178864kannada short storyಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178864kannada short storyಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg178864kannada short storyಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg178864kannada short storyನಂಬಕೂಡದ ಸತ್ಯಕಥೆ/literature/short-story/2009/0321-satyakathe-short-story-by-narayana-murthy.htmlರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು 35411http://kannada.oneindia.com/img/2009/03/21-narayana-murthy-hosabale1.jpg178864kannada short storyಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg37448raghavendra sharmaಸಿಹಿ ಅಡಿಕೆಪುಡಿ ಮಾಡುವ ಮೂರು ಬಗೆ/recipe/shelf/2008/1224-sweet-arecanut-recipe-suggestion-one.html'ಅಡಿಕೆಗೆ ಹೋದ ಮಾನ ಆನೆಕೊಟ್ಟರೂ ಬರದು' ಎಂಬ ಗಾದೆಯನ್ನು ಮತ್ತೆ ನೆನಪಿಸುತ್ತಾ ಸಿಹಿ ಅಡಿಕೆಯ ಬಗೆಗೆ ನನಗೆ ತಿಳಿದಿರುವ ಕೆಲವು ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅಡಿಕೆ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬೆರೆತ ಆಹಾರ ಪದಾರ್ಥ. ಊಟದ ನಂತರ ಎಲೆಅಡಿಕೆ ಹಾಕುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಹಾಗೂ ಬಾಯಿ ಸ್ವಚ್ಚವೂ ಆಗುತ್ತದೆ. ಈ ಅಡಿಕೆ ಸವಿಯುವುದರಲ್ಲಿ 33676http://kannada.oneindia.com/img/2008/12/24-arecanut2.jpg37448raghavendra sharmaದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ/literature/articles/2008/1229-long-lasting-bignonia-flower.htmlಹೇಮಂತ ಮುಗಿದು ಶಿಶಿರ ಋತು ಕಾಲಿಡುತ್ತಿದ್ದಂತೆ ಮಲೆನಾಡಿನ ಕಾಡಿನಲ್ಲಿ ಹಳೆತನ ಅಳಿದು ಹೊಸತನ ಪಡೆಯುವ ಸಂಭ್ರಮ. ಸಾವಿರಾರು ಪ್ರಭೇದಗಳ ಹೂಗಳು ನನಗಿಂತ ಚೆಲುವೆಯರು ಯಾರಲ್ಲಿ? ಎಂದು ಬೀಗಲು ಪ್ರಾರಂಭಿಸುತ್ತವೆ. ಅವುಗಳ ಆಯುಷ್ಯ ಮಾತ್ರ ಒಂದೇ ದಿನ. ಆದರೆ, ಬಿಗ್ನೋನೇಸಿಯೇ (Bignoniaceae) ಕುಟುಂಬಕ್ಕೆ ಸೇರಿದ ಬಿಗ್ನೋನಿಯಾ ಹೂ ಮಾತ್ರ ಭರ್ತಿ ಎರಡು ತಿಂಗಳುಗಳ ಕಾಲ ದೀರ್ಘ ಬಾಳುತ್ತದೆ.* ರಾಘವೇಂದ್ರ 33747http://kannada.oneindia.com/img/2008/12/29-bignonia2.jpg37448raghavendra sharmaಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'/travel/karnataka/help/2009/0316-nammane-home-stay-talavata-shivamogga.htmlಕೆಲಸ ಅರಸುತ್ತಿರುವ ಹಳ್ಳಿ ಯುವಕರು ಬೆಂಗಳೂರಿಗೆ, ಕೆಲಸ ಸಿಕ್ಕ ಹಳ್ಳಿ ಸಾಫ್ಟ್ ವೇರ್ ಇಂಜಿನಿಯರುಗಳು ಡಾಲರ್ ಕನಸಿನಲ್ಲಿ ವಿದೇಶಕ್ಕೆ ಜಿಗಿಯುತ್ತಿರುವ ಸಂದರ್ಭದಲ್ಲಿ ಸಮಾನಮನಸ್ಕ ಶಿವಮೊಗ್ಗ ಜಿಲ್ಲೆ ತಳವಾಟದ ಹಳ್ಳಿ ಯುವಕರು ಪಟ್ಟಣಿಗರನ್ನೇ ಹಳ್ಳಿಗೆ ಸೆಳೆಯುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಪಟ್ಟಣ ಸೇರಬೇಕೆನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ಎಂಥವರ ಕೈಗೂ ನಿಲುಕುವ ಹೋಂಸ್ಟೇ ನಿರ್ಮಿಸಿ ಊಟ ವ್ಯವಸ್ಥೆಯ ಆತಿಥ್ಯ ನೀಡಿ ಉಪಜೀವನಕ್ಕೆ 35259http://kannada.oneindia.com/img/2009/03/16-nammane-homestay2.jpg37448raghavendra sharmaಜೋಗದ ಮಡಿಲಲ್ಲಿ ಮತ್ತುಗ ಎಂಬ ಹೋಂಸ್ಟೇ/travel/karnataka/help/2009/0321-matthuga-homestay-near-jog-falls.html253 ಮೀಟರುಗಳ ಎತ್ತರದಿಂದ ಧುಮ್ಮಿಕ್ಕುವ ವಿಶ್ವವಿಖ್ಯಾತ ಜೋಗ ಜಲಪಾತ ನೋಡಲು ಹೋದವರದು ಒಂದೇ ಬಡಬಡಿಕೆ. ಹೊಟೇಲು ಸರಿಯಿಲ್ಲ, ತುಂಬಾ ದುಬಾರಿ, ಊಟವೂ ಸರಿಯಿಲ್ಲ.. ಇತ್ಯಾದಿ ಇತ್ಯಾದಿ. ಈ ಕೊರತೆಯನ್ನು ನೀಗಿಸಲು ನರಹರಿ ಎಂಬ ಕೃಷಿಕರೊಬ್ಬರು ಮತ್ತುಗ ಎಂಬ ಹೋಂಸ್ಟೇಯನ್ನು ಜೋಗದ ಬಳಿಯಲ್ಲಿಯೇ ನಿರ್ಮಿಸಿದ್ದಾರೆ. ಬೇಸಿಗೆ ರಜೆಗಳು ಹತ್ತಿರ ಬರುತ್ತಿವೆ. ಚಿಂತೆ ಎಲ್ಲ ಮರೆತು ಹಾಯಾಗಿ ಜೋಗದ ಸುತ್ತ 35408http://kannada.oneindia.com/img/2009/03/21-matthuga-homestay1.jpg37448raghavendra sharmaಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg37449talavataಸಿಹಿ ಅಡಿಕೆಪುಡಿ ಮಾಡುವ ಮೂರು ಬಗೆ/recipe/shelf/2008/1224-sweet-arecanut-recipe-suggestion-one.html'ಅಡಿಕೆಗೆ ಹೋದ ಮಾನ ಆನೆಕೊಟ್ಟರೂ ಬರದು' ಎಂಬ ಗಾದೆಯನ್ನು ಮತ್ತೆ ನೆನಪಿಸುತ್ತಾ ಸಿಹಿ ಅಡಿಕೆಯ ಬಗೆಗೆ ನನಗೆ ತಿಳಿದಿರುವ ಕೆಲವು ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅಡಿಕೆ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬೆರೆತ ಆಹಾರ ಪದಾರ್ಥ. ಊಟದ ನಂತರ ಎಲೆಅಡಿಕೆ ಹಾಕುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಹಾಗೂ ಬಾಯಿ ಸ್ವಚ್ಚವೂ ಆಗುತ್ತದೆ. ಈ ಅಡಿಕೆ ಸವಿಯುವುದರಲ್ಲಿ 33676http://kannada.oneindia.com/img/2008/12/24-arecanut2.jpg37449talavataಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'/travel/karnataka/help/2009/0316-nammane-home-stay-talavata-shivamogga.htmlಕೆಲಸ ಅರಸುತ್ತಿರುವ ಹಳ್ಳಿ ಯುವಕರು ಬೆಂಗಳೂರಿಗೆ, ಕೆಲಸ ಸಿಕ್ಕ ಹಳ್ಳಿ ಸಾಫ್ಟ್ ವೇರ್ ಇಂಜಿನಿಯರುಗಳು ಡಾಲರ್ ಕನಸಿನಲ್ಲಿ ವಿದೇಶಕ್ಕೆ ಜಿಗಿಯುತ್ತಿರುವ ಸಂದರ್ಭದಲ್ಲಿ ಸಮಾನಮನಸ್ಕ ಶಿವಮೊಗ್ಗ ಜಿಲ್ಲೆ ತಳವಾಟದ ಹಳ್ಳಿ ಯುವಕರು ಪಟ್ಟಣಿಗರನ್ನೇ ಹಳ್ಳಿಗೆ ಸೆಳೆಯುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಪಟ್ಟಣ ಸೇರಬೇಕೆನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ಎಂಥವರ ಕೈಗೂ ನಿಲುಕುವ ಹೋಂಸ್ಟೇ ನಿರ್ಮಿಸಿ ಊಟ ವ್ಯವಸ್ಥೆಯ ಆತಿಥ್ಯ ನೀಡಿ ಉಪಜೀವನಕ್ಕೆ 35259http://kannada.oneindia.com/img/2009/03/16-nammane-homestay2.jpg37449talavataಜೋಗದ ಮಡಿಲಲ್ಲಿ ಮತ್ತುಗ ಎಂಬ ಹೋಂಸ್ಟೇ/travel/karnataka/help/2009/0321-matthuga-homestay-near-jog-falls.html253 ಮೀಟರುಗಳ ಎತ್ತರದಿಂದ ಧುಮ್ಮಿಕ್ಕುವ ವಿಶ್ವವಿಖ್ಯಾತ ಜೋಗ ಜಲಪಾತ ನೋಡಲು ಹೋದವರದು ಒಂದೇ ಬಡಬಡಿಕೆ. ಹೊಟೇಲು ಸರಿಯಿಲ್ಲ, ತುಂಬಾ ದುಬಾರಿ, ಊಟವೂ ಸರಿಯಿಲ್ಲ.. ಇತ್ಯಾದಿ ಇತ್ಯಾದಿ. ಈ ಕೊರತೆಯನ್ನು ನೀಗಿಸಲು ನರಹರಿ ಎಂಬ ಕೃಷಿಕರೊಬ್ಬರು ಮತ್ತುಗ ಎಂಬ ಹೋಂಸ್ಟೇಯನ್ನು ಜೋಗದ ಬಳಿಯಲ್ಲಿಯೇ ನಿರ್ಮಿಸಿದ್ದಾರೆ. ಬೇಸಿಗೆ ರಜೆಗಳು ಹತ್ತಿರ ಬರುತ್ತಿವೆ. ಚಿಂತೆ ಎಲ್ಲ ಮರೆತು ಹಾಯಾಗಿ ಜೋಗದ ಸುತ್ತ 35408http://kannada.oneindia.com/img/2009/03/21-matthuga-homestay1.jpg37449talavataಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg37449talavataಸುಳ್ಳು ಹೇಳದವ್ರು ಯಾರವ್ರೆ ಸುಳ್ಳು ಹೇಳದವ್ರು ಎಲ್ಲವ್ರೆ?/column/humor/2009/0522-who-does-not-lie.htmlಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾದರೆ, ತಂದೆ ತಾಯಿಯರೇ (ಕೆಲಬಾರಿ) ಅನಿವಾರ್ಯವಾಗಿ(!) ಸುಳ್ಳು ಹೇಳಿಸುವ ಮಾಸ್ತರುಗಳು. ಆದರೆ ಅವು ಮಕ್ಕಳು ಸುಳ್ಳುಗಾರ ಆಗಲಿ ಅಂತ ಕಲಿಸುವ ಸುಳ್ಳುಗಳಲ್ಲ. ಈ ಸುಳ್ಳುಗಳಿಂದ ಎಂಥ ಹಾನಿಯೂ ಆಗುವುದಿಲ್ಲ. ಒಟ್ಟಿನಲ್ಲಿ ಸುಳ್ಳಿಲ್ಲದ ಜಗತ್ತೇ ಇಲ್ಲ. ಹಾಗಂತ, ಲೇಖನ ತುಂಬಾ ಚೆನ್ನಾಗಿದೆಯಂತ ಖಂಡಿತ ಸುಳ್ಳು ಹೇಳುತ್ತಿಲ್ಲ, ನಿಜಕ್ಕೂ ಚೆನ್ನಾಗಿದೆ. ಓದಿ ನಿಮ್ಮ ನಿಜವಾದ 36833http://kannada.oneindia.com/img/2009/05/22-raghavendra-sharma1.jpgnews"> ಸಣ್ಣಕಥೆ : ವಾಸ್ತವ (ಭಾಗ 3) | Vastava | Kannada short story | Raghavendra Sharma | Talavata - ಸಣ್ಣಕಥೆ : ವಾಸ್ತವ (ಭಾಗ 3) - Kannada Oneindia

ಸಣ್ಣಕಥೆ : ವಾಸ್ತವ (ಭಾಗ 3)

(ಕಥೆ ಮುಂದುವರಿದಿದೆ)

ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ ಕೊಡದವರೂ ಅಲ್ಲಿದ್ದರು. ಜನರಲ್ಲಿ ದುಗುಡ ತುಂಬಿತ್ತು. ಒಂದಿಷ್ಟು ಜನರಿಗೆ ಅಂತರಾಳದಲ್ಲಿ ತಡೆಯಲಾರದ ಖುಷಿ ಹೊರಗಡೆ ನಡೆಯಬಾರದ ಅನಾಹುತ ನಡೆಯುತ್ತದೆ ಎಂಬ ಮುಖಭಾವವನ್ನು ತಂದುಕೊಳ್ಳಲು ಹರಸಾಹಸ ಪಡುತ್ತಿದ್ದರು. ಅಷ್ಟರಲ್ಲಿ ಅವನಿಗೆ ಹೊಕ್ಕುಳಬಳ್ಳಿ ಛಳಕ್ಕೆಂತು.

"ಇಲ್ಲಿ ಸೇರಿರುವವರೆಲ್ಲಾ ಭಕ್ತರೂ ಅಲ್ಲ, ಇವರಲ್ಲಿ ಭಕ್ತಿಯೂ ಇಲ್ಲ. ಎಲ್ಲರೂ ಪರಮ ಸ್ವಾರ್ಥಿಗಳು ಮತ್ತು ಪರಮ ಲೋಭಿಗಳು. ತಮಗೆ ಒಳ್ಳೆಯದಾಗಲಿ ಎಂದು ಗುರುಗಳ ಮಂತ್ರಾಕ್ಷತೆ ಪಡೆಯಲು ಬಂದವರು. ದಿನನಿತ್ಯ ಧರ್ಮ ವಿರೋಧಿ ಚಟುವಟಿಕೆ ಇವರ ಜೀವನ. ಸ್ವಾಮೀಜಿಗಳೆದುರಿಗೆ ಕೈಮುಗಿದು ನಾಟಕವಾಡುವ ಇವರು ನಂತರ ನಡೆ ನುಡಿಯಲ್ಲಿ ಹೆಜ್ಜೆ ಹೆಜ್ಜೆಗೂ ಮಠವನ್ನು ದೂಷಿಸುತ್ತಾರೆ. ಹಣದ ವಿಚಾರದಲ್ಲಿ ದಾಹಿಗಳು. ಇವತ್ತು ಇವರು ಈ ಪರಿ ಸೇರಿದ್ದು ಭಕ್ತಿಯಿಂದಲ್ಲ ಈ ಪರಿಸ್ಥಿತಿಯ ಲಾಭ ತನಗೆಷ್ಟು ಎಂದು ನೋಡಲು ಬಂದವರು......ಒಳ್ಳೆಯ ಕಾರ್ಯಕ್ಕೆ ಹತ್ತು ಜನ ಸೇರಿಸಲು ನಾನು ಪಾಡು ಪಟ್ಟಿದ್ದೇನೆ ಆದರೆ ಇಂದು..ನೋಡಿ......"

ಸಭೆಯಲ್ಲಿ ಗದ್ದಲ ಶುರುವಾಯಿತು. ಒಬ್ಬರು ಆತನಿಗೆ ಹೊಡೆಯಿರಿ ಎಂದರೆ ಮತ್ತೊಬ್ಬರು ಬಡಿಯಿರಿ ಎನ್ನುತ್ತಿದ್ದರು. ಆತನಿಗೆ ದೇಶದಿಂದಲೇ ಓಡಿಸಬೇಕು ಎನ್ನುತ್ತಿದ್ದರು ಮಗದೊಬ್ಬರು. ಗುರುಗಳು ಇಲ್ಲದಿದ್ದರೆ ಅವನ ಕಥೆ ನೋಡಬೇಕಿತ್ತು ಎನ್ನುತ್ತಿದ್ದ ಇನ್ನೊಬ್ಬ. ಆಶ್ಚರ್ಯವೆಂದರೆ ಹಾಗೆ ಹೇಳುತ್ತಿದ್ದಾತ ಆ ದಿನದವರೆಗೂ ಪಕ್ಕಾ ನಾಸ್ತಿಕನಾಗಿದ್ದ. ಮಠ ಸ್ವಾಮೀಜಿಗಳನ್ನು ಆತ ತಾನು ಮಾನ್ಯಮಾಡುವುದಿಲ್ಲ, ಅದು ಸೋಮಾರಿಗಳ ಸಂತೆ ಎನ್ನುತ್ತಿದ್ದ.

ಇಷ್ಟು ಗಲಭೆ ಗಲಾಟೆಗಳಾಗುತ್ತಿದ್ದರೂ ಸ್ವಾಮೀಜಿಗಳು ಮಾತ್ರ ಮುಗುಳ್ನಗುತ್ತಿದ್ದರು. ಅವರ ಈ ವರ್ತನೆ ಅವನ ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಸ್ವಾಮೀಜಿಗಳ ಸಹಾನುಭೂತಿ ಅವನೆಡೆಗೆ ಬಿದ್ದರೆ ಕಷ್ಟ ಎಂಬ ಚಿಂತೆ ಕಾಡುತ್ತಿತ್ತು. ಸ್ವಾಮಿಜಿಗೆ ಅವನ ಬಗ್ಗೆ ಸರಿಯಾಗಿ ಹೇಳಿದ್ದೀರಾ ಬಹಿಷ್ಕಾರ ಖಂಡಿತಾ ತಾನೆ, ಎಂದು ನಿಯೋಗದವರೊಡನೆ ಗುಸುಗುಸು ಪಿಸ ಪಿಸ ಮಾಡುತ್ತಿದ್ದರು. ಅವರಲ್ಲೊಬ್ಬನಿಗೆ ತಡೆಯದಾಯಿತು. ಪೀಠದ ಬಳಿ ಹೋಗಿ ತಾನು ಹೊದೆದ ಶಲ್ಯವನ್ನು ತನ್ನ ಬಾಯಿಗೆ ಅಡ್ಡ ಹಿಡಿದು, "ಅವನಿಗೆ ಬಹಿಷ್ಕಾರ ಹಾಕಲು ಇದು ಸರಿಯಾದ ಸಮಯ ನಿರ್ಣಯ ಕೊಡಿ ಎಂದ". ಸ್ವಾಮೀಜಿಗಳು ನಿಧಾನವಾಗಿ ಪೀಠದಿಂದ ಮೇಲೆದ್ದರು.

ಸಭೆ ಒಮ್ಮೆಲೆ ಸ್ತಬ್ದವಾಯಿತು. ಇಷ್ಟು ಹೊತ್ತು ಸಭೆಯ ಗಲಾಟೆಯಿಂದ ಅವನ ಮಾತುಗಳು ಯಾರಿಗೂ ಕೇಳುತ್ತಿರಲಿಲ್ಲ. ಈಗ ಮತ್ತೆ ಅವನ ಮಾತುಗಳು ಎಲ್ಲರಿಗೂ ಕೇಳಲಾರಂಬಿಸಿತು. "ಓ ಅಲ್ಲಿದಾರರಲ್ಲ ಅವರು ಇಷ್ಟು ದಿವಸ ಮಠವನ್ನು ವಿರೋಧಿಸುತ್ತಿದ್ದವರು, ಒಂದು ರೂಪಾಯಿ ದೇಣಿಗೆ ಕೊಟ್ಟವರಲ್ಲ, ಇವತ್ತು ಬಂದಿದ್ದು ಸ್ವಾರ್ಥಕ್ಕೆ, ಸಮಾಜವನ್ನು ಒಡೆಯಲು ಅವರ ಕಾಣಿಕೆ ಬಹಳ, ಅವರು ಹಿಂಸಾವಿನೋದಿಗಳು, ಮತ್ತೊಬ್ಬರಿಗೆ ತೊಂದರೆಯಾಗುತ್ತದೆಯಾದರೆ ಬೆಳಿಗ್ಗೆವರೆಗೂ ಸಭೆ ನಡೆಸುವ ಕುತ್ಸಿತ ಮನಸ್ಸಿನವರು. ಧರ್ಮ ದೇವರು ಎಲ್ಲಾ ಸುಳ್ಳು, ನೈತಿಕತೆ, ಸತ್ಯ ನ್ಯಾಯ ಎಲ್ಲಾ ಅನುಕೂಲಸಿಂಧು ಕಾರ್ಯಕ್ರಮಗಳು. ದುಡ್ಡು ಸಿಗುತ್ತದೆಯೆಂದರೆ ಧರ್ಮವನ್ನು ದೇವರನ್ನೂ, ನ್ಯಾಯ ನೀತಿಯನ್ನೂ ಧಿಕ್ಕರಿಸುವ ಜನರು...." ಕೆಲವರು ಧರ್ಮನಿಂದನೆ ಎಂದು ಕಿವಿ ಮುಚ್ಚಿಕೊಂಡರು. ಹಲವರು ಖುಷಿಪಡುತ್ತಿದ್ದರು. ಕಾರಣ ಕುರಿ ಕೊಬ್ಬಿದಷ್ಟು ಕಟುಕನಿಗೆ.....

ಇಷ್ಟೆಲ್ಲಾ ನಡೆದರೂ ಸ್ವಾಮೀಜಿಗಳ ಮುಖದಲ್ಲಿ ಮಂದಹಾಸವಿತ್ತು. ಕರಂಡಿಕೆಗೆ ಕೈಹಾಕಿ ಶ್ರೀಗಂಧವನ್ನು ತೆಗೆದುಕೊಂಡು ನಿಧಾನ ಅವನ ಬಳಿ ಹೋಗಿ ಮೂಗಿನ ಮೇಲೆ ದಪ್ಪನೆಯ ಒಂದು ಶ್ರೀಗಂಧದ ನಾಮ ಹಾಕಿದರು. ತಕ್ಷಣ ಆತನ ಮಾತುಗಳು ನಿಂತವು. ಅವನ ಕಣ್ಣುಗಳಿಂದ ದಳದಳನೆ ನೀರು ಇಳಿದು ಬರತೊಡಗಿತು. ಅವನು ನಿಧಾನವಾಗಿ ತನ್ನ ಎರಡೂ ಕೈಗಳನ್ನು ಜೋಡಿಸಿ ಸ್ವಾಮೀಜಿಗಳತ್ತ ಧನ್ಯತಾಭಾವದ ನೋಟದೊಂದಿಗೆ ಕುಸಿದು ಕುಳಿತ.

ಅದ್ಬುತವನ್ನು ಕಣ್ಣಾರೆ ಕಂಡ ಭಕ್ತಾಧಿಗಳು ಹರ್ಷೋದ್ಗಾರ ಹಾಕಿದರು. ಕಲಿಯುಗದಲ್ಲಿ ಅವತರಿಸಿದ ಪರಮಾತ್ಮ ಎಂದು ಸ್ವಾಮೀಜಿಗಳೆದುರು ಕೈಮುಗಿದು ನಿಂತರು. ಇದೆಲ್ಲಾ ಸಹಜವೆಂಬಂತೆ ಸ್ವಾಮಿಜಿ ಭಕ್ತರಿಗೆ ಮಂತ್ರಾಕ್ಷತೆ ನೀಡತೊಡಗಿದರು. ಅವನ ವಿರೋಧಿಗಳಿಗೆ ಸ್ವಾಮೀಜಿಯ ಈ ವರ್ತನೆ ಅಷ್ಟೊಂದು ಸಹ್ಯವಾಗಲಿಲ್ಲ. ತಾತ್ಕಾಲಿಕವಾಗಿ ಆಸ್ತಿಕರಾಗಿದ್ದವರು ಮತ್ತೆ ತಮ್ಮ ಮೂಲ ತತ್ವವಾದ ಮಠವಿರೋಧಿ ನಿಲುವಿಗೆ ಮರಳಿದರು. ಸ್ವಾಮೀಜಿಗಳ ಕಾರು ಧೂಳೆಬ್ಬಿಸುತ್ತಾ ಮಾಯವಾಯಿತು. ಅವನಿಗೆ ಜೀವನದಲ್ಲಿ ಮತ್ತೆಂದೂ ಹೊಕ್ಕಳಬಳ್ಳಿ ಛಳಕ್ಕೆನ್ನಲಿಲ್ಲ ಹಾಗು ಆನಂತರ ಮಠದ ಕೆಲಸಗಳಿಗೆ ತನ್ನನ್ನು ಇನ್ನೂ ಹೆಚ್ಚು ತೊಡಗಿಸಿಕೊಂಡು ಪುನೀತನಾದ.
***
ಇವೆಲ್ಲ ಘಟನೆಗಳ ನಡುವೆ ಶ್ರೀಗಂಧದೊಂದಿಗೆ ಸೂಜಿಮೆಣಸಿನ ಪುಡಿ ಬೆರಸಿ ಅವನ ಮೂಗಿನ ಮೆಲೆ ಹಚ್ಚಿ ಅವನ ಮನಸ್ಸಿನ ಒತ್ತಡವನ್ನು ದೇಹದ ಉರಿಯತ್ತ ಹೊರಳಿಸಿ ಯಶಸ್ವಿಯಾದ ಸ್ವಾಮೀಜಿಯ ತಂತ್ರ, ಶ್ರೀಗಂಧಕ್ಕೆ ಮೆಣಸಿನಪುಡಿ ಬೆರಸಿದ ಗಿಂಡಿಮಾಣಿಯ ಹೊರತಾಗಿ ಯಾರಿಗೂ ತಿಳಿಯಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+