ಕತೆಗಳು ಮೂರು : ಭಾವಗಳು ನೂರು!
ಸುಂದರ ನಾಳೆಗಳಿಗಾಗಿ ಇಂದೇನು ಮಾಡಬೇಕು? ಪ್ರೀತಿಯ ತಾಕತ್ತು ನಿಜಕ್ಕೂ ಎಷ್ಟು? ಗೆಳೆತನ ಅಂದರೆ ಏನು? -ಇವೆಲ್ಲವುಗಳನ್ನು ಹೃದಯಕ್ಕೆ ಮುಟ್ಟುವಂತೆ ಅರ್ಥ ಮಾಡಿಸುವ ಪ್ರಯತ್ನ ಇಲ್ಲಿದೆ. ಇಂಥ ಪ್ರಯತ್ನಗಳಿಗೆ ಸದಾ ಸ್ವಾಗತ.
- ಚಂದ್ರಮ, ಬೆಂಗಳೂರು
ಬೇರೆ ಬೇರೆ ರಾಜ್ಯದಿಂದ ಬಂದ ಮೂರು ಜನರನ್ನು ಒಂದೆ ಜೈಲಿನಲ್ಲಿ ಕೂಡಿಹಾಕಲಾಗಿತ್ತು. ಮೂರೂ ಜನರು ಮೂರು ವರ್ಷದ ಶಿಕ್ಷೆಗೊಳಗಾಗಿದ್ದರು. ಮೂರೂ ಜನರಿಗೆ ಅವರ ಆಸೆ ಈಡೆರಿಸಿಕೊಳ್ಳಲು ಅವಕಾಶ ನೀಡಲಾಯಿತು.
ಗೋವಾದಿಂದ ಬಂದವ ಮೂರು ವರ್ಷದವರೆಗೆ ಸಿಗರೇಟು, ಪಾನೀಯ ಕೇಳಿದ. ಬಿಹಾರದಿಂದ ಬಂದ ರಸಿಕ ಹೆಣ್ಣನ್ನು ಕೇಳಿದ. ಗುಜರಾತಿನಿಂದ ಬಂದವ ಎಲ್ಲಿ ಬೇಕಾದರೂ ಕರೆ ಮಾಡಬಹುದಾದಂತ ಫೋನನ್ನು ಕೇಳಿದ. ಮೂವರಿಗೂ ಅವರು ಕೇಳಿದ್ದನ್ನು ಒದಗಿಸಲಾಯಿತು.
ಮೂರು ವರ್ಷದ ನಂತರ ಮೂವರಿಗೂ ಬಿಡುಗಡೆಯಾಯಿತು. ಗೋವಾದವನು ಇನ್ನಷ್ಟು ಪಾನೀಯ, ಸಿಗರೇಟು ಬೇಕೆಂದು ಹೊಡೆದುಕೊಳ್ಳುತ್ತಿದ್ದ. ಬಿಹಾರಿ ಮೂರು ಮಕ್ಕಳು ಮತ್ತು ಹೆಂಡತಿಯ ಜೊತೆ ಪರದಾಡುತ್ತಿದ್ದ. ಗುಜರಾತಿ ಮಾತ್ರ ಕಳೆದುಹೊದ ಮೂರು ವರ್ಷದ ಬಗ್ಗೆ ಸಂತೋಷದಿಂದಿದ್ದ. ಆ ಮೂರು ವರ್ಷಗಳಲ್ಲಿ ಅವನ ವ್ಯಾಪಾರ ಸಾಕಷ್ಟು ಬೆಳೆದಿತ್ತು. ಅವನು ಗೆಳೆಯರ, ಸಂಬಂಧಿಗಳ ಸಂಪರ್ಕ ಹೊಂದಿದ್ದರಿಂದ ಹೊರ ಜಗತ್ತಿನಲ್ಲಿ ನಡೆಯುತ್ತಿದ್ದ ಎಲ್ಲ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡಿದ್ದ.
ನಾವು ಇಂದು ತೆಗೆದುಕೊಂಡ ನಿರ್ಧಾರ, ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ಈಗಿನ ಜೀವನ ನಾವು ಮೂರು(?) ವರ್ಷಗಳ ಹಿಂದೆ ತೆಗೆದುಕೊ0ಡ ನಿರ್ಧಾರದ ಮೇಲೆ ಅವಲಂಬಿಸಿರುತ್ತದೆ. ಹಾಗಾದರೆ ನಿಮ್ಮ ಇಂದಿನ ನಿರ್ಧಾರವೇನು?
ಮೂರು ವರ್ಷಗಳ ನಂತರ ನಿಮ್ಮನ್ನು ನೀವು ಹೇಗೆ ಊಹಿಸಿಕೊಂಡಿದ್ದೀರಿ?
***
ಕೀಲಿ ಕೈ
ದೊಡ್ಡದೊಂದು ಕೀಲಿ ಬಾಗಿಲಿಗೆ ನೇತಾಡುತ್ತಿತ್ತು. ಅದನ್ನು ತೆಗೆಯಲು ಗಟ್ಟಿಯಾದ ಕಬ್ಬಿಣದ ಸಲಾಕೆಯಾಂದು ಪ್ರಯತ್ನಿಸುತ್ತಿತ್ತು. ತುಂಬಾ ಹೊತ್ತು ಪ್ರಯತ್ನಿಸಿ ಸೋತು ಕುಳಿತಿತು. ಆಗ ಬಂತು ಕೀಲಿ ಕೈ, ತನ್ನ ತೆಳ್ಳನೆಯ ಮೈಯಿಂದ ಕೀಲಿಯ ಒಳ ಸೇರಿ, ಒಂದು ಸಣ್ಣ ತಿರುವಿನಿಂದ ಕೀಲಿಯನ್ನು ತೆರೆಯಿತು. ಇದನ್ನೆ ನೋಡುತ್ತಿದ್ದ ಕಬ್ಬಿಣದ ಸಲಾಕೆ ಕುತೂಹಲದಿಂದ ಕೇಳಿಯೆಬಿಟ್ಟಿತು. ‘ನನ್ನಂಥ ಗಟ್ಟಿಗನಿಂದ ಸಾಧ್ಯವಾಗದ ಈ ಕೆಲಸ, ನಿನ್ನಂತ ಕಡ್ಡಿಯಿಂದ ಅದು ಹೇಗೆ ಸಾಧ್ಯವಾಯಿತು?’. ಇದನ್ನು ಕೇಳಿದ ಕೀಲಿ ಕೈ ಉತ್ತರಿಸಿತು,‘ಅದು ಹೇಗೆಂದರೆ, ನನಗೆ ಅದರ ಹೃದಯಾಂತರಾಳ ಚೆನ್ನಾಗಿ ಗೊತ್ತು’.
ಎಲ್ಲರ ಹೃದಯವು ಕೀಲಿ ಹಾಕಿದ ಬಾಗಿಲಿನಂತೆ. ಅದನ್ನು ತೆಗೆಯಲು ಗಟ್ಟಿಯಾದ ಕಬ್ಬಿಣದ ಸಲಾಕೆ ಬೇಕಿಲ್ಲ. ಪ್ರೀತಿ, ಆತ್ಮೀಯತೆ, ಮಧುರವಾದ ಮಾತು, ಮುಖದಲ್ಲೊಂದು ಮುಗುಳ್ನಗೆ ಇವಿಷ್ಟಿದ್ದರೆ ಸಾಕು, ಎಂಥಾ ಹೃದಯದ ಬಾಗಿಲನ್ನು ಅತ್ಯಂತ ಸುಲಭವಾಗಿ ತೆಗೆಯಬಹುದು.
***
ಲಾಸ್ಟ್ ಪಂಚ್
ನಿಮಗೆ ಎರಡೂ ಕಣ್ಣುಗಳ ನಡುವಿನ ಸಂಬಂಧ ಗೊತ್ತೆ?
ಯಾವಾಗಲೂ ಜೊತೆಯಲ್ಲಿರುತ್ತವೆ.
ಜೊತೆಯಲ್ಲೆ ತೆರೆಯುತ್ತವೆ, ಮುಚ್ಚುತ್ತವೆ.
ಜೊತೆಯಲ್ಲೆ ಅಳುತ್ತವೆ, ಜೊತೆಯಲ್ಲೆ ನಗುತ್ತವೆ.
ಜೊತೆಯಲ್ಲೆ ಮಲಗುತ್ತವೆ
ಆದರೆ ಅವು ಒಂದನ್ನೊಂದು ನೋಡೊದಿಲ್ಲ.
ಇದುವೆ ಗೆಳೆತನ...
ಆದರೆ ಒಂದು ಸುಂದರವಾದ ಹುಡುಗಿ ಮುಂದೆ ಬಂದಾಗ ಒಂದು ಕಣ್ಣು ಮಾತ್ರ ರೆಪ್ಪೆ ಬಡಿಯುತ್ತದೆ... ಅಂದ್ರೆ..ಒಂದು ಹುಡುಗಿ ಎಂಥ ಗೆಳೆತನವನ್ನು ಮುರಿಯಲು ಕಾರಣವಾಗಬಲ್ಲಳು!












Click it and Unblock the Notifications