ಅವಳ ಕಂಗಳು : ಹವ್ಯಾಸಿ ಲೇಖಕ ಬರೆದ ಪ್ರೇಮ ಕವನ

ಭೂ ಲೋಕಕೆ ಬಂದೆಯಾ ಅಪ್ಸರೆ
ನನ್ನ ಪ್ರೀತಿಯಲ್ಲಿ ಮಾಡ್ತೀನಿ ನಿನ್ನ ಸೆರೆ
ಎಲ್ಲೂ ಹೋಗದಿರು ನನ್ನ ಬಿಟ್ಟು
ಹೋಗುವುದಾದರೆ ಹೋಗು ನನ್ನ ಸುಟ್ಟು

ನೀ ನಡೆದರೆ ಜಿಂಕೆಯಂತೆ
ನೀ ಕುಣಿದರೆ ನವಿಲಿನಂತೆ
ನೀ ನುಡಿದರೆ ಕೋಗಿಲೆಯಂತೆ
ನೀ ನನಗಂತ ಬರೆದಾಗಿದೆಯಂತೆ

ನಿನ್ನ ಕಂಗಳು ಪ್ರಶಾಂತ ಸಾಗರದಂತೆ
ಆ ನಿನ್ನ ನೋಟ ಬೆಳದಿಂಗಳ ಚಂದ್ರನಂತೆ
ಈ ಕಂಗಳೇ ನನಗೆ ದಾರಿ ದೀಪದಂತೆ
ನೀ ಜೊತೆಗೆ ಇರು ನೆರಳಿನಂತೆ [ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

Valentines Day Special : Lover boy and his dreams

ನಿನ್ನ ಕಣ್ಣಲಿದೆ ಏನೋ ಆಕರ್ಷಣೆ

ಇದ ನಂಬು ನೀ ನನ್ನಾಣೆ
ನಿನ್ನ ಕಂಗಳಿಗಿಲ್ಲ ಸರಿಸಾಟಿ
ಅವು ಕೊಡುತಾವೆ ರಂಭೆ ಉರ್ವಶಿಗೂ ಪೈಪೋಟಿ

ನಿನ್ನ ಕಣ್ಣಲ್ಲಿ ಕಾಣ್ತಿದೆ ಮೂರು ಲೋಕ
ನಂಬು ನಾ ಮಾಡ್ತಿಲ್ಲ ಯಾವದೇ ನಾಟಕ
ನಿನ್ನ ಕಂಗಳ ನೋಡಿದ ಯಾವದೋ ಜಿಂಕೆ
ತಲೆ ತಗ್ಗಿಸಿದೆ ಮೂಡಿ ಸೋತೆನೆಂಬ ಶಂಕೆ

ನಿನ್ನ ಕಂಗಳು ಹೊಳೆಯುತಿವೆ ಲಕ-ಲಕ
ಅದನ್ನ ನೋಡಿ ಮಂಕಾದಳು ಮೇನಕ
ಅವಳಿಗೆ ನಿನ್ನ ಕಂಡರೆ ಹೊಟ್ಟೆ ಕಿಚ್ಚು
ಯಾಕೆಂದರೆ ನೀನೆ ಅವಳಿಗಿಂತ ಹೆಚ್ಚು

ನಿನ್ನ ಕಂಗಳ ಹೊಳಪೇ ಸಾಕು
ತರುತ್ತದೆ ಕತ್ತಲೆಯಲು ಬೆಳಕು
ಮಾಡೋಣ ಸ್ವಲ್ಪ ವಿದ್ಯುತ್ ಉಳಿತಾಯ
ನೀ ಮಾಡು ವಿದ್ಯುತ್ ಉಳಿಸಲು ಸಹಾಯ

ನಿನ್ನ ಕಂಗಳ ನೋಡಿದಾಗಿನಿಂದ
ನಿಂತಲೇ ನಿಲ್ಲಲಾಗುತ್ತಿಲ್ಲ ನನ್ನಿಂದ
ಕೇಳುತ್ತಿನಿ ಒಂದು ಸಹಾಯ ನಿನ್ನಿಂದ
ಕೈ ಹಿಡಿದು ಮೇಲೆತ್ತು ಈ ಪ್ರಪಾತದಿಂದ

ನಿನ್ನ ಕಣ್ಣಲಿದೆ ಏನೋ ಸೆಳೆತ
ಕಾಡುತಿದೆ ನನ್ನ ಸತತ
ಕಿತ್ತು ಕೊಳ್ಳಲ್ಲೇ ಆ ನಿನ್ನ ಕಂಗಳನ್ನ
ಚಿನ್ನದ ಮೊಟ್ಟೆಗೆ ಸಾಯಿಸಬಾರದು ಕೋಳಿಯನ್ನ

ನಿನ್ನ ಅಂದ ನೋಡಿದ ನವಿಲು
ನಿಂತಿದೆ ಬಡಿದಂತೆ ಸಿಡಿಲು
ನಿನ್ನ ಚೆಂದ ನೋಡಿದ ಹೂವುಗಳು
ನಿನ್ನಂತೆ ಕಾಣಲು ಮಾಡಿವೆ ಮೇಕ್ಅಪ್-ಗಳು

ನೀ ಬಿಟ್ಕೊಂಡ್ ಬಂದಾಗ ಕೂದಲು
ನಿನ್ನ ನೋಡಲು ನೂಕು ನುಗಲು
ನಿನ್ನ ನೋಡಲು ಕಂಗಳ ಕಾತುರ
ಯಾವಾಗಲು ಇರುವೆಯಾ ನಂಗೆ ಹತ್ತಿರಾ?

ಇನ್ನು ನಿನ್ನ ಹೊಗಳಲೇ
ಅಥವಾ ಸುಮ್ಮನೆ ಇದ್ದು ಬಿಡಲೇ
ತಿಳಿಯುತ್ತಿಲ್ಲ ಏನೊಂದು
ಹೇಳಬಾರದೆ ನೀನೆ ಬಂದು

ನಿನ್ನ ಕಂಗಳ್ಯಾಕೆ ಇಷ್ಟು ಪ್ರಕಾಶ
ಮಾಡಲೇ ಉತ್ತರ ಹುಡುಕುವ ಸಾಹಸ

ಆ ಕಂಗಳ ಪ್ರಕಾಶಕ್ಕೆ ಕಾರಣ
ಅಲ್ಲಿರುವ ಯಾವ್ದೋ ಒಂದು ಬಿಂಬ
ಸರಿಯಾಗಿ ನೋಡಿದಾಗ ತಿಳಿಯಿತು
ವಾಹ್! ಅದು ನನ್ನದೇ ಪ್ರತಿಬಿಂಬ

ಓಹ್ ಆ ಕಂಗಳ ಚೆಲುವಿಗೆ ಕಾರಣ ನಾನಾ
ನಂಗೆ ಗೊತ್ತೇ ಇರಲಿಲ್ಲ ಇದು ಇಷ್ಟು ದಿನ
ಈಗ ತಿಳಿಯಿತು ಆ ಸಿಹಿಯಾದ ನಿಜ
ನನಗೋ ಮಜಾನೋ ಮಜಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+