ಪ್ರತಿ ಬಾರಿ ಕಾಲದ ಗರ್ಭದಲಿ ಹುಟ್ಟುವುದು ಹೊಸದೊಂದು ಪಕ್ಕಿ!
ಹೊಸ ವರ್ಷ
ಕಚೇರಿಯಲ್ಲಿ
ಆಚರಿಸಿದ
ಹೊಸ ವರ್ಷದ
'Bar'tyಯಲ್ಲಿ
ಅವ ಕುಡಿದಿದ್ದು
ಮಾತ್ರ ಒಂ'tea'!
***
ಸಂಭ್ರಮದ ನೃತ್ಯ
ಗಡಿಯಾರದ ಮುಳ್ಳು
ಹನ್ನೆರಡು ತೋರಿಸುವಾಗ
ವಿಶೇಷವೆನಿಸುವುದಿಲ್ಲ
ದಿನ ನಿತ್ಯ
ನವ ವರ್ಷದ ರಾತ್ರಿ
ಕಾಲಿಟ್ಟೊಡನೆ
ಗಂಟೆ -ಮಿನಿಟಿನ
ಮುಳ್ಳುಗಳೂ ಮಾಡಿದವು
ಸಂಭ್ರಮದ ನೃತ್ಯ!

***
ಅಜ್ಜ-ಅಜ್ಜಿ
ಮಧ್ಯ ರಾತ್ರಿಗೆ
ಬೀದಿಯಲ್ಲಿ ಜೋರಾಯಿತು
ಪಟಾಕಿಗಳ ಸದ್ದು
ಹ್ಯಾಪಿ ನ್ಯೂ ಇಯರ್
ಎಂಬ ಕೂಗು
ಜೋರು ನಿದ್ದೆಯಲ್ಲಿದ್ದ
ಅಜ್ಜ -ಅಜ್ಜಿ
ಗೊಣಗುತ್ತಾ
ಗಟ್ಟಿಯಾಗಿ ಹೊದ್ದು
ಮಲಗಿದರು ರಗ್ಗು!
***
ನಾಂದಿ
ಹೊಸ ವರ್ಷಕ್ಕೆ
ಹಾಡುತಿದ್ದಾರೆ ನಾಂದಿ
ಅದಕ್ಕೇ
ಕೈಯಲ್ಲಿ ಬೀರು, ವಿಸ್ಕಿ ಬ್ರಾಂದಿ!
***
ಬದಲಿಸಿದ್ದು
ಕಳೆದ ವರ್ಷದ ನನ್ನ
ರೆಸಲ್ಯೂಶನ್ 'ಪಟ್ಟಿಯನ್ನು
ಬದಲಿಸಿ ಮಾಡಿದ್ದೇನೆ
ಈಗ ಠಾಕು -ಠೀಕು
ಹೆಚ್ಚೇನಿಲ್ಲ ನಾ
ಬದಲಿಸಿದ್ದು
ಬರೀ ಅದರ ತಾರೀಖು!
***
ಪಾರ್ಟಿ ಮೂಡ್
ಹಾಕಿಕೊಂಡರೆಲ್ಲ
ಉತ್ಸಾಹದಲಿ
ಹಬ್ಬ -ಹುಣ್ಣಿಮೆ
ಹುಟ್ಟು ಹಬ್ಬ
ವರ್ಷದ ರಜೆಗಳ
remindarಉ
ಪಾರ್ಟಿ ಮೂಡಿನಿಂದ
ಹೊರಗುಳಿದಿದ್ದು ಮಾತ್ರ
ಹಳೆ ಕ್ಯಾಲೆಂಡರು!
***
ಹದಿ ಹರೆಯ
ಹದಿನೆಂಟು
ತುಂಬಿದೊಡನೆ
ಅವನಿಗನಿಸಿತು
ಖಾತ್ರಿ
ಡಿಸೆಂಬರ್
ಮೂವತ್ತೊಂದರ
ಮಧ್ಯ ರಾತ್ರಿ
ಇನ್ನುಮುಂದೆ
ತನಗೆ
'ಮದ್ಯ' ರಾತ್ರಿ !
***
ಜೀವನದ ಲೆಕ್ಕಾಚಾರ
ಅಂದುಕೊಂಡೆ
ವರ್ಷಪೂರ್ತಿ
ನೆಮ್ಮದಿಯಾಗಿರಲು
ಸಕಾರಾತ್ಮಕ
ಯೋಚನೆಗಳನ್ನು ಕೂಡಿಸಿ
ನಾಕಾರತ್ಮಕ ಚಿಂತೆಗಳನ್ನು
ಕಳೆಯುವ ಲೆಕ್ಕಾಚಾರ
ಮಾಡಿದರಷ್ಟೇ ಸಾಕು
ಆದರೇನು ಮಾಡಲಿ
ಗಣಿತದಲ್ಲಿ ನಾ ಬಲು ವೀಕು!
***
ಬೇಗ ಬರಲಿ
ಯಜಮಾನರು
ಎಚ್ಚರಿಸಿದರು
ಮತ್ತೆ ಹೊಸವರ್ಷ
ಬರುವವರೆಗೂ
ನನ್ನ ತೂಕವಿಳಿಸುವ
ಯೋಜನೆ
ಜಾರಿಯಲ್ಲೆ ಇರಲಿ
ಆತಂಕದಲ್ಲಿ
ಬೇಡಿಕೊಂಡೆ
ಯುಗಾದಿ ಈ ಬಾರಿ
ಜನವರಿಯಲ್ಲೇ ಬರಲಿ !
***
ಹೊಸ ವರುಷ
ಪ್ರತಿ ಬಾರಿ
ಕಾಲದ ಗರ್ಭದಲಿ
ಹುಟ್ಟುವುದು
ಹೊಸದೊಂದು ಪಕ್ಕಿ
ಸಿಹಿ -ಕಹಿ
ನೋವು ನಲಿವು
ಗೂಡಿನಲ್ಲಿಟ್ಟು
ವರುಷ ಒಂದರಲ್ಲೆ
ಹಾರಿ ಹೋಗುವ ಹಕ್ಕಿ!
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications