ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಆತ್ಮಾನುಭವ!

By Staff
|
Google Oneindia Kannada News


ನಾನು ಹೊಸದಾಗಿ ಈ ಊರಿಗೆ ಬಂದಾಗ ಇಲ್ಲಿ ಜನ ನನ್ನ ಜೊತೆ ತುಂಬ ಚೆನ್ನಾಗಿ ಮಾತಡ್ತಾ ಇದ್ರು. ಯಾವಾಗ ನಾನು ಸ್ಮಶಾನ ಸುತ್ತಾಡ್ತಿನಿ ಅಂತ ಅವರಿಗೆ ಗೊತ್ತಾಯ್ತಾ ನೋಡಿ.... ಯಾಕೊ ಏನೊ ಆವಾಗನಿಂದ ನನ್ನ ಜೊತೆ ಬೆರೆಯಾದೆ ಕಡಿಮೆ ಮಾಡಿಬಿಟ್ರು. ಇಗಂತೂ ನನಗೆ ಮತ್ತು ಈ ಊರ ಜನಕ್ಕೆ ಅಂದ್ರೆ ಅಷ್ಟಕ್ಕಷ್ಟೆ, ಅದಕ್ಕೆ ನಾನೂ ಸಹ ಇತ್ತಿತ್ಲಾಗಿ ಈ ಊರ ಕಡೆಗೆ ಬರೊದನ್ನ ಕಡಿಮೆ ಮಾಡಬಿಟ್ಟಿದೀನಿ. ನಾನಾಯ್ತು ನನ್ನ ರಿಸರ್ಚಾಯ್ತು ಅಷ್ಟೆ. ಆದ್ರು ಅವಾಗವಾಗ ಮನಸ್ಸಿಗೆ ಚೆಂಜ್‌ ಬೇಕೆನಿಸಿದಾಗ ಈಕಡೆಗೆ ಬರ್ತಿನಿ, ಯಾರಾದರೊ ಮಾತಾಡಿಸಿದರೆ ಮಾತಾಡಸಿಕೊಂಡು ಹೋಗ್ತಿನಿ.

ಈ ಊರು ಅಷ್ಟೆನೂ ದೊಡ್ಡದಾಗಿಲ್ಲವಾದ್ರು ಊರಿಗೆ ಹೊಂದಕೊಂಡಿರೊ ಇದೊಂದ ಹೈವೆ, ಅದೊಂದು ಫ್ಯಾಕ್ಟರಿ ಮತ್ತು ದೆವ್ವ ಭೂತಗಳಿರೊ(ಈ ಊರ ಜನರ ಪ್ರಕಾರ) ಆ ಸ್ಮಶಾನ ಈ ಊರನ್ನ ಸುತ್ತಮುತ್ತಲಿನ ಊರಿನ ಜನರ ಬಾಯಲ್ಲಿ ಸ್ವಲ್ಪ ಪ್ರಸಿದ್ಧಿಗೆ ತಂದಿವೆ. ಈ ಹೈವೆ ಸ್ಪೆಶಾಲಿಟಿ ಅಂದ್ರೆ ಇಲ್ಲಿ ಆಕ್ಸಿಡೆಂಟ್‌ಗಳು ಬೇರೆ ಕಡೆಗಳಿಗಿಂತ ಸ್ವಲ್ಪ ಜಾಸ್ತಿ. ಅದಲ್ಲದೆ ಈ ಊರಲ್ಲಿ ದೇವದಾಸರೂ ಸ್ವಲ್ಪ ಜಾಸ್ತಿ ಅನ್ನಿ, ಒಂದ್‌ ನೈಂಟಿ ಹಾಕಿ ರಸ್ತೇಗಿಳದ್ರೂ ಅಂದ್ರೆ ಅವರಿಗೆ ಮನೆಗೆ ಹೋಗ್ತಾ ಇದಿವೊ ಅಥವಾ ಯಮಲೋಕಕ್ಕೆ ಹೋಗ್ತಾ ಇದಿವೊ ಅನ್ನೊದೆ ಗೊತ್ತಿರೊಲ್ಲ, ಬೆಳಕಾಗೊದರಲ್ಲೆ ರಾಮ್‌ ನಾಮ್‌ ಸತ್ಯಹೇ ಆಗಿಬಿಟ್ಟಿರ್ತಾರೆ.

ಅರೆರೆ! ಅದೆನದು ರಸ್ತೇ ಮೇಲೆ ಅಷ್ಟೊಂದ್‌ ಜನ, ಏನೊ ದೊಡ್ಡ ಅನಾಹುತ ಆಗಿದೆ ಅನ್ಸುತ್ತೆ. ನಾನು ನಿಮಗೆ ಮೊದಲೆ ಹೇಳದ್ಹಾಗೆ ಆಕ್ಸಿಡೆಂಟೆ ಆಗಿದೆ. ಯಾವದೊ ಲಾರಿ ಸೈಕಲ್‌ಗೆ ಗುದ್ದಿದೆ ಅನ್ಸುತ್ತೆ. ಇಲ್ಲಿಂದ ನನಗೇನೂ ಸ್ಪಷ್ಟವಾಗಿ ಕಾಣ್ತಾಯಿಲ್ಲ. ನಿಲ್ಲಿ, ಈ ಕಡೆಗೆ ಸ್ವಲ್ಪ ಜನ ಬರ್ತಾ ಇದಾರೆ ಅವರಿಗೆ ಕೇಳೊಣ,

‘‘ರಿ ಸ್ವಾಮಿ, ಅಲ್ಲೆನಾಗಿದೆ ಆಕ್ಸಿಡೆಂಟಾ?’’

ಛೇ, ಇವರೆನು ನನ್ನ ಕಡೆಗೆ ನೋಡ್ತಾನೆ ಇಲ್ವಲ್ಲ

‘‘ಹಲೋ, ಇಲ್ಲಿ, ನಾನು.... ನಾನು ಈ ಕಡೆಗೆ.....’’

ನೋಡಿ ಹೀಗೆ, ಹೀಗೆ ನನ್ನ ಅವಾಯಿಡ್‌ ಮಾಡ್ತಾರೆ ಇಲ್ಲಿ ಜನ. ನಾನು ಅವರ ಮುಂದೆ ನಿಂತಿದ್ರೂ ಸಹ ತಮ್ಮ ತಮ್ಮಲ್ಲೆ ಏನೊ ದೊಡ್ಡ ವಿಚಾರ ಮಾತಾಡ್ತ ಇದಿವಿ ಅಂತ ನಾಟಕ ಮಾಡ್ತ ಮುಂದೆ ಹೋಗ್ತಾರೆ. ಹೋಗ್ಲಿ ಬಿಡಿ ಏನು ಇವರಷ್ಟೆನಾ ಈ ಊರಲ್ಲಿ ಇರೋದು, ಇವರಿಲ್ಲದಿದ್ರೆ ಬೇರೆಯವರು ಸಿಕ್ಕೆ ಸಿಗ್ತಾರೆ. ಓ ಒಂದ್ನಿಮಿಷ, ಈ ಕಡೆಗೆ ಯಾರೊ ಒಬ್ಬ ಬರ್ತಾ ಇರೊ ಹಾಗಿದೆ. ನೋಡೊಕೆ ಒಳ್ಳೆಯಾನತರಾ ಕಾಣ್ತಾನೆ. ಒಂದ್‌ ಸಲ ಕೂಗಿ ನೋಡ್ತೆನೆ ಮಾತಾಡಿದರೂ ಮಾತಾಡಬಹುದು.

‘‘ಸಾರ್‌ ಸ್ವಲ್ಪ ನಿಲ್ಲಿ, ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕು’’

‘‘ಯಾರು ನೀವಾ ಕರೆದದ್ದು?’’

‘‘ಹೌದು ನಾನೆ’’

ಸದ್ಯ ಮಾತಾಡಿದ್ನಲ್ಲ, ಎಲ್ಲಿ ಇವನೂ ನನ್ನ ನೋಡಿ ನೋಡದ್ಹಾಗೆ ಹೋಗ್ತಾನೆ ಅಂತ ಅನ್ನಕೊಂಡಿದ್ದೆ.

‘‘ ಏನ್‌ ಸಾರ್‌ ಅಲ್ಲೆನಾಗಿದೆ, ಆಕ್ಸಿಡೆಂಟಾ?’’

‘‘ಇದ್ರು ಇರಬಹುದು, ನಾನು ಆಕಡೆಗೆ ಲಕ್ಷ್ಯ ಕೊಡೊಕೆ ಹೋಗ್ಲಿಲ್ಲ’’

‘‘ಅರೆ! ಆದ್ರೆ ನೀವು ಆಕಡೆಯಿಂದ ಬಂದ್ರಿ ತಾನೆ’’

‘‘ಹೌದು, ಆದ್ರೆ ನಾನು ಬೇರೆದೆ ಯೋಚನೆಯಲ್ಲಿದ್ದೆ ಅದಕ್ಕೆ ಆಕಡೆಗೆ ಲಕ್ಷ್ಯ ಕೊಡೊಕಾಗಲಿಲ್ಲ ’’

ಇದೇನಿದು ಇವನು ಇಷ್ಟು ಅವಸರ ಅವಸರವಾಗಿ ನಡಿತಾಯಿದಾನೆ. ನನಗೆ ಇವನ ಜೊತೆ ಹೆಜ್ಜೆ ಹಾಕೊಕೆ ಆಗತಾ ಇಲ್ಲ.

‘‘ಹೋಗ್ಲಿ ಬಿಡಿ ಸಾರ್‌. ನೀವು ನಡಿಯಾದ ನೋಡಿದರೆ ತುಂಬಾ ಅವಸರದಲ್ಲಿರೊ ಹಾಗಿದೆ, ಸ್ವಲ್ಪ ನಿಧಾನ’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X