ಒಂದು ಆತ್ಮಾನುಭವ!


‘‘ಹಾಗೆನಿಲ್ಲ ತುಂಬಾ ಹೋತ್ತಾಯ್ತು, ಮನೆಲಿ ನನ್ನ ಹೇಂಡ್ತಿ ಕಾಯತಾ ಇರ್ತಾಳೆ ಅದಕ್ಕೆ ಅವಸರ’’

‘‘ಓ ಹೌದಾ. ಅಂದಹಾಗೆ ಅದೇನದು ನಿಮ್ಮ ಕೈಯಲ್ಲಿ, ನಿಮ್ಮ ಹೆಂಡ್ತಿಗಾಗಿ ಗಿಫ್ಟ್‌’’

‘‘ಹೌದು ಇವತ್ತವಳ ಬರ್ತ್‌ಡೆ ಅದಕ್ಕೆ ಈ ಗಿಫ್ಟ ತೆಗದುಕೊಂಡು ಹೋಗ್ತಾಯಿದಿನಿ’’

‘‘ನನ್ನ ಬರ್ತ್‌ಡೆ ವಿಶಶ್‌ ಹೇಳಿ ಅವರಿಗೆ. ಅಂದಹಾಗೆ ನಿಮಗೆ ಒಂದ ಪ್ರಶ್ನೆ ಕೇಳಬೇಕು ಅಂತ ಅನ್ನಕೊಂಡಿದ್ದೆ ಅದೇನಂದರೆ, ನೀವು ಈ ದೆವ್ವ, ಭೂತ, ಆತ್ಮ ಇವುಗಳನ್ನೆಲ್ಲ ನಂಬ್ತಿರಾ?’’

‘‘ಅಯ್ಯೋ, ಅವುಗಳ ಬಗ್ಗೆ ಯೋಚನೆ ಮಾಡೋಕೆ ಎಲ್ಲಿದೆ ಹೇಳಿ ಸ್ವಾಮಿ ಟೈಮು, ಹಾಂ ಟೈಮ್‌ ಅಂದ ಮೇಲೆ ನೆನಪಾಯ್ತು ನೋಡಿ, ಈಗ ಎಷ್ಟಾಗಿದೆ ಟೈಮು?’’

‘‘ಹತ್ತು ಗಂಟೆ’’

‘‘ಹತ್ತ ಗಂಟೆನಾ! ಅಯ್ಯೋ ಬಹಳ ಲೇಟಾಯ್ತು, ಈ ಕಡೆಯಿಂದ ಹೋದ್ರೆ ನನ್ನ ಮನೆ ಬೇಗ ಬರುತ್ತೆ ನಾನು ಬರ್ತೇನೆ’’

‘‘ಅಯ್ಯೋ ನಿಲ್ಲಿ......ನಿಲ್ಲಿ...... ನಾನು ನಿಮ್ಮ ಜೊತೆ ಇನ್ನು ಸ್ವಲ್ಪ ಮಾತಾಡಬೇಕು..... ಸ್ವಲ್ಪ ಹೊತ್ತು ಅಷ್ಟೆ......ಅರೆ ನಿಲ್ಲಿ ಸಾರ್‌......ಒಂದೆ ನಿಮಿಷ......’’

*

ಎಂಥಾ ವಿಚಿತ್ರ ಮನುಷ್ಯ. ನಾನು ಈ ಕಡೆಗೆ ಬಂದ್ರು ನನ್ನ ಹಿಂದೆನೆ ಓಡಿ ಬರ್ತಾ ಇದಾನೆ, ಸದ್ಯ ಹೇಗೊ ತಪ್ಪಿಸಿಕೊಂಡು ಬಂದೆ. ಪೀಡೆ ತೊಲಗತು.

ಜಾನಕಿ ಮನೆಲಿ ಕಾಯ್ತಾ ಇರ್ತಾಳೆ. ಅವಳಿಗೆ ಇವತ್ತೊಂದು ಸರ್‌ಪ್ರಾಯಿಸ್‌ ಕೊಡಬೇಕು. ಈ ಚಿನ್ನದ ನೆಕ್ಲೆಸ್‌ ಬರ್ತ್‌ಡೆ ಗಿಫ್ಟ್‌ ಅಂತ ಅವಳಿಗೆ ಗೊತ್ತಾಯ್ತು ಅಂದ್ರೆ ಕುಣಿದು ಕುಪ್ಪಳಿಸಿ ಬಿಡ್ತಾಳೆ ಅವಳು. ಇವತ್ತು ಅವಳ ಬಹಳ ದಿನಗಳ ಕನಸು ಈಡೇರುತ್ತೆ ಹಾಗೆ ನನ್ನದು ಸಹ. ಅವಳನ್ನ ಯಾವಾಗಲೂ ನಗ್ತಾ ನೋಡಬೇಕನ್ನೊ ಆಸೆ, ಅವಳ ಅಂದ ಈ ನೆಕ್ಲೆಸ್‌ನಲ್ಲಿ ಇಮ್ಮಡಿಯಾಗೊದನ್ನ ನೋಡೊ ಆಸೆ, ಅವಳು ಈ ನೆಕ್ಲೆಸ್‌ನ್ನ ಎಲ್ಲರಿಗೂ ತೋರಿಸ್ತಾ ಗರ್ವದಿಂದ ತಿರುಗಾಡೊದನ್ನ ನೋಡೊ ಆಸೆ, ಅರೆ! ಇದೇನಿದು ನನ್ನ ಯೋಚನೆ ಎಲ್ಲಿಗೆಲ್ಲಿಗೊ ಹೋಗ್ತಾ ಇದೆ. ನಾನು ನನ್ನ ಈ ಭಾವನೆಗಳನ್ನ ನನ್ನೊಳಗೆ ಮುಚ್ಚಿಟಕೊಬೇಕು. ನಾನು ಅವಳಿಗೆ ದಿನಾ ಹೇಗೆ ಕಾಣ್ತಾ ಇದ್ದೆನೊ ಹಾಗೆ ಕಾಣಬೇಕು. ಹೌದು ನಾನು ಅವಳಿಗೆ ಇವತ್ತು ಸರ್‌ಪ್ರಾಯಿಸ್‌ ಕೊಡಲೆಬೇಕು.

ಆಗಲೆ ಮನೆ ಬಂದೆ ಬಿಡ್ತು. ಇದೇನಿದು ಇವತ್ತು ಮನೆ ಹತ್ರ ಇಷ್ಟೊಂದು ಜನ. ಜಾನಕಿ ಮತ್ತೆ ಏನಾದರೂ ಎದುರ ಮನೆ ನಾಗಮ್ಮನ ಜೊತೆ ಜಗಳಾಡಿದಳಾ? ಅಥವಾ ಆ ಬಾಜು ಮನೆ ಕುಡುಕ ಮತ್ತೆ ಗಲಾಟೆ ಮಾಡಿದನಾ. ಏನಾಗಿದಿಯಾ ಅಂತ ನಾನು ಅಲ್ಲೆ ಹೋಗಿ ನೋಡ್ತಿನಿ.

ಅಯ್ಯೋ!, ಯಾರದೊ ಡೆತ್‌ ಆಗಿರೊ ಹಾಗೆ ಕಾಣುತ್ತೆ. ಯಾರೊ ಜೋರಾಗಿ ಅಳ್ತಾ ಇದಾರೆ. ಇಲ್ಲಿಂದ ಏನು ಸ್ಪಷ್ಟವಾಗಿ ಕಾಣ್ತಾಯಿಲ್ಲ ಸ್ವಲ್ಪ ಮುಂದೆ ಹೋಗಿ ನೋಡ್ತಿನಿ.

ಅರೆ! ಇದೆನಿದು, ಅಲ್ಲಿ ಅಳ್ತಾ ಇರೋದು ಜಾನಕಿನೆ. ಅಲ್ಲಿರೊ ಶವ ಯಾರದು, ನೋಡೋಕೆ ಶವದ ಮುಖ ನನ್ನ ತರಾನೆ ಇದೆಯಲ್ಲ, ಹೌದು ನಾನೇ!..... ನನ್ನ ಇಲ್ಲಿ ಯಾರು ಯಾಕೆ ಗಮನಿಸ್ತಾ ಇಲ್ಲ...... ಜಾನಕಿ ನಾನು ಇಲ್ಲಿ..... ಇಲ್ಲಿ.... ಅವಳು ಸಹ ನನ್ನನ್ನಾ ನೋಡ್ತಾನೆ ಇಲ್ಲ..... ಇದೇನಿದು ನನಗೆ ಅವಳನ್ನ ಮುಟ್ಟೊಕೂ ಆಗ್ತಾಯಿಲ್ಲ...... ಅಂದ್ರೆ ನಾನು........ ನನ್ನ ಸೈಕಲ್ಲು........ ಆ ಆಕ್ಸಿಡೆಂಟು........ ಅಂದ್ರೆ ನಾನು...... ಹಾಗಾದ್ರೆ ರಸ್ತೇ ಮೇಲೆ ಸಿಕ್ಕನಲ್ಲ ಅವನೂ..................

*

ಹೀಗೆ, ಹೀಗೆ ನೋಡಿ ನನಗೆ ಸಿಗೋರೆಲ್ಲ ಏನೊ ಒಂದು ಅವಸರದಲ್ಲಿ ಇರ್ತಾರೆ. ಅವನ್ನ ಓಡಿ ಹೋಗಿ ಕರದ್ರು ಹಾಗೆ ಹೋದ, ಎಂಥಾ ಮನುಷ್ಯ! ಹೋಗ್ಲಿ ಬಿಡಿ. ಅಂದಹಾಗೆ ನಾನು ನಿಮಗೆ ಏನೊ ಹೇಳ್ತಾ ಇದ್ದನಲ್ಲಾ, ಹಾಂ, ಅದೆ ಈ ದೆವ್ವ, ಭೂತ, ಆತ್ಮ.......................

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+