• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಂಡು

By Staff
|

, ಬೆಂಗಳೂರಿನ ಬಳಿ ಒಂದು ಒಳ್ಳೆ ವಿಶ್ವವಿದ್ಯಾನಿಲಯದಲ್ಲಿ ತನ್ನ ಬಿ.ಇ. ಪದವಿ ಪಡೆದುಕೊಂಡ. ಆತ ಯಾವ ವಿಷಯದಲ್ಲಿ ಪರಿಣತಿ ಹೊಂದಿದ್ದ ಎನ್ನುವುದು ಮುಖ್ಯವಾಗಿರಲಿಲ್ಲ. ಐ. ಟಿ ಉದ್ದಿಮೆ ವೇಗದಲ್ಲಿ ಬೆಳೆಯುತ್ತಲೇ ಇತ್ತು. ಎಲ್ಲರೂ ಅದರಲ್ಲಿ ದುಮುಕಿ ದುಡ್ಡು ಗಳಿಸುವುದರಲ್ಲಿ ತೊಡಗಿದ್ದರು. ಸಹ ಅದೇ ದಾರಿ ಹಿಡಿದ. ತಾನೇನು ಮಾಡುತ್ತಿದ್ದೇನೆ ಎಂದು ತಿಳಿಯುವ ಮುಂಚೆಯೇ ಆತ ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಬರೆಯಲು ತೊಡಗಿದ.

ಕಾಲೇಜಿನಲ್ಲಿ ಪಾಠಗಳನ್ನು ಕೇಳಲು ಯಾರೂ ಹೋಗುತ್ತಿರಲಿಲ್ಲ. ಅವುಗಳನ್ನು ಹೇಳಿಕೊಡುವ ಅಧ್ಯಾಪಕರೂ ಅಷ್ಟಕ್ಕಷ್ಟೆ. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯೋದೇನು ಕಷ್ಟವಾಗಿರಲಿಲ್ಲ. ನಾಲ್ಕು ವರ್ಷ ಹೀಗೆ ಬಂದು ಹಾಗೆ ಹೋಯ್ತು. ಅದಾದ ತಕ್ಷಣವೆ ಗೆ ಬೆಂಗಳೂರಿನಲ್ಲಿ ಒಂದು ದೊಡ್ಡ ಆಫೀಸಿನಲ್ಲಿ ಕೆಲಸವೂ ದೊರೆಯಿತು. ಅವನ ತಂದೆ-ತಾಯಿಯರ ಸಂತೋಷ ಹೇಳತೀರದು.

‘ನಮ್ಮ ಮಗ ಎಂಎನ್‌ಸಿ ಯಲ್ಲಿ ಕೆಲಸ ಮಾಡ್ತಿದ್ದಾನೆ. ನಿಮ್ಮವ ಏನ್‌ ಮಾಡ್ತಿದ್ದಾನೆ ಈಗ?’ ಇಂಥ ಪ್ರಶ್ನೆಗಳು ಅವರಿಂದ ಜಾಸ್ತಿಯಾದವು.

ವಿಗೆ ಒಂದು ಬಿಸಿನೆಸ್‌ ಕಾರ್ಡ್‌ ಕೊಡಲಾಯಿತು. ಅದರೊಡನೆ ಒಂದು ಹೊಸ ಬ್ಯಾಂಕ್‌ ಅಕೌಂಟ್‌, ಅವುಗಳ ಎರಡು ಕಾರ್ಡಗಳು, ಎಲ್ಲವೂ ಕಾಸಿಲ್ಲದೆ! ಎಲ್ಲವೂ ಹೊಸದು... ಕೂಡಲು ಹೊಸ ಕೊಠಡಿ, ಕಂಪ್ಯೂಟರ್‌, ದೂರವಾಣಿ , ಮೇಜು...ಎಲ್ಲವೂ ದರ್ಪಕ್ಕೆ ಕುಮ್ಮಕ್ಕು ನೀಡುವ ಹಾಗಿತ್ತು.

ವಿನ ಆಂಗ್ಲ ಭಾಷೆ ಬಳಕೆ ಹೆಚ್ಚಿತು. ಆಫೀಸಿನಲ್ಲಿ ಎಲ್ಲವೂ ಚೆನ್ನಾಗಿದ್ದಂತೆ ಕಂಡಿತು. ಕೆಲಸಕ್ಕೆ ಸೇರಿ ಒಂದು ತಿಂಗಳಿನಲ್ಲಿ ಮೊಟ್ಟ ಮೊದಲನೆಯ ಪ್ರೋಗ್ರಾಂ ತಿದ್ದಲು ಅವಕಾಶ.

ಪ್ರಾರಂಭಿಕ ದಿನಗಳಲ್ಲಿ ಅವನಿಗೆ ರೀತಿ-ನೀತಿಗಳನ್ನು ಕಲಿಸಲಾಯಿತು. ಊಟ ಹೇಗೆ ಮಾಡುವುದು, ಚಮಚವನ್ನು ಹೇಗೆ ಹಿಡಿಯೋದು, ಯಾವ ಬಟ್ಟೆ ಧರಿಸೋದು, ಹೇಗೆ ಎಲ್ಲರೊಡನೆ ಮಾತಾಡುವುಡು; ಎಲ್ಲವೂ ಕಲಿಸಲಾಯಿತು. ವಿಗೆ ಮೊದಲೆ ಇವೆಲ್ಲ ಗೊತ್ತಿದ್ದಿಲ್ಲವೆಂದಲ್ಲ, ಸಾಮಾನ್ಯರಂತೆಯೆ ಇರುತ್ತಿದ್ದ, ಆದರೂ ಅವನಿಗೆ ಸ್ವಲ್ಪ ಪರಿಷ್ಕರಣೆ ಬೇಕಿತ್ತು! ಅವನಿಗಾದರೋ, ಕೊನೆಗಾದರೂ ಸಮಾಜದ ರೀತಿ-ನೀತಿ ಕಲೀತಿದ್ದೆನಲ್ಲಾ ಎಂದೆನಿಸಿತು. ಚಿಕ್ಕಂದಿನಿಂದ ಕಲಿತವುಗಳು ತೀರ ಹಳೆಯ ಪೆದ್ದ ಆಚರಣೆಯಂತೆ ಕಂಡಿತು. ‘ಕಾಯಕವೇ ಕೈಲಾಸ’ ವೆಂಬ ಮಾತಿನ ಪರಿಪಾಲನೆಯಾಯಿತೇನೊ! ತಾನು ಆಫೀಸಿನ ಎಲ್ಲರೊಡನೆ ಒಳ್ಳೆಯ ರೀತಿಲಿ ಪರಿಗಣಿಸಬೇಕೆಂದು ಸತತವಾಗಿ ದುಡಿದನು. ಹಾಗೆಯೇ ಆಯಿತು ಸಹ.

ಕ್ರಮೇಣ ಬಡ್ತಿಗಳು ಹೆಚ್ಚಾದವು. ತನ್ನ ಸ್ನೇಹಿತರು ಮತ್ತು ಹಳೆಯ ಸಹಪಾಠಿಗಳೊಡನೆ ಸಂಬಳ ಹೋಲಿಸಲು ಶುರುಮಾಡಿದ. ಅವನಿಗೆ ಸಂಬಳವೇನು ಕಡಿಮೆ ಬರುತ್ತಿರಲಿಲ್ಲ... ಆದರೆ ಮನಸ್ಸಿಗೆ ಏನೋ ಒಂದು ರೀತಿಯ ಬೇಸರ. ಸಾಫ್ಟವೇರ್‌ ಕ್ರಮೇಣ ಆಕರ್ಷಣೆ ಕಳೆದುಕೊಳ್ಳುತ್ತಿತ್ತು. ಸಾಲದ್ದಕ್ಕೆ ಪ್ರೋಗ್ರಾಂಗಳಿಗೆ ಕೊನೆಯೇ ಇಲ್ಲ. ಬೇರೆಯವರು ಬರೆದ ಪ್ರೋಗ್ರಾಂ ಓದಲು ಸಿಡಿಸಿಡಿ. ಇಂಥವು ತನ್ನದೊಂದೇ ತೊಂದರೆ ಆಗಿರಲಿಲ್ಲ. ತನ್ನ ಇತರ ಸಿಬ್ಬಂದಿಯವರದು ಇಂಥ ಗೋಳೆ! ತನ್ನ ಕಾಲೇಜಿನಲ್ಲಿ ಪ್ರೋಗ್ರಾಂ ಬರೆದಾಗ ಆಗುತ್ತಿದ್ದ ಸಂತಸ ಈಗಾಗುತ್ತಿರಲಿಲ್ಲ. ಆಗಲಾದರೊ, ಒಂದು ಪ್ರೋಗ್ರಾಂನೊಡನೆ ಕಳೆದ ದಿನಗಳು ಎಷ್ಟು ಸುಂದರ ಎನಿಸುತ್ತಿತ್ತು. ಆದರೆ ಇದನ್ನು ಯಾರೊಡನೆಯೂ ಹೇಳಲೊಲ್ಲ, ಸಾಕಷ್ಟು ಸಂಪಾದಿಸುತ್ತಿದ್ದನಲ್ಲವೆ?

ಒಂದೂವರೆ ವರ್ಷದಲ್ಲಿ ವಿಗೆ ತಾಳಲಾಗಲಿಲ್ಲ. ತನ್ನ ಮೇಲಾಧಿಕಾರಿಯಾಡನೆ ಕೊರಗಲಾರಂಭಿಸಿದನು. ತನ್ನ ಕೆಲವು ಇತರ ಸಹೋದ್ಯೋಗಿಗಳು ಬೇರೆ ಕಂಪನಿಗಾದರೂ ಸೇರಿದ್ದರು ಅಥವಾ ಅಮೇರಿಕೆಗೆ ಹಾರಿದ್ದರು. ಆ ಮೇಲಾಧಿಕಾರಿಗೆ ಇದೇನು ಹೊಸದಲ್ಲ. ಹಸಿದಾಗ ಬಡಿಸಿದಂತೆ, ವನ್ನೂ ಸಹ ಅಮೇರಿಕೆಗೆ ಕಳಿಸಲಾಯಿತು. ವಿನ ರೋಷ ಸ್ವಲ್ಪ ತಣ್ಣಗಾಯಿತು. ಹೃದಯದ ಯಾವುದೋ ಒಂದು ಕಡೆ ಇವನಿಗೂ ಇಲ್ಲಿಗೆ ಬರುವ ಆಸೆ. ಆ ಸಮಯ ಕೊನೆಗೂ ಬಂದೊದಗಿತ್ತು. ಇಲ್ಲಿಗೆ ತನ್ನದೇ ಸಾಮರ್ಥ್ಯದಿಂದ ಎಂದು ತಿಳಿದಿತ್ತು ಬಾವಿಯ ಕಪ್ಪೆ.

ಒಬ್ಬನೇ ಇರಲು ಹಣ ಹೆಚ್ಚಾಗುತ್ತೆಂದು ತನ್ನ ಆಫೀಸಿನವರನ್ನೆ ಮನೆಯಲ್ಲಿ ಸೇರಿಸಿಕೊಂದ. ಸಂಪ್ರದಾಯಸ್ಥ ಮನೆಯಲ್ಲಿ ಕಟ್ಟಿ ಹಾಕಿದವನಂತೆ ಇದ್ದವನಿಗೆ ಹಾರಲು ಹೇಳಿಕೊಟ್ಟಂತಿತ್ತು. ಅಮೇರಿಕೆಯ ಸಂಸ್ಕೃತಿಯಂತೆ ತಾನೂ ಎಲ್ಲವನ್ನೂ ಪರೀಕ್ಷೆ ಮಾಡತೊಡಗಿದ. ಅವು ಅಭ್ಯಾಸಗಳಾದವು. ವಾರಾಂತ್ಯದಲ್ಲಿ ಮಾತ್ರ ಸಂತಸದ ಸಮಯ, ಕುಡಿದು ಬಿದ್ಕೊಂಡು. ಒಂದು ವಾರ ತಪ್ಪಿದರೆ, ಮುಂದಿನ ವಾರಾಂತ್ಯದವರೆಗೆ ಕಾಯಬೇಕು! ಪಾಪ.

ಅಲ್ಲಿನ ಕ್ರಮಬದ್ಧತೆ ವಿಸ್ಮಯ ಮಾಡಿತ್ತು. ಈಗ ಹೆಚ್ಚು ಶ್ರಮ ಪಡಬೇಕಿರಲಿಲ್ಲ. ಸಹೋದ್ಯೋಗಿಗಳೊಡನೆ ವರ್ತನೆ, ತನ್ನ ಮೆಲಾಧಿಕಾರಿಯನ್ನು ಓಲೈಸುವುದು ಮುಖ್ಯವಾಗಿತ್ತು. ಆರು ತಿಂಗಳ ನಂತರ ವನ್ನು ಬೆಂಗಳೂರಿಗೆ ವಾಪಸು ಕಳುಹಿಸಲಾಯಿತು, ಚಾಕಲೇಟಿನ ಡಬ್ಬಿಗಳೊಂದಿಗೆ. ಹಿಂದಿನ ಬಾರಿ ಶ್ಯಾಮ, ರಘು ತಂದ ಚಾಕಲೇಟ್‌ಗಳೆ ತಂದಿದ್ದನ್ನು ಕಂಡು ಆಫೀಸಿನವರು ಬೇಸರಗೊಂಡರು.

ಮರಳಿ ಬಂದ ಕೆಲ ದಿನ ತೇಲುತ್ತಿದ್ದರು ರಾಯರು! ಯಾವಾಗಲೂ ‘ಅಲ್ಲಿ’ಯ ವಿವರಗಳು. ಗೆ ಆಫೀಸ್‌ನಲ್ಲಿ ಬಡ್ತಿ ಸಿಕ್ಕಿತು. ಈಗ ಆತ ಕಿರು-ಮುಖ್ಯಸ್ಥನಾಗಿದ್ದ. ಕಲಿಯಲು, ಪ್ರಯೋಗ ಮಾಡುವ ತವಕ ಸತ್ತೇ ಹೋಗಿತ್ತು. ತಾನು ಓದುವಾಗ ಕಲಿತ ವಿಷಯಗಳು ಈಗ ಉಪಯೋಗಕ್ಕೆ ಬಾರವು. ಸಾಧಕನೆಂದರೆ ಹೆಚ್ಚು ಹೊಣೆ, ಜಾಸ್ತಿ ಮಾತು, ಒಳ್ಳೆ ವಸ್ತ್ರ! ಪ್ರೋಗ್ರಾಂಗಳ ಬಗ್ಗೆ ಈಗ ಜಾಸ್ತಿ ಕಿರಿಕಿರಿಯಿಲ್ಲ. ಏನೋ ಮಾತನಾಡಿ ಯಾಮಾರಿಸಲು ಕಲಿತಿದ್ದ .

ಅಮೇರಿಕೆಯಿಂದ ಬಂದವರೊಡನೆ ಮಾತ್ರ ತನ್ನ ಇಂಗ್ಲಿಷ್‌ ಭಾಷಾವ್ಯೆಖರಿ ಬದಲಾಗುತ್ತಿತ್ತು. ಭೂಮಿಯ ಮತ್ತೊಂದು ತುದಿಯನ್ನ ಮುಟ್ಟಿ ಬಂದ ಸಾಹಸಿಯಂತೆ ಬದಲಾಗಿದ್ದ. ಅವನಿಗೆ ಅಂತರರಾಷ್ತ್ರೀಯ ಸುದ್ದಿಗಳು ಮಾತ್ರ ಸುದ್ದಿಗಳು! ಬೆಂಗಳೂರಿನಲ್ಲಿ ತೀರ ವಾಹನಗಳು, ಸಾಲದ್ದಕ್ಕೆ ಧೂಳು, ಆಟೋದವರು ಮೋಸಗಾರರು, ಬಸ್‌ಗಳು ಸರಿಯಿಲ್ಲ ಎಂದು ಒಂದು ಹೊಸ ಕಾರ್‌ ಖರೀದಿಸಿದ. ಅವನ ಅಪ್ಪ-ಅಮ್ಮನಿಗಂತೂ ಖುಷಿಯೋ ಖುಷಿ. ಅವನಿಗೆ‘ಸೀನಿಯರ್‌ ಸಾಫ್ಟೆವೇರ್‌ ಇಂಜಿನಿಯರ್‌’ ಎಂಬ ಬಿರುದು ಬಂದಾದ ಮೇಲೆ, ಮದುವೆಯ ಆಫರ್‌ಗಳು ಹೆಚ್ಚಿದವು.

ಪಾಶ್ಚಾತ್ಯ ಸಂಗೀತ ಗೆ ಇಷ್ಟವಾಯಿತು. ಭಾರತೀಯ ಸಂಗೀತ ಕಾಲಚಕ್ರದಲ್ಲಿ ಹಿಂದೆ ಬಿದ್ದಿದೆ ಎಂದೇ ಅವನು ವಾದಿಸುತ್ತಿದ್ದ. ವಿಗೆ ಈಗ ಎಳೆ ತರಕಾರಿಗಳು ಮಧ್ಯಾಹ್ನದ ಊಟಕ್ಕೆ ಪ್ರಿಯವಾದವು. ನೂಡಲ್ಸ್‌ ಅನ್ನು ಕಡ್ಡಿಗಳಿಂದ ತಿನ್ನಲೂ ಕಲಿತಿದ್ದ(ಹೇಳಿಕೊಟ್ಟರೇ, ಅನ್ನವನ್ನೂ ಹಾಗೆ ತಿನ್ನುತ್ತಿದ್ದನೋ ಏನೊ!). ಅವನಿಗೆ ಪೆಪ್ಸಿ, ಕೊಕ್‌ ಇಷ್ಟದ ಪಾನೀಯಗಳಾಗಿದ್ದವು.

ಹೊರ ದೇಶದಿಂದ ಬಂದವರಿಗೆ ರುಚಿರುಚಿ ಪೀಜಾ ತಿನ್ನಿಸುವುದು ಆತನಿಗೆ ಖುಷಿಯ ಸಂಗತಿ. ಬೆಂಗಳೂರು ನಗರದ ಕುಂದುಕೊರತೆ ಬಗ್ಗೆ ಬಂದವರ ಮುಂದೆ ಗೊಣಗುವುದು ಇದನಿಗೆ ಸಾಮಾನ್ಯವೆನಿಸಿತ್ತು.

ತನ್ನ ಆಫೀಸಿನ ತಂಪು ಬೆಳಕಿನ ಕೆಳಗೆ ಕೂತ ಅವ ಕುರುಡನಾದ. ತನ್ನ ಆತ್ಮ, ಮನಸ್ಸು ತನ್ನಿಂದ ಹೇಗೆ ಬೇರ್ಪಡಿಸಲಾಗಿದೆ ಎಂಬುದು ಅವನಿಗೆ ತಿಳಿಯದು. ಐಟಿ ಇಂಥವರನ್ನೇ ನಂಬಿ ಬದುಕಿದೆ. ಅದು ಯಾವಾಗ ತತ್ತರಿಸುತ್ತೋ ಗೊತ್ತಿಲ್ಲ!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X