• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತಲು

By Staff
|

ಆಫೀಸಿಗೆ ಬಂದಾಗ ಮಧ್ಯಾನ ಹನ್ನೆರುಡು ಗಂಟೆ. ಊಟಕ್ಕೆ ಇನ್ನು ಒಂದು ಗಂಟೆ ತಡವಿದೆ ಈಗ ಮೀಟಿಂಗೆ ಹೋದರೂ ಅಷ್ಟೆ ಬಿಟ್ಟರೂ ಒಂದೆ ಎಂದು ತನ್ನ ಕ್ಯಾಬಿನಿನಲ್ಲಿ ಕುಳಿತುಕೊಂಡ. ಮನೋಹರ ಕ್ಯಾಬಿನ್ನಿನ ಒಳಬಂದಿದ್ದೆ ಕೈಕೆಳಗೆ ಕೆಲಸಮಾಡುವ ಶಂಕರ ಒಳಬಂದ. ‘ಎಂ. ಎಂ. ನಿನ್ನ ಜೊತೆ ಮಾತಾಡಬೇಕಿತ್ತು’ ಅಂದ.

ಒಡೆಯುವ ಅಸಹನೆಯನ್ನು ತೋರಗೊಡದಂತೆ ಮನೋಹರ ‘ಮಾತನಾಡು’ ಅಂದ.

ಶಂಕರ ಮೇಲೆ ನೋಡಿದ, ಕೆಳಗೆ ನೋಡಿದ. ಇವತ್ತು ಅಮೇರಿಕೆಯ ಕ್ಲೈಂಟ ಇದ್ದರೂ ಅಲ್ಲವಾ ಅಂದ. ಮತ್ತೆ ನೀನು ಮೀಟಿಂಗಿಗೆ ಹೋಗಿಲ್ಲವಾ ಎಂದು ಸೇರಿಸಿದ.

‘ಇದ್ದರು ಮತ್ತು ಹೋಗಬೇಕು’ ಎನ್ನುವ ಎರಡೂ ಶಬ್ಧದಲ್ಲಿ ಮಾತು ಮುಗಿಸಿದ. ‘ಅಲ್ಲಾ ಎಂ. ಎಂ’. ಅಂದ ಶಂಕರ.

ಮನೋಹರ ಸಹನೆ ಕಳೆದುಕೊಳ್ಳುತ್ತ ‘ಬೇಗ ಹೇಳು ಶಂಕರ ್ಞಟ ಠಿಜಿಞಛಿ ್ಛಟ್ಟ ್ಛಟ್ಟಛಿ ಟ್ಝಚಢ ಜ್ಛಿ ಢಟ್ಠ ಡಿಚ್ಞಠಿ ಠಿಟ ್ಛ್ಠ್ಚk ಟ್ಝಛಿಚಠಛಿ ಛಟ ಠಟ’ ಅಂದ.

ಶಂಕರ ಟೇಬಲ್‌ ಮೇಲಿದ್ದ ಪೇಪರನ್ನಾ ಮುಟ್ಟಿದ. ಟೇಬಲ ಮೇಲಿದ್ದ ಪೋಟೋ ನೋಡಿ ‘ನಿನ್ನ ಮಗುವಿನದ್ದ’ ಅಂದ. ಮುಂದುವರಿಸಿ ‘ಎಂ. ಎಂ ನನಗೆ ಐಬಿಎಮ್‌ದಿಂದ ಒಂದು ಕೆಲಸ ಸಿಕ್ಕಿದೆ. ಇಲ್ಲಿಯ ಸಂಬಳಕ್ಕೆ ಹೋಲಿಸಿದರೆ ಶೇಕಡಾ ಮೂವತ್ತು ಹೆಚ್ಚಿಗೆ ಇದೆ. ಅದಲ್ಲದೆ ಲಂಡನ್‌ನಲ್ಲಿ ಕೆಲಸ ಬೇರೆ. ಯೋಚಿಸುತ್ತಿದ್ದೇನೆ.. ಐದು ವರುಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದರೂ ಅಂತಹ ಏಳಿಗೆ ಆಗಿಲ್ಲ ನೋಡು ಅದು ನಿನಗೂ ಗೊತ್ತು’ ಅಂದ.

‘ಗೊತ್ತು’ ಅಂದ ಮನೋಹರ.

‘ಸುತ್ತಿ ಬಳಸುವದರಲ್ಲಿ ಅರ್ಥವಿಲ್ಲ ನೇರವಾಗಿ ಕೇಳುತ್ತೇನೆ. ನಿನಗೆ ಕೊನೆಯ ವೇಳೆ ಇಪ್ಪತ್ತೈದು ಪರ್ಸಂಟಾದರೂ ಕೊಡಲಾಗುವದೋ ಎಂದ. ಸಾಧ್ಯವಾದರೆ ಬಡ್ತಿ ಕೂಡಾ.. ಎಂಬಿಎ ಯಲ್ಲಿ ಬ್ಯಾಚಮೇಟಾದವರೆಲ್ಲ ಎಷ್ಟೆಲ್ಲ ಮೇಲೇರಿದ್ದಾರೆ. ನಾನು ಈ ಇಂಡಸ್ಟ್ರಿಗೆ ಬಂದು ಹಾಳಾದೆ ಅನ್ನಿಸುತ್ತಿದೆ’ ಎಂದು ಮತ್ತೊಂದಿಷ್ಟು ಸೇರಿಸಿದ.

ಮನೋಹರ ಅವನನ್ನೆ ನೋಡಿದ. ನಂತರ ಖಚಿತತೆಯಲ್ಲಿ ಹೇಳಿದ. ‘ಶಂಕರ ಇವತ್ತೆ ನೀನು ರಾಜಿನಾಮೆ ಕೊಟ್ಟು ಹೋಗಬಹುದು. ಈಗ ಒಂದು ವರುಷದಿಂದ ನಿನ್ನ ಪ್ರಗತಿಯೂ ಅಷ್ಟಕ್ಕಷ್ಟೆ. ಹೇಳಬೇಕೆಂದರೆ ವ್ಯತ್ಯಾಸ ಆಗುವದಿಲ್ಲ ನೋಡು, ಯಾವದಾದರೂ ಸಾಪ್ಟವೇರ ಇಂಜನಿಯರ್‌ ಬಿಟ್ಟರೆ ಕಷ್ಟಆಗುತ್ತೆ. ಎಂಬಿಎ ಮೂರುದಿನದಲ್ಲಿ ತುಂಬಬಹುದು. ಇನ್ನು ಐದುವರುಷದಲ್ಲಿನ ನಿನ್ನ ಪ್ರಗತಿ ನಿನ್ನ ಸಾಧನೆಯನ್ನೆ ಬಿಂಬಿಸುತ್ತದೆ. ನೋಡು ನಿನ್ನ ಬಳಿ ಎರಡು ದಾರಿಇದೆ ಒಂದು ನೀನಾಗೆ ಕೆಲಸಕ್ಕೆ ರಾಜಿನಾಮೆ ಕೊಡುವದು, ಅದಿಲ್ಲದಿದ್ದರೆ ನೌಕರಿ ಕಳೆದುಕೊಳ್ಳುವದು ಎರಡು ಒಂದೆ ಕೊನೆಯಲ್ಲಿ ’ ಅಂದ.

ಶಂಕರನ ಮುಖನೋಡಿದರೆ ಅವನಿಗೆ ಐಬಿಎಂದಲ್ಲಿ ಸಿಕ್ಕಿರಲಿಕ್ಕಿಲ್ಲ ಬರೆ ನನ್ನ ಹೆದರಿಸಲಿಕ್ಕೆ ಬೊಗಳೆ ಬಿಟ್ಟಿರಬಹುದು ಎನ್ನಿಸಿತು. ಕಪ್ಪಿಟ್ಟ ಮುಖದಿಂದ ಶಂಕರ ‘ಎಂ. ಎಂ. ದಯವಿಟ್ಟು ಹಾಗೆನ್ನ ಬೇಡಾ.. ಐದುವರುಷ ಕಂಪನಿಗಾಗಿ ದುಡಿದಿದ್ದೇನೆ. ಹೋಗಲಿ ಬಿಡು ನನಗೆ ಮಲ್ಟಿನ್ಯಾಶನಲ್‌ ಅಷ್ಟು ಇಷ್ಟ ಇಲ್ಲ ಹೀಗೆ ಮಾರುಕಟ್ಟೆಯ ಬೆಲೆ ಎಷ್ಟಿದೆ ಅಂದು ಪರೀಕ್ಷಿಸಲೂ ಹಾಕಿದ್ದೆ ಸಿಕ್ಕಿದೆ ನೋಡು.. ನಾನು ಅದನ್ನ ಗಂಭೀರವಾಗಿ ಇನ್ನು ಯೋಚಿಸಿಲ್ಲ,’ ಎಂದು ತಡಬಡಾಯಿಸಿದ.

ಮನೋಹರ ಅವನ ಮಾತನ್ನ ಮುರಿಯುತ್ತ ನುಡಿದ. ‘ಶಂಕರ ನಿನಿಗೆ ಐಬಿಎಂನಲ್ಲಾದರೂ ಸಿಗಲಿ ವೈಟಹೌಸಿನಲ್ಲಾದರೂ ಸಿಗಲಿ. ಇಲ್ಲಿ ಮಾತ್ರ ನಿನಗೆ ಜಾಗ ಇಲ್ಲ. ಮುಂದಿನ ವಾರ ರಿಲೀಸ್‌ ಮಾಡುತ್ತೇನೆ. ದಯವಿಟ್ಟು ಈಗ ಹೊರಡು ಅಂದ. ನಿಧಾನವಾಗಿ ಎದ್ದು ನಿಂತ ಶಂಕರ ಯಾಕೋ ಅಳುವನಂತೆ ಕಂಡ. ಮನೋಹರನಿಗೆ ಕೆಟ್ಟ ಖುಷಿಯಾಯಿತು. ಬಡ್ಡಿಮಗ ಬೆದರಿಸುತ್ತಾನೆ ಈಗ ನೋಡು ಹೇಗೆ ಬೆಣೆ ಹೊಡೆಸಿಕೊಂಡಿದೆ’ ಎಂದು ಹೊರ ಹೋದ ಶಂಕರನಿಗೆ ಕೇಳದಂತೆ ಗೊಣಗಿಕೊಂಡ.

ಇನ್ನೇನೂ ಕೆಲಸ ಶುರುಮಾಡಬೇಕು ಅಂದುಕೊಂಡೊಡನೆ ಮೊಬೈಲ ರಿಂಗಾಯಿತು. ಯಾರದ್ದು ಅಂತ ನೊಡಿದರೆ ಬಾಸ್‌ ಕೆ.ಕೆ. ಮನೋಹರ ಪೋನೆತ್ತಿಕೊಂಡು ‘ಕೆ.ಕೆ ಸಾರಿ ಟ್ರಾಪಿಕ್‌ ಪ್ರಾಬ್ಲಮ’ ಅಂದ. ಕೆ.ಕೆ ಒಳ್ಳೆಯ ಮೂಡನಲ್ಲಿ ಇದ್ದಂತೆ ಕಂಡ. ಕ್ಲೈಂಟಗೆ ಶೇಂಡಿ ಹಚ್ಚಿರಬೇಕು ಅನ್ನಿಸಿತು. ಆ ಕಡೆಯಿಂದ ಕೆ.ಕೆ ‘ಸರಿ ಲಂಚಗೆ ಬಾ.. ಎಡ್ವರ್ಡಗೆ ನಿನ್ನ ಜೊತೆ ಮಾತಾಡಬೇಕಂತೆ. ಹಿ ಲೈಕ್ಸ ಯು ಮೇ ಬಿ ಹೋಮೋ’ ಎಂದು ಫೋನಿಟ್ಟ. ಮತ್ತೆ ತಿರುಗಿ ಪೋನ ಮಾಡಿ ‘ಸೂಟ ಇದೆಯಾ ಇಲ್ಲದಿದ್ದರೆ ನನ್ನ ರೂಂನಲ್ಲಿ ಒಂದು ಎಕ್ಸಟ್ರಾ ಇದೆ. ನನ್ನ ಮದುವೆಯದು ಅದು, ಅದನ್ನೆ ಹಾಕಿಕೊಂಡು ಬಾ ನಿನಗೆ ಸರಿಯಾಗಿರುತ್ತದೆ. ನನ್ನ ಹೆಂಡತಿಗೆ ಮಾತ್ರ ಈ ವಿಷಯ ಹೇಳಬೇಡಾ’ ಎಂದ.

ಎಂ ಎಂ ನ ಕಂಡದ್ದೆ ಎಡ್ವರ್ಡಮಾತಿಗಿಳಿದ. ಅವನ ಪಕ್ಕದಲ್ಲಿ ಇನ್ನಾರೋ ಒಬ್ಬಳು ಕುಳಿತಿದ್ದಳು. ಎಡ್ವರ್ಡನ ಮಾತಿನ ದಾಟಿ ನೋಡಿದರೆ ಅದು ಅವಳನ್ನ ಮೆಚ್ಚಿಸಲಿಕ್ಕೆ ಇದ್ದಂತಿತ್ತು. ಕೆ.ಕೆ ಯೆ ಅವಳ ಪರಿಚಯ ಮಾಡಿದ. ‘ಎರ್ವಿನ, ಎಡ್ವರ್ಡನ ಹೊಸ ಬಾಸ್‌ ಅವಳು’ ಎಂದು.

ಎಡ್ವರ್ಡ ಮುಂದುವರಿಸಿದ. ‘ನೋಡು ಎಂ.ಎಂ ನಿಮ್ಮ ಹುಡುಗರಿಗೆ ಇನ್ನು ಹೆಚ್ಚು ದುಡಿಯಲು ಹೇಳು. ನಿಗದಿತ ಅವಧಿಯಲ್ಲಿ ಕೆಲಸ ಮುಗಿಯದಿದ್ದರೆ ದಂಡವಿಧಿಸಬೇಕಾಗುತ್ತದೆ ಅಲ್ಲವಾ’ ಎಂದು ಅವಳಕಡೆ ಮುಖಮಾಡಿದ. ಅವಳು ವೆಜಿಟೆಬಲ್‌ ಸೂಪ್‌ ಕುಡಿಯುತ್ತಿದ್ದವಳು ‘ಪೈನ್‌’ ಅಂದಳು ಅನುಮೊದಿಸುವಂತೆ. ನಂತರ ‘ಇಲ್ಲಿ ಒಳ್ಳೆಯ ಲೆದರ್‌ ಸಾಮಾನುಗಳು ಎಲ್ಲಿಸಿಗುತ್ತವೆ. ಮೈಸೂರಿನಲ್ಲಿ ಇನ್ನೂ ಆನೆಗಳು ಬೀದಿಯಲ್ಲಿ ಓಡಾಡುತ್ತವೆಯಂತೆ ಹೌದೆ’ ಅಂದಳು. ಮಾತು ಹಳ್ಳ ಹತ್ತಿತು. ಈ ಮಾತಿನ ಮದ್ಯವೆ ಗೆಳೆಯನಿಂದ ಎಸ್ಸೆಮೆಸ್‌ ಬಂತು ಏನು ಮಾಡುತ್ತಿದ್ದಿಯಾ ಎಂದು. ಇಂಗ್ಲಿಷ ಪೇಪರ ನೊಡುತ್ತಿದ್ದೀನಿ ಎಂದು ಇವನು ಉತ್ತರ ಬರೆದ. ಚನ್ನಾಗಿದೆಯಾ ಅಂತ ಮತ್ತೆ ಬಂತು.. ಚನ್ನಾಗಿದೆ ಆದರೆ ಗ್ರಾಮರ್‌ ಸರಿಯಿಲ್ಲ ಅಂತಾ ಕಳುಹಿಸಿದ. ಮತ್ತೆ ಮಾತು ಮತ್ತೆ ದಡ ಹತ್ತಬೇಕು ಅನ್ನುವಾಗ ಎಡ್ವರ್ಡ ‘ಭಾರತ ದೇಶದ ದುರಂತ ನೋಡಿ.. ಆ ಸೋನಿಯಾ ಗಾಂಧಿ ಬಿಟ್ಟರೆ ಬೇರೆ ನಾಯಕರೆ ಇಲ್ಲ’. ಅಂದ. ಮನೋಹರ ‘ನಿಮ್ಮದು ಅದೆ ದುರಂತ ಅಲ್ವಾ ಎಡ್ವರ್ಡ ಜಾರ್ಜಿಯನ್ನ ಎರಡೆರಡು ಬಾರಿ ಆರಿಸಿದಿರಲ್ಲಾ.. ಈಗ ನೋಡಿ ಕಾರಿಗೆ ಪೆಟ್ರೋಲ ಹಾಕಿಸಲು ಒದ್ದಾಡುತ್ತಿದ್ದಿರಾ ಗ್ಯಾಲನಗೆ ಎಷ್ಟು ರೇಟು ಈಗ ನಿಮ್ಮಲ್ಲಿ’ ಅಂದ. ಎಡ್ವರ್ಡ ಉಳಿದ ಸೂಪ್‌ ಅನ್ನಾ ಒಂದೆ ಬಾರಿ ನುಂಗಿದ. ಎರ್ವಿನ, ಅವನ ಬಾಸ್‌ ತುಟಿಗೆ ಹತ್ತಿದ ಅಮೂಲ್‌ ಬಟರವರೆಸಿಕೊಳ್ಳಲು ಮರೆತಳು.

ಕಾಲು ಮೆಟ್ಟಿ ಕೆ.ಕೆ. ಸ್ವಲ್ಪ ಸುಮ್ಮನಿರು ಅಂದ. ಹಾಯ ಬಾಯ ಎಲ್ಲಾ ಮುಗಿದು, ಎಡ್ವರ್ಡ ಮತ್ತೆ ಅವನ ಬಾಸನನ್ನ ತಿರುಗಿ ಹೋಟೆಲ್‌ ಲೀಲಾಕ್ಕೆ ಕಳುಹಿಸಿ ಬಂದ ಮೆಲೆ, ಕೆ.ಕೆ. ಮನೊಹರನನ್ನ ರೂಂನ ಒಳಕರೆದು ಬೈಯ್ದ. ‘ತಲೆ ಗಿಲೆ ಇದೆಯಾ ನಿನಗೆ. ಮೊದಲೆ ಅವಳನ್ನ ಮೆಚ್ಚಿಸುವ ಪ್ರಯತ್ನದಲ್ಲಿದ್ದಾನೆ.. ಒಂದುವೇಳೆ ಅಲ್ಲಿ ಕೆಲಸಹೋದರೆ ಇಲ್ಲಿಗೆ ಬಂದು ಕುಳಿತು ಬಿಡುವ ಗಿರಾಕಿ ಅದು.. ಯಾಕೆ ನಿನಗೆ ಇಲ್ಲದ ತರಲೆ.. ಬಿಲ್‌ ಲಾಡನ ಬಾಂಬಹಾಕಿದರೇನು.. ಜಾರ್ಜಬುಷ್‌ ಅವನ ಅಂಡಿಗೆ ಬೆಣೆ ಹೆಟ್ಟಿದರೇನು.. ಕೋಳಿ ಕಳ್ಳನ, ಹಡಗು ಗಳ್ಳರ ನಡುವೆ ನಡೆಯುತ್ತಿರುವ ಜಗಳ ಅದು.. ಅದರ ಮಧ್ಯ ವೇಜಿಟೆರಿಯನ್‌ ನಾವು, ನಮ್ಮನ್ಯಾಕೆ ಸಿಲುಕಿಸುತ್ತಿಯಾ.. ನಾಳೆ ಹೋಟೆಲ್ಲಿನಲ್ಲಿ ಅವನನ್ನ ಪಿಕಅಪ್‌ ಮಾಡು. ಸಾರಿ ಕೇಳಿ ಎಲ್ಲ ಸರಿಮಾಡಿಕೋ. ಬೇಕಿದ್ದರೆ ಜಾರ್ಜಿಯ ಮಗಳನ್ನು ಹೊಗಳು.. ಅರೆ ಅವನಿಗೆ ಮಗಳಿದ್ದಾಳಾ..’ ಎಂದು ಕೆ.ಕೆ. ಮಾತು ಮುಗಿಸಿದ.

ಮನೋಹರ ಕೆ.ಕೆಯ ಸೂಟನ್ನ ಬಿಚ್ಚಿಟ್ಟ. ಬಿಚ್ಚಿಡುವಾಗ ಕಂಡ ಅವನ ಹರಿದ ಅಂಗಿಯ ನೋಡಿ. ಕೆ.ಕೆ. ಅರೆ ಏನಾಯಿತು.. ಯಾವುದಾದರೂ ಮೆಕ್ಯಾನಿಕ್‌ಗೆ ಹೇಳಬಾರದಿತ್ತಾ ನೀನೆಯಾಕೆ ಗುದ್ದಾಡಲೂ ಹೋದಿ ಅಂದ. ಮನೋಹರ ಕೆ.ಕೆ ನೋಡಿ ‘ನಾಳೆ ಅವನನ್ನ ನಾನೇ ಪಿಕ್‌ ಮಾಡಬೇಕಾ.. ಎರಡೆರಡು ಪ್ರಪೋಸಲ ಕಳುಹಿಸುವದಿದೆ’ ಅಂದ. ಕೆ.ಕೆ ಗೋಡೆ ನೋಡುತ್ತ ‘ಬೆಳಗ್ಗೆ ಹೇಳು ನಿನ್ನ ಬಳಿ ಆಗದಿದ್ದರೆ ನಾನೆ ಪಿಕ್‌ ಮಾಡುತ್ತೇನೆ’ ಅಂದ. ಮಧ್ಯ ನಿಲ್ಲಿಸಿ ‘ಅರೆ ಬೆಂಗಳೂರಿನಲ್ಲಿ ಯಾವುದಾದರು ಮಸಾಜ್‌ ಪಾರ್ಲರಿದೆಯಾ ಎಂದು ಎಡ್ವರ್ಡ ಕೇಳುತ್ತಿದ್ದ, ನಿನಗೆ ಗೋತ್ತಿರ ಬಹುದು ಅಂದಿದ್ದೆನೆ’ ಎಂದು ಕಣ್ಣು ಮಿಟುಕಿಸಿದ.

ರೂಂಗೆ ಬಂದು ಪೋನನೋಡಿದರೆ ಆಗಲೆ ನಾಲ್ಕು ಮಿಸ್ಡಕಾಲ್‌ ಇದ್ದವು. ತಿರುಗಿ ಪೋನ ಮಾಡಿದ. ಆ ಕಡೆಯಿಂದ ಅವಳು ‘ಫೀಸ್‌ ಕಟ್ಟಿದ್ದಿಯಾ’ ಅಂದಳು. ‘ಕಟ್ಟಿದೆ ಹನಿ ದಂಡ ತೆಗೆದುಕೊಳ್ಳಲಿಲ್ಲ.. ಪ್ರಿನ್ಸಿಪಾಲರಿಗೆ ಹೇಗೆ ಬೈಯ್ದಿದೀನಿ’ ಅಂದ.

‘ಪ್ರಿನ್ಸಿಪಾಲರಿಗೆ ಯಾಕೆ ಬೈಯಲಿಕ್ಕೆ ಹೋದೆ. ನಾಳೆ ಸ್ಕೂಲ್‌ನಲ್ಲಿ ಪಾಪುಗೆ ಅವರು ತೊಂದರೆ ಮಾಡಿದರೆ, ಇಲ್ಲದೆ ಹೊದದ್ದು ನಿನಗ್ಯಾಕೆ ಬೇಕಿತ್ತು.. ಅದಲ್ಲದೆ ದಾರಿಯಲ್ಲಿ ಯಾರ ಜೊತೆಯೋ ಹೊಡೆದಾಡಿದೆಯಂತೆ.. ಪಾಪು ಜೋರ್‌ ಪೋಕಮನ ಪೈಟ ಅಂತ ಇಲ್ಲಿ ಎಲ್ಲರ ಬಳಿ ಹೇಳಿಕೊಂಡು ತಿರುಗುತ್ತಿದೆ. ಬಿಲ್ಡ್‌ಂಗನಲ್ಲಿ ಎಲ್ಲರಿಗೂ ತಿಳಿದಿದೆ. ಆಷ್ಟೆ ಅಲ್ಲ ನನ್ನ ಪಪ್ಪ ಟೀಚರ್‌ ಹತ್ತಿರ ಸುಳ್ಳು ಹೇಳಿ ಬಯ್ಸಿಕೊಂಡ ಅಂದು ಕುಣಿಯುತ್ತಿದೆ. ಏನಾಯ್ತು ನಿನಗೆ ಮನೋಹರ? ಕ್ಷುಲ್ಲಕ ಕಾರಣಕ್ಕೆ ನಾಲ್ಕು ಕೊಲೆಯಾಗೋ ಈ ಬೆಂಗಳೂರಿನಲ್ಲಿ ಯಾಕೆ ಬೇಕಿತ್ತು ನಿನಗೆ ಬೀದಿ ಜಗಳ. ಯಾರಾದರೂ ಏನಂದೂಕೋ ಬೇಕು. ಯಾಕೆ ಇಲ್ಲದ ಲಫಡಾಗಳಿಗೆ ನೀನು ಸಿಲಿಕಿಕೊಳ್ಳುತ್ತಿ. ಏನಾದರೂ ಹೆಚ್ಚು ಕಮ್ಮಿಯಾದರೆ ನಾನು ಪಾಪು ಏನುಮಾಡಬೇಕು.. ಕೋಟಿಗಟ್ಟಲೆ ಸಾಲ ಬೇರೆ ಮಾಡಿಟ್ಟಿದಿಯಾ ಆ ಸೈಟು ಈ ಮನೆ ಅಂದು. ನನಗಂತೂ ಸಾಕಾಗಿ ಬಿಟ್ಟಿದೆ. ಈ ಜಗಲ, ರಸಕಸೆ ಕಿರಿಕಿರಿ ಅದರ ಮೇಲೆ ನಿನ್ನದೊಂದು. ಹೋಗಲಿ ಎಷ್ಟುಹೊತ್ತಿಗೆ ಊಟಕ್ಕೆ ಬರ್ತಿ. ಪಾಪುವಿನ ಪ್ರೆಂಡ್ಸಮನೆಯಲ್ಲಿ ಬರ್ತಡೇ ಅದಕ್ಕೆ ನಾನು ಪಾಪು ಅಲ್ಲಿಗೆ ಹೋಗುತ್ತಿದ್ದೇವೆ. ಅಲ್ಲಿ ನಿನ್ನ ಕತೆಯನ್ನ ಹಾಡಿಕೊಂಡೂ ಕುಣಿಯದಿದ್ದರೆ ಸಾಕು ಅದು’ ಅಂದಳು. ‘ನಾನೊಂದು ಹೋಸ ಸೀರೆ ತೆಗೆದುಕೊಂಡಿದ್ದೆನೆ ಹನ್ನೆರಡು ಸಾವಿರ’ ಅಂದು ಮಾತು ಮುಗಿಸಿದಳು.

‘ನನಗಾಗಿ ಕಾಯುವದು ಬೇಡಾ, ರಾತ್ರಿ ಎರಡು ಅಥವಾ ಮೂರಾಗುತ್ತದೆ. ಒಂದಿಷ್ಟು ಪ್ರಪೋಸಲ್‌ ಇದೆ ಮತ್ತೆ ನಾಳಿನ ಮೀಟಿಂಗಗೆ ತಯಾರಾಗ ಬೇಕು. ಕ್ಷಮೆ ಇರಲಿ ನನ್ನ ಮೇಲೆ’ ಅಂದ.

‘ನಿನ್ನ ಕ್ಷಮೆ ತಿನ್ನುವದೇ ಆಯಿತು ನನ್ನ ಜೀವನ.. ಇರಲಿ ಮನೆಗೆ ಬಾ ಬರುವಾಗ ಬಾಳೆ ಹಣ್ಣು ಎಲ್ಲಾದರೂ ಸಿಕ್ಕಿದರೆ ತೆಗೆದುಕೊಂಡು ಬಾ’ ಅಂದು ಪೋನಿಟ್ಟಳು.

ಎಲ್ಲ ಕೆಲಸ ಮುಗಿಸಿದಾಗ ರಾತ್ರಿ ಮೂರುಗಂಟೆ. ದಿನವೊಂದು ಮುಗಿದಂತೆ ಮನೆಗೆ ಹೊರಟವನಿಗೆ ದೂರದಲ್ಲಿ ಆಟೋ ಒಂದು ಬರ್‌ ಎಂದು ಓಡುತ್ತಿತ್ತು. ದಾರಿಯ ಇಕ್ಕೆಲಗಳನ್ನ ಅದು ಎಬ್ಬಿಸುವ ಹೊಗೆ ಮೋಡದಂತೆ ತುಂಬುತ್ತಿತ್ತು. ದಾರಿ ಬಿಡು ಅನ್ನುವಂತೆ ಮನೋಹರ ಹಾರ್ನಒತ್ತಿ ಹಿಡಿದ. ಆಟೋ ಮತ್ತೊಂದಿಸ್ಟು ಜೋರಾಯಿತೆ ಹೊರತು ಮಧ್ಯ ದಾರಿಯಿಂದ ಸರಿಯಲಿಲ್ಲ. ಹಿಂದಿನಿಂದ ಹೋಗಿ ಡಿಕ್ಕಿಕೊಟ್ಟರೆ ಹೇಗೆ ಎಂದು ಯೋಚಿಸಿದ.

ಇದ್ದಕ್ಕಿದ್ದಂತೆ ಏನೊ ಮುರಿದ ಸಪ್ಪಳ ಅದರ ಹಿಂದೆಯೇ ಆಟೊ ಆ ಕಡೆ ಈ ಕಡೆ ಓಲಾಡಿ ತಲೆಕೆಳಗಾಗಿ ಡ್ರೈವರ ಜೊತೆಗೆ ದಾರಿಯ ಪಕ್ಕೆಲದಲ್ಲಿ ಪ್ಲೈಒವರಗಾಗಿ ತೋಡಿದ ಗುಂಡಿಯಲ್ಲಿ ಬಿತ್ತು. ಕೂಗುವ ಮುರಿಯುವ ಎಲ್ಲ ಸಪ್ಪಳಗಳು ಒಂದಕ್ಕೊಂದು ಬೆಸೆದುಕೊಂಡು ಅಲ್ಲೊಂದಿಸ್ಟು ಗದ್ದಲ ಎಬ್ಬಿಸಿ ತಣ್ಣಗಾಯಿತು. ನರಳುವ ಧ್ವನಿಯಾಂದೆ ಕ್ಷೀಣವಾಗಿ ಕೇಳತೊಡಗಿತು.

ಮನೋಹರ ಗಾಡಿ ನಿಲ್ಲಿಸಿ ಹೇಡಲೈಟ ಬೆಳಕಲ್ಲಿ ಧ್ವನಿ ಬರುವತ್ತ ನಡೆದ. ಬಗ್ಗಿ ನೊಡಿದರೆ ಡ್ರೈವರ ಪ್ರಾಣಾಂತಿಕವಾದ ನೋವಿನಲ್ಲಿ ಕಿರುಚುತ್ತಿದ್ದ. ನೋವಿಗೆ ಅವನ ಮುಖದ ನರ ನರವೂ ಕಿವುಚಿಕೊಂಡಂತಿತ್ತು. ಬಾಯಿ ತುಂಬಿಕೊಂಡಿರುವ ರಕ್ತ ಅವನ ಎದೆಯ ಮೇಲೆ ಇಳಿಯುತ್ತಿತ್ತು. ಅರ್ಧ ಅಳು, ಅರ್ಧ ಹೆದರಿಕೆಯಲ್ಲಿಯೆ ತನ್ನಮುಂದೆ ಯಾರೋ ನಿಂತಿರುವದು ಅರಿವಿಗೆ ಬಂದಂತೆ ಅವನು ಗೋಗರೆಯತೋಡಗಿದ. ದಯಮಾಡಿ ಉಳಿಸಿ ಸಾರಾ ಅಂಬುಲೆನ್ಸಗೆ ಪೋನ ಮಾಡಿ ಸಾರ್‌.. ಮನೆಯಲ್ಲಿ ಮಗಳಿದ್ದಾಳೆ ಸಾರಾ.. ಮತ್ತೆ ನೋವು ಹೆಚ್ಚಾಗಿ ಅಳತೊಡಗಿದ.

ಮನೋಹರ ಪ್ಯಾಂಟ ಕಿಸೆ ಮುಟ್ಟಿನೊಡಿಕೊಂಡ. ಕಿಂಗ್ಸ ಸಿಗರೇಟ ಸಿಕ್ಕಿತು. ಎತ್ತಿ ಸೇದತೋಡಗಿದ. ಅಳುವ, ನರಳುವ ಡ್ರೈವರ್‌ನನ್ನ ನೋಡುತ್ತ ನುಡಿದ ‘ ಬಹಳ ನೋಯುತ್ತ ಸೂಳೆ ಮಗನೆ.. ಅಂಡಿಗೊಂದು ರಾಕೆಟ ಕಟ್ಟಿಕೊಂಡಂತೆ ಮಧ್ಯದಾರಿಯತುಂಬ ಓಡಿಸುತ್ತಿದ್ದಿಯಲ್ಲ. ನೋಯಲಿ ಈಗ, ನೀನು ಸತ್ತರೆ ನನಗೇನಾದರೂ ತೊಂದರೆ ಇದೆಯಾ, ನಾನ್ಯಾಕೆ ಸಿಲುಕಿಕೊಳ್ಳಲಿ ನಿನ್ನ ಲಪಾಡಾದಲ್ಲಿ’ ಎಂದು ತಿರುಗಿ ಕಾರ್‌ ಹತ್ತಿ ಮುಂದೆ ಹೊರಟ. ಸಾರ್‌ ಸಾರ ಎಂದು ಕೂಗುವ ಡ್ರೈವರನ ಧ್ವನಿ ಕ್ರಮೇಣ ಕೇಳುವದು ನಿಂತಿತು.

ಕಾರಿನ ಸೈಡ್‌ ಮಿರರ್‌ ಅಲ್ಲಿ ಏನಾದರೂ ಕಾಣುತ್ತದೆಯೋ ಎಂದು ನೋಡಿದರೆ ಕಣ್ಣ ಕ್ಷಿತಿಜದ ವರೆಗೂ ಹಬ್ಬಿಕೊಂಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more