ದೇಹ ಕೆಂಪಾಯಿತು, ಮನಸು ಕೆಂಪಾಯಿತು, ಎಲ್ಲವೂ ಕೆಂಪುಮಯ

ನಾವು ಎಂತಹ ದಿಕ್ಕಿನತ್ತ ಸಾಗುತ್ತಿದ್ದೇವೆ? ಹುಚ್ಚು ಉನ್ಮಾದ, ಹುಚ್ಚು ಆದರ್ಶ, ಹುಚ್ಚು ಸಿದ್ಧಾಂತದ ಬೆನ್ನು ಬಿದ್ದು ದಿಕ್ಕು ತಪ್ಪುತ್ತಿದ್ದೇವಾ? ಮುಂದೆ ನಾವು ಹೊಂಟ ದಾರಿಯೇ ನಮಗೆ ದಿಕ್ಕು ತಪ್ಪಿಸಬಹುದು, ನಮ್ಮ ಗೊಡ್ಡು ಆದರ್ಶಗಳೇ ನಮಗೆ ಮುಳುವಾಗಬಹುದು. ಆಗೊಂದು ದಿನ, ನಮಗೆ ಬದುಕಲು ಅಗತ್ಯವಾಗಿ ಬೇಕಾದದ್ದೇ ಸಿಗಲಿಕ್ಕಿಲ್ಲ. ಅಷ್ಟರಲ್ಲೇ ಎಚ್ಚೆತ್ತುಕೊಳ್ಳಬೇಕಲ್ಲ? ಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ ಹೀಗೊಂದು ಪದ್ಯ.

Red red, everywhere Red, but no trace of water

ಬೊಗಸೆಯಲ್ಲಿ ಮೊಗೆಮೊಗೆದು
ಕೊಡುತ್ತಿದ್ದ ಅವ ಹೇಳುತ್ತಿದ್ದ;
"ಕುಡಿಯಿರಿ ಕುಡಿಯಿರಿ, ಇನ್ನಷ್ಟು ಮತ್ತಷ್ಟು..."
ಜನರೆಲ್ಲ ಕಂಠಪೂರ್ತಿ ಕುಡಿದರು,
ತಮಗರಿಯದೇ - ಸಮೂಹ ಸನ್ನಿ.
ಸ್ವಲ್ಪಹೊತ್ತಿನಲ್ಲೇ
ದೇಹ ಕೆಂಪಾಯಿತು,
ಮನಸು ಕೆಂಪಾಯಿತು,
ಉಟ್ಟಬಟ್ಟೆ, ತೊಟ್ಟ ತೊಡುಗೆ ತಿಂಡಿ-ತಿನಿಸು
ಅಷ್ಟೇಕೆ ಈ ಭುವಿ ಆ ಬಾನು ಎಲ್ಲಾ ಕೆಂಪಾಯಿತು! ಕೆಂಪಾಗಿಹೋಯಿತು.
ಎಲ್ಲಾ ಕೆಂಪುಮಯ!!
ಆಗ ಕುಡಿಯಲು ನೀರು ಬೇಕೆನಿಸಿತು.
ಒಹ್! ನೀರು ಬೇಕು, ಯಕಶ್ಚಿತ್ ನೀರು,
ಎಲ್ಲಿದೆ ಅಲ್ಲಿ?

ಎಲ್ಲವೂ ಕೆಂಪುಮಯ...!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+