ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲವು

By Staff
|
Google Oneindia Kannada News


ಮುಸ್ಸಂಜೆಯ ಹೊತ್ತಲ್ಲಿ ಸುಂಟರಗಾಳಿಯೆದ್ದಿರುವ ಪಾರ್ಕಿನ ಒಂದು ಮರದ ಕೆಳಗೆ ಸೆರಗು ಹೊದ್ದುಕೊಂಡು ನಿಂತಿದ್ದಾಳೆ ಒಬ್ಬ ಹುಡುಗಿ. ಅವಳ ಸುತ್ತ ಧೂಳು, ತರಗೆಲೆ, ಕಾಗದದ ಚೂರು, ಕಸಕಡ್ಡಿ ಗಿರಗಿಟ್ಟಲೆ ತಿರುಗುತ್ತಿವೆ. ತುಸು ದೂರದಲ್ಲಿರುವ ಮಹಡಿಮನೆಗಳು ಅವಳನ್ನು ಇರಿದುಬಿಡುವಂತೆ ದಿಟ್ಟಿಸಿ ನೋಡುತ್ತಿವೆ. ಗಾಳಿಯಿಂದ ಕೆದರಿಹೋಗಿರುವ ಕೂದಲನ್ನು ಸವರಿಕೊಳ್ಳುತ್ತ, ಹತ್ತು ಕಡೆ ಕಣ್ಣು ತಿರುಗಿಸುತ್ತ ಅವಳು ಕಾಯುತ್ತಿದ್ದಾಳೆ.

ಊರಿನ ಇನ್ನೊಂದು ಕೊನೆಯಲ್ಲಿರುವ ಪುಟ್ಟದೊಂದು ಹೋಟೆಲಿನ ಗಾಳಿಯಾಡದ ಕೋಣೆಯಲ್ಲಿ ಒಬ್ಬ ಹುಡುಗ ಸಿಗರೇಟು ಸೇದುತ್ತ ಕೂತಿದ್ದಾನೆ. ಎದುರಿಗೆ ಖಾಲಿಮಾಡಿಟ್ಟಿರುವ ಕಾಫಿ ಲೋಟಗಳ ಮೇಲೆ ನೊಣಗಳು ಗುಂಯೆನ್ನುತ್ತಿವೆ. ಅವನು ಕಾರುತ್ತಿರುವ ಸಿಗರೇಟಿನ ಹೊಗೆ ಕೋಣೆಯನ್ನು ಮಬ್ಬುಗೊಳಿಸಿ ಹುಡುಗಿಯ ರೂಪರೇಷೆಯನ್ನು ಕೊರೆದಿಡುತ್ತಿದೆ.

S. Diwakar, Chennaiನಿಂತೂ ನಿಂತೂ ಬೇಸತ್ತ ಹುಡುಗಿ ಮರಕ್ಕೆ ಒರಗಿಕೊಳ್ಳುತ್ತಾಳೆ. ಅವಳ ಮುಖ ಇದ್ದಕ್ಕಿದ್ದಂತೆ ಬಿಳಿಚಿಕೊಳ್ಳುತ್ತದೆ. ತುಟಿಗಳು ಕಂಪಿಸುತ್ತವೆ. ಹುಡುಗನ ಮುಖ ಹೋಟೆಲಿನ ಕನ್ನಡಿಯಾಂದರಲ್ಲಿ ಫಳಕ್ಕನೆ ಮಿಂಚಿದ ಹಾಗೆ, ಅವನ ಸಿಗರೇಟಿನ ಹೊಗೆ ತನ್ನನ್ನು ಸುತ್ತಿಕೊಂಡ ಹಾಗೆ, ಅವನ ಕೈ ತನ್ನ ಕೋಮಲ ಕೆನ್ನೆಯನ್ನು ಸವರಿದ ಹಾಗೆ, ಅವನ ಕಣ್ಣು ಸಮುದ್ರದಾಳವನ್ನು ಪ್ರತಿಫಲಿಸಿದ ಹಾಗೆ ಏನೇನೋ ಕನಸು.

ಹುಡುಗ ಮೇಲೆದ್ದವನೇ ಅವಳ ಪರಿಮಳದಿಂದ ಮತ್ತೇರಿದವನಂತೆ ತೂಗುತ್ತಿರುವಾಗ ಅವನ ತಲೆಯಲ್ಲಿ ಪಿಸುಮಾತುಗಳು ಹಣ್ಣಾಗುತ್ತವೆ. ಅವಳ ತುಟಿ ತನ್ನ ಬೆನ್ನನ್ನು ಸೋಕುತ್ತಿರುವಂತೆ, ಅವಳ ಬೆರಳು ತನ್ನ ಕೂದಲನ್ನು ಹಿಡಿದ ಇಕ್ಕಳವಾದಂತೆ ಅನ್ನಿಸಿ ಅಲ್ಲಿಂದ ಒಂದೊಂದೇ ಹೆಜ್ಜೆಯಿಡುತ್ತ ಮುನ್ನಡೆಯುತ್ತಾನೆ.

ಹುಡುಗಿ ತನ್ನ ಸೀರೆಯ ನಿರಿಗೆ ಸರಿಪಡಿಸಿಕೊಳ್ಳುತ್ತಾಳೆ. ಮೌನ ಅವಳ ಪಕ್ಕೆಲುಬನ್ನು ಅಪ್ಪಿಕೊಳ್ಳುತ್ತದೆ. ಹುಡುಗನ ಮುಖವನ್ನು, ಅವನ ನೋವಿನ ಕಣ್ಣನ್ನು ನೆನಪಿಸಿಕೊಳ್ಳಲು ಹೆಣಗುತ್ತಾಳೆ. ಉಗುರು ಕಚ್ಚುವ ನೆಪದಲ್ಲಿ ಬೆರಳು ಕಚ್ಚಿಕೊಳ್ಳುತ್ತಾಳೆ. ಟಪ್ಪೆಂದು ಬಿದ್ದ ಒಂದು ಹನಿ ರಕ್ತದಲ್ಲಿ ಅವನ ವೇದನೆ ಉಸಿರಾಡುತ್ತದೆ.

ಆಗಲೇ ರಾತ್ರಿಯಾದ ಕತ್ತಲನ್ನು ಬಗೆಯುತ್ತ, ಇದಿರು ನುಗ್ಗುತ್ತಿರುವ ಗಾಳಿಯನ್ನು ಗುದ್ದುತ್ತ, ಬೆನ್ನಹುರಿಯುದ್ದಕ್ಕೂ ಹರಿಯುತ್ತಿರುವ ಪಿಸುಮಾತನ್ನು ಆಲಿಸುತ್ತ ನಡೆಯುತ್ತಾನೆ ಹುಡುಗ. ಹಾಸಿಗೆಯ ಉದ್ದಗಲ ಅವಳ ಬಿಳಿಯ ಮೈ ಹರಡಿಕೊಂಡಂತೆ, ಅವಳ ನುಣುಪುಗೂದಲು ತನ್ನ ಮುಖ ಮುಚ್ಚಿದಂತೆ, ಎರಡು ದೇಹಗಳ ನರನಾಡಿಗಳಲ್ಲಿ ಮಿಂಚು ಮಿಂಚಿದಂತೆ ಕಲ್ಪಿಸಿಕೊಳ್ಳುತ್ತ ಬೇಗ ಬೇಗ ಹೆಜ್ಜೆಯಿಡುತ್ತಾನೆ.

ಹುಡುಗಿ ಈಗೊಂದು ಪ್ರತಿಮೆ. ಅವಳ ನಿಶ್ಚೇಷ್ಟಿತ ಮೈ ನೆಲದ ಮೇಲಿರಿಸಿದ ಒಂದು ಕಲ್ಲು. ಸರಿದ ಸೆರಗಿನಿಂದ ಇಣಿಕುತ್ತವೆ ಕಣ್ಣು ಕಾಣದ ಎರಡು ಗುಬ್ಬಚ್ಚಿಗಳು. ನೆಲಕ್ಕೆ ಬೀಳುತ್ತಿರುವ ನಕ್ಷತ್ರಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವ ಗಾಳಿಯನ್ನೇ ನೋಡುತ್ತ್ತಿವೆ ಅವಳ ಗಾಜಿನ ಕಣ್ಣು.

ಈಗ ಓಡುತ್ತಿರುವ ಹುಡುಗ ಚಂದ್ರನಿಲ್ಲದ ರಾತ್ರಿಯ ಒಂದು ನೆರಳು. ಹುಡುಗಿಯ ಮೈಯಲ್ಲಿ ಒಂದಾಗುವ, ಅವಳ ಉಸಿರಿನಲ್ಲಿ ಬಿಸಿಯಾಗುವ, ಅವಳ ಉದ್ದ ಬೆರಳುಗಳ ಸ್ಪರ್ಶಕ್ಕೆ ಗುರಿಯಾಗುವ ಹಂಬಲದಿಂದ ಓಡುತ್ತಲೇ ತೊಟ್ಟ ಅಂಗಿಯನ್ನು ಕಳಚಿ ಎಸೆಯುತ್ತಾನೆ. ತಕ್ಷಣ ಎಲ್ಲಿಂದಲೋ ಬಂದ ಇಲಿಯಾಂದು ಆ ಅಂಗಿಯಾಳಕ್ಕೆ ನುಸುಳಿಕೊಳ್ಳುತ್ತದೆ. ಫಳಫಳವೆನ್ನುವ ಆ ಅಂಗಿಯ ಗುಂಡಿಯಲ್ಲಿ ಅವನ ಮತ್ತು ಅವಳ ಮುಖ ಅಚ್ಚೊತ್ತಿದಂತೆ ಕಾಣಿಸುತ್ತವೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X