ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗಿಂಗ್‌ ಷೂಸ್‌

By Staff
|
Google Oneindia Kannada News

*ಕೋಡಿಬೆಟ್ಟು ರಾಜಲಕ್ಷ್ಮಿ

Time is up... No walkingಮುತ್ತಿನಂಥ ಮಕ್ಕಳಿಬ್ಬರೂ ಎದೆಯೆತ್ತರಕ್ಕೆ ಬೆಳೆಯುತ್ತಿರುವಾಗಲೇ ಹೆಂಡತಿ ಈ ಲೋಕ ಬಿಟ್ಟುಬಿಟ್ಟಳು.

ಮಕ್ಕಳಿಬ್ಬರೂ- ಅಪ್ಪನೂ ಒಳ್ಳೆ ಗೆಳೆಯರು...
ಅಮ್ಮ ತೀರಿಕೊಂಡಾಗ, 17ರ ಮಗಳಿಗೆ ಮದುವೆ ಮಾಡಿ ಮನೆ ಅಳಿಯನ ತರಬೇಕು, ಅಥವಾ 21 ವರ್ಷದ ಮಗನಿಗೆ ಮದುವೆ ಮಾಡಿ ಮನೆಗೆ ಮುತ್ತೆೈದೆಯ ತರಬೇಕು ಎಂಬುದು ಅಪ್ಪನ ಲೆಕ್ಕಾಚಾರ.
ಅಪ್ಪನಿಗೆ ಮದುವೆ ಮಾಡಿಸಬೇಕೆನ್ನುವುದು ಮಗ- ಮಗಳ ಲೆಕ್ಕಾಚಾರ.
ಮಕ್ಕಳು ಗೆದ್ದರು.

ಓದನ್ನೇ ನೆಚ್ಚಿಕೊಂಡ ಮಕ್ಕಳು ದೊಡ್ಡ ದೊಡ್ಡ ಡಿಗ್ರಿಯ ಪರೀಕ್ಷೆ ಕಟ್ಟಿ ಜಾಣರಾಗುತ್ತಿದ್ದರು.

ಮಗ-ಮಗಳ ಸಾಕಲು ಮರು ಮದುವೆಯಾಗಿದ್ದ ಅಪ್ಪ ಶಾನೆ ಹೆಣಗಿದ್ದ : ಇತ್ತ ಮಕ್ಕಳಿಗೆ ನೋವಾಗದಿರಲಿ ಎಂದು, ಅತ್ತ ಹೊಸ ಹೆಂಡತಿಗೆ ಒಂಟಿ ಅನಿಸದಿರಲಿ ಅಂತ. ಅವಳಿಗೂ ತನ್ನದೇ ಒಂದು ಸ್ವಂತ ಕುಡಿ ಬೇಕೆನ್ನುವ ಆಸೆ ನುಸುಳದಿರಲಿ ಎಂಬಷ್ಟು ಸೂಕ್ಷ್ಮವಾಗಿ.

ಬದುಕಿನಲ್ಲಿ ಮತ್ತೆ ತಂಗಾಳಿ. ಎಲ್ಲವೂ ಚೆನ್ನಾಗಿದೆ.

ಆದರೆ ಹಾಗೇ ನಡೆಯಬೇಕಲ್ಲ ... ಏರಿಳಿತವಿಲ್ಲದಿರುವುದು ಸಾಧ್ಯವಾ ?
ಮಗನ ಕಾರು ಲಾರಿಗೆ ಗುದ್ದಿತು. ಸ್ಪಾಟ್‌ ಡೆತ್‌. ನೊಂದ ಅಪ್ಪ ಅಳಲಿಲ್ಲ. ಕೊರಗಿದ.
ಇರಿಯುವ ಮೌನದಲ್ಲೇ ಹಣ್ಣಾದ. ಮಗನ ಫ್ಯೂನರಲ್‌ ಸೆರೆಮನಿ.
ಅಪ್ಪನಿಗೆ ಮಾತನಾಡಬೇಕೆನಿಸಿತು. ಮಾತನಾಡುತ್ತ ದುಃಖ ಹರಿಯಿತು. ಸೇ ಹಾಯ್‌ ಟು ಯುವರ್‌ ಮದರ್‌... ಐ ವಿಲ್‌ ಫಾಲೋ ಯೂ ಸೂನ್‌..... ಕಾಫಿನ್‌ ಅನ್ನು ಮುಚ್ಚಿದರು.

ಅಪ್ಪನ ಮನಸ್ಸಿನಲ್ಲಿ ಆತ್ಮಹತ್ಯೆ. ಗೆಳತಿಯಂಥ ಮಗಳಿಗೆ ಅದು ಅರ್ಥವಾಯಿತು. ಮಗಳ ಸಂಶಯಕ್ಕೆ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಅಂತ ಸುಳ್ಳು ಹೇಳಲಿಲ್ಲ . ಮಗಳು ಚರ್ಚೆಗಿಳಿದಳು. ಚರ್ಚೆಯಲ್ಲಿ ಗೆದ್ದಳು. ಮಗಳ ಪ್ರೀತಿ ಕಂಡು ಅಪ್ಪ ನಿರ್ಧಾರ ಬದಲಿಸಿದ. ನಿನ್ನ ಪ್ರೀತಿಯ ಬಿಟ್ಟು ಹೋಗುವ ಧೈರ್ಯವೆಲ್ಲಿ ... ಎಂದು ಅವಳ ಪ್ರಶ್ನಿಸಿದ.

ಮರುದಿನ ಬೆಳಗು. ಯಾರಿಗೆ ಏನಾದರೂ ನಿತ್ಯ ವಿಧಿಗಳು ನಡೆಯಬೇಕಲ್ಲ . ಅಪ್ಪನ ಬೇಜಾರು ಮರೆಸಲು ಮಗಳು ಜಾಗಿಂಗ್‌ಗೆ ರೆಡಿಯಾದಳು. ಅಪ್ಪನೂ ತನ್ನ ಕೋಣೆಯಲ್ಲಿ ರೆಡಿಯಾಗುತ್ತಿದ್ದ. ಅಪ್ಪ ರೆಡಿಯಾಗಲು ಕಾದಳು. ಕಾಯುತ್ತಲೇ ಇದ್ದಳು. ಅಪ್ಪ ಬರಲಿಲ್ಲ ...

ಛೇ... ಹೊತ್ತು ಮೇಲೇರಿತು ಬಾರಪ್ಪಾ... ಲೆಟ್‌ ಅಸ್‌ ಸೀ ಸನ್‌ ರೈಸ್‌....ಸದ್ದಿಲ್ಲ.

ಅಪ್ಪನ ಕೋಣೆಗೆ ನುಗ್ಗಿದಳು.
ಅಪ್ಪ ನೆಲದ ಮೇಲಿದ್ದ. ಒಂದು ಕಾಲಿನಲ್ಲಿ ಜಾಗಿಂಗ್‌ ಶೂಸ್‌....

ಈ ಕಥೆಯ ಕುರಿತು ನಿಮಗೆ ಏನನ್ನಿಸಿತು ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X