬೇಕು.. ಆಮೇಲೆ ಮದುವೆ ಮಾಡ್ಕೋಬೇಕು.. ನಂತ್ರ ಒಂದು ಮುದ್ದಾದ ಮಗು.. ಅಂತಿದ್ದ ಪಾಪು ಸಂಜೆಯಾದ್ರೆ ಸುಮಳ ಪಾಲಿಗೆ ಮೇಷ್ಟ್ರೂ.. ಮನೆಯಲ್ಲಿ ಅಷ್ಟೇನೂ ವಿದ್ಯಾವಂತರಿಲ್ಲದ ಸುಮಗೆ ಪಾಠ ಹೇಳಿಕೊಡ್ತಿದ್ದ. ಅದು ನಿಷ್ಕಲ್ಮಶ ಪ್ರೇಮ. ಇಬ್ರು ಬದ್ದಿವಂತರಾದ್ರಿಂದ ಯಾವತ್ತು ಓಡಿ ಹೋಗೋ ಅಥವಾ ಮದ್ವೆಯಾಗೋ ತಪ್ಪು ಕೆಲ್ಸ ಮಾಡ್ಲಿಲ್ಲ. ಪಿಯು ಓದುತ್ತಿದ್ದ ಸುಮಗೆ ಪಾಪು ಬಿಟ್ರೆ ಪ್ರಪಂಚವೇ ಇರಲ್ಲಿಲ್ಲ. ಸುಮಳ ಮನಸ್ಸಿನಲ್ಲಿ ಪ್ರತಿ ಹೆಜ್ಜೆಗಳಲ್ಲು ಪಾಪು ಇರುತ್ತಿದ್ದ. ಪ್ರತಿ ಕನಸುಗಳಲ್ಲು ಪಾಪು ಕಾಣುತ್ತಿದ್ದ.

***
ಆದ್ರೆ ಪ್ರೀತಿ ಸೆರಗಿನಲ್ಲಿರೋ ಕೆಂಡ ಅಲ್ವಾ? ಒಂದಲ್ಲ ಒಂದು ದಿನ ಸುಡ್ಲೆ ಬೇಕಲ್ವಾ. ಹಾಗಾಗಿ ಸುಮ ಮನೆಯವರಿಗೆ ತಿಳಿಯಿತು. ಪ್ರಾಣೇಶ್ ಮನೆಗೂ ಸಹ ವಿಷ್ಯಾ ಮುಟ್ತು. ನಮ್ಮ ಹುಡುಗಿ ಇನೋಸೆಂಟ್ ಹುಡುಗ ತಲೆ ಕೆಡಿಸಿದ್ದಾನೆ ಅಂತಾ ಸುಮ ಅಪ್ಪ ಅಮ್ಮ ಅಂದ್ರೆ. ಇವ್ರು ಸೇಮ್ ಟೂ ಸೇಮ್ ನಿಮ್ಮ ಹುಡುಗಿನೇ ಸರಿ ಇಲ್ಲ ಸರಿಯಾಗಿ ಬುದ್ಧಿ ಕಲಿಸಿ ಮನೆಯಲ್ಲಿಟ್ಟು ಕೊಳ್ಳಿ.. ಅಂತಾ ಒಬ್ಬರಿಗೊಬ್ಬರು ಬೈದಾಡಿಕೊಂಡ್ರು. ಅದು ಪುಟ್ಟ ಹೃದಯಗಳನ್ನು ತುಂಬಾ ಘಾಸಿ ಮಾಡಿತ್ತು. ಬೀದಿ ರಂಪಾಟವಾಯ್ತು.. ಮಕ್ಕಳ ಮನಸ್ಸನ ಯಾರು ಕೇಳಲಿಲ್ಲ ಆಗಾಗ್ಲೆ ಆ ಪ್ರೀತಿ ಎರಡು ವರ್ಷಗಳ ಕೂಸಾಗಿತ್ತು. ಹೀಗಿದ್ದು ಓದು ಭವಿಷ್ಯಾ ಅಂತಾ ಸಭ್ಯವಾಗಿದ್ದ ಆ ಹೃದಯಗಳ ಬಗ್ಗೆ ಹೆತ್ತವರು ಒಂದಿಷ್ಟು ಯೋಚಿಸೋ ಸೌಜನ್ಯ ತೋರಲ್ಲಿಲ್ಲ.

ರಾಜಕೀಯವಾಗಿ ಓಡಾಡಿ ಕೊಂಡಿದ್ದ ಸುಮಳ ಅಪ್ಪ ಹುಡುಗನ ಮೇಲೆ ಪೊಲೀಸ್ ಸ್ಟೇಷನ್‌ನಲ್ಲಿ ಕಂಪ್ಲೇಂಟ್ ಫೈಲ್ ಮಾಡಿಸಿದ್ರು. ಹಠ ಬಿಡದ ಸುಮ ತಂದೆ ಆತನನ್ನು ಲಾಕಪ್‌ಗೂ ಹಾಕಿಸಿದ್ರು. ಅಲ್ಲಿಗೆ ಪ್ರಾಣೇಶ್ ಕನಸು ಭಸ್ಮವಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಬಂದ ಪಾಪುಗೆ ಆತ್ಮ ಕುದಿಯುತ್ತಿತ್ತು. ಸುಮ ಅಂದ್ರೆ ಪ್ರೀತಿ ಬತ್ತೋಗಿತ್ತು.. ಸುಮ ತಂದೆ ವರ್ತನೆ, ಸ್ಟೇಷನ್‌ನಲ್ಲಿ ಬಂದು ಅವರು ಆಡಿದ ಕೆಟ್ಟ ಮಾತುಗಳು.. ಅವರ ಚಿಕ್ಕಪ್ಪಂದಿರ ಅಸಹ್ಯ ವರ್ತನೆಗಳು, ಸುಮ ತೋರಿಸಿದ ಪ್ರೀತಿಯನ್ನು ಮರೆಯುವಂತೆ ಮಾಡಿತ್ತು. ಆಗ ಪಾಪು ಮನಸ್ಸಿನಲ್ಲಿದ್ದ ಸುಮ ಅವನ ಮನಸ್ಸಿನಲ್ಲಿ ಪ್ರೀತಿಸಿದ್ದು ತಪ್ಪು ಅನಿಸೋಕೆ ಶುರು ಮಾಡಿತ್ತು.

ಈ ಎಲ್ಲ ಅವಮಾನಗಳಿಂದ್ದ ಬೇಸತ್ತಿದ್ದ ಪ್ರಾಣೇಶ್ ತಂದೆ ಮದ್ದೂರು ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ್ರು.

ಅವತ್ತು ಮನಸ್ಸು ಮುರಿದುಕೊಂಡು ಸುಮಳ ಪ್ರೀತಿ ಮರಿಬೇಕು ಅಂತ ಹೊರಟ ಪಾಪು. ತಾನು ನೀಡಿದ ಆ ನಿಷ್ಕಲ್ಮಶ ಪ್ರೀತಿನ ಮರೆಯೋಕೆ ಸಾಧ್ಯನೇ ಇಲ್ಲ ಅನ್ನೋ ಆಸೆ ಹೊತ್ತ ಸುಮ ಪ್ರತಿ ದಿನ ಈ ಮಕ್ಕಳಲ್ಲಿ ಪಾಪುನ ಕಾಣೋಕ್ಕಾಗಿ ಸಂಜೆಯಾಗುತ್ತಿದ್ದಂತೆ ಓಡೋಡಿ ಬರ‍್ತಾಳೆ. ಇಲ್ಲೆ ಪಾಪು ಉಸಿರನ್ನ ಅರಸ್ತಾಳೆ.. ಇಲ್ಲಿ ಅವನ ಪ್ರೀತಿಯ ಹೆಜ್ಜೆಗಳು ಇಲ್ಲ ಅಂದ್ರು ಅವನ ಕನಸಿದೆ ಅಂತಿದ್ಲು.

ಆದ್ರೆ ಅವಳಗೆ ಗೊತ್ತಿರಲ್ಲಿಲ್ಲ ಅವಳು ಪ್ರೀತಿಸಿದ ಆ ಹುಡುಗ ಎಲ್ಲವನ್ನು ಸ್ವಲ್ಪ ಸ್ವಲ್ಪವಾಗಿ ಮರೆತು ಮತ್ತೆ ಎಂಜಿನಿಯರಿಂಗ್ ಶುರು ಮಾಡಿದ್ದ. ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಡಿ ಆಗಿ ಕೆಲಸ ಮಾಡುತ್ತಿದ್ದ. ಅವರ ಆಫೀಸ್‌ನ ಈವೆಂಟ್ ಒಂದರ ಪಿಆರ್‌ಓ ಜವಾಬ್ದಾರಿ ಸುಮ ಆಫಿಸ್‌ಗೆ ಬಂದಿತ್ತು.. ಆ ಈವೆಂಟ್‌ನಲ್ಲಿ ಸುಮಳ ಪ್ರತಿಕ್ಷಣ ಕಾಯುತಿದ್ದ ಆ ಹುಡುಗ ವೇದಿಕೆಯಲ್ಲಿ ತನ್ನ ಬಾಲ್ಯ ನೆನಪಿಸಿಕೊಂಡ ಅಲ್ಲಿ ಸುಮ ಮಾತ್ರ ಇರ‍್ಲಿಲ್ಲ.. ಹಾಗಂತ ಅವನೇನು ಮರೆತ್ತಿರ‍್ಲಿಲ್ಲ.. ಎಷ್ಟೆ ಆದ್ರು ಪ್ರೀತಿಸಿದ ಹುಡುಗ ಸಿಕ್ಕಿದಾಗ ಅಷ್ಟೂ ವರ್ಷಗಳ ನಂತ್ರ, ನೀ ನನ್ನ ಮರೆತು ಹೋಗಿದಿಯಾ ಪಾಪು, ನಾನು ನಿನ್ನ ಸುಮ ಅಂತಾ ನೆನಪಿಸೋಕೆ ಸುಮ ಮುಂದಾದ್ಲು. ಅಷ್ಟರಲ್ಲಿ ಪಕ್ಕದಲ್ಲಿದ್ದ ದೊಡ್ಡ ವ್ಯಕ್ತಿಗೆ ಪ್ರಾಣೇಶ್, ಇವಳು ನನ್ನ ಫಿಯಾನ್ಸಿ.. ಹೆಸರು ಪ್ರೀತಿ.. ಎಂದು ಪರಿಚಯಿಸಿದ.

ಒಂದೇ ಸರಿ ಸುಮಳ ಎಂಟು ವರ್ಷಗಳಿಂದ ಇಟ್ಕೊಂಡಿದ್ದ ಆಸೆ ನುಚ್ಚುನೂರಾಗಿತ್ತು. ಮತ್ತೆ ಬರ‍್ತಾನೆ ಅಂತಾ ಕಾದಿದ್ದ ಪಾಪು ಯಾವತ್ತು ಬರಲ್ಲ ಅಂತಾ ಗೊತ್ತಾಗಿತ್ತು. ಅಲ್ಲಿಂದ್ದ ಹೊರಟ ಸುಮಳಿಗೆ ಆ ಈವೆಂಟ್‌ನಲ್ಲಿ ಕಂಡದ್ದು ಅದೇ ಕಬ್ಬಿನ ಜಲ್ಲೆಯಿಂದ ಮಾಡಿದ್ದ ಮನೆ. ಅಲ್ಲಿದ್ದದ್ದು ಆದೇ ಸಾಲುಗಳು ಸಕ್ಕರೆಯೊತ್ತ ಕಬ್ಬು ಚಂದಾ.. ಪ್ರೀತಿ ತುಂಬಿ ತಂದಿರೋ ಸೇಹ ಚಂದ.. ಇದೆಲ್ಲ ನೂರಕಾಲ ನಿನ್ನಗೆ ನನ್ನ ಚಂದ.

ಸೋ, ಮತ್ತದೇ ಮುಸ್ಸಂಜೆಗೆ ಸುಮ ಹೋಗಿದ್ದಾಳೆ. ಪ್ರತಿದಿನ ಸಂಜೆ ಆ ಮೈದಾನದಲ್ಲಿ ನಗು ಹರಡಿಕೊಳ್ಳೋ ಆ ಮಕ್ಕಳ ನಗು ಇವಳ ರಾತ್ರಿಯ ಕಸಸ್ಸುಗಳಲ್ಲಿ ನಗು ತರುತ್ತೆ ಪಾಪುವಿನ ಪ್ರೀತಿಯನ್ನ ಹಸಿಹಸಿಯಾಗಿಡತ್ತೆ. ನಾ ಹಿಂಗೆ ಚಂದ ಅಂತಿರೋ ಸುಮ ಮುಂದಿನ ಜನ್ಮದಾಲಾದ್ರು ಪ್ರೀತಿಸಿ ಪ್ರೀತಿಯನ್ನು ಮರಿಬೇಡ ಪಾಪು ನನ್ನ ಪ್ರೀತಿಯನ್ನ ನೆನಪು ಮಾಡಿಕೋ ಅಂತ್ತಿದ್ದಾಳೆ. [ನೀವಿಲ್ಲಿ ನೋಡುತ್ತಿರುವುದು ಲೇಖಕಿ ರಕ್ಷಾ ಅವರ ಚಿತ್ರ.]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+