ಪುನರ್ನಿವಾಸ
ಅದು ಪ್ರಳಯದ ರಾತ್ರಿ. ಎಲ್ಲವೂ ಕೆಲವೇ ಕ್ಷಣಗಳಲ್ಲಿ ಬೂದಿಯಾದ ಕ್ಷಣಗಳವು!
ಭೂಮಿಯಲ್ಲಿ ಮನುಷ್ಯ ಸಂತತಿಯನ್ನು ನಿರ್ನಾಮವಾದ ಮರುದಿನದ ಸಂಜೆ, ಅವರಿಬ್ಬರು ಜೊತೆಯಾಗಿ ನಡೆಯುತ್ತಿದ್ದರು. ತಮ್ಮ ಗತಜೀವಿತದ ಬಗ್ಗೆ ಮಾತನಾಡುತ್ತಿದ್ದರು.
‘ನನ್ನ ಗಂಡ ಅಷ್ಟು ಒಳ್ಳೆಯವನಿರಲಿಲ್ಲ’
‘ನನ್ನ ಹೆಂಡತಿಯೂ’
‘ಈ ಪ್ರಪಂಚಕ್ಕೆ ನಾವೇ ಕೊನೆಯವರು ಅಲ್ಲವಾ?’
‘ಇರಬಹುದು...’
‘ನಮ್ಮ ಹಾಗೆ ಮತ್ತೆ ಈ ಪ್ರಪಂಚಕ್ಕೆ ಜನ ಬರುವುದೂ ಬೇಡ, ಈ ಕೋಟಲೆಗಳು ಮರುಕಳಿಸುವುದೂ ಬೇಡ..’
ಆತ ಸುಮ್ಮನಿದ್ದ.
ನಸುಗತ್ತಲೆಯಲ್ಲಿ ಆಕೆ ಕಲ್ಲೊಂದನ್ನು ಎಡವಿಕೊಂಡಳು. ಆತ ಸಮಾಧಾನಪಡಿಸಿದ.
‘ನೀನು ನನ್ನಾತನಿಗಿಂತ ಒಳ್ಳೆಯವನು...’
‘ನೀನೂ ನನ್ನಾಕೆಗಿಂತ ನಿಜಕ್ಕೂ ಒಳ್ಳೆಯವಳು...’
ಆಕೆ ಆತನಿಗೆ ಆತ್ಮೀಯವಾಗಿ ಒರಗಿಕೊಂಡಳು... ಆತನೂ ಆಪ್ತತೆಯಿಂದ ಆಕೆಯ ತಲೆ ನೇವರಿಸಿದ.
ಆ ರಾತ್ರಿಯ ನಂತರ ಭೂ ವಸತಿಯ ಕಷ್ಟಗಳ ಪರಂಪರೆಯೂ, ಅದರ ಪರಂಪರೆಯ ಕಷ್ಟಗಳೂ ಮತ್ತೆ ಆರಂಭಗೊಂಡವು! ಗುರುತಾಗಿ ಎಲ್ಲಿಂದಲೋ ಕೊಚ್ಚಿ ಬಂದ ಮಣ್ಣಿನ ಮೇಲೆ ಗರಿಕೆಯಾಂದು ಚಿಗುರಿತ್ತು!












Click it and Unblock the Notifications